ನಿಮಗೂ ಶಾಪಿಂಗ್ ಕ್ರೇಜ್ ಇದೆಯೇ..? ಹಾಗಾದರೆ ದಯವಿಟ್ಟು ಇದನ್ನೊಮ್ಮೆ ಓದಿಬಿಡಿ ..!

ಈ ಸುದ್ದಿಯನ್ನು ಶೇರ್ ಮಾಡಿ

Shoping--01

ಇದು ಜೆಟ್ ಯುಗ. ಕ್ಷಣಾರ್ಧ ದಲ್ಲೇ ನಿಮಗಿಷ್ಟ ಬಂದ ವಸ್ತುವನ್ನು ಎಲ್ಲೆಂದರಲ್ಲಿ ಖರೀದಿಸಬಹುದು. ಕ್ರೆಡಿಟ್ ಕಾರ್ಡ್‍ಗಳು, ಸುಲಭ ಸಾಲಗಳು, ಇಎಂಐ ಮತ್ತು ಹಣದುಬ್ಬರ ಏರುತ್ತಿರುವ ಈ ವಿಶ್ವದಲ್ಲಿ ಜನರು ಸಾಲದ ಸುಳಿಯಲ್ಲಿ ಸಿಲುಕುವುದು ಸಾಮಾನ್ಯ. ನಮ್ಮ ಈ ಜನಸಂಖ್ಯೆಯಲ್ಲಿ ಒಂದು ಗುಂಪಿನ ಜನರು ಒತ್ತಡದ ಖರೀದಿದಾರ ರಾಗುತ್ತಿರುವುದನ್ನು ಗಮನಿಸಬಹುದು. ಇದನ್ನು ಕಂಪಲ್ಸೀವ್ ಶಾಪರ್ ಅಥವಾ ಒನಿಯೋಮೇನಿಯಾಸ್ಕ್ ಎಂದು ಕರೆಯುತ್ತಾರೆ.

ಒನಿಯೋಮೇನಿಯಾ ಸಾಮಾನ್ಯವಾದ ವಿಚಾರವಲ್ಲ. ಸಾಮಾನ್ಯ ಜನಸಂಖ್ಯೆಯ ಶೇ.16ರಲ್ಲಿ ಶೇ.2ರಷ್ಟು ಮಂದಿ ಒನಿಯೋಮೇನಿಯಾದ ವಿವಿಧ ತೀವ್ರತೆಗಳಿಂದ ಬಳಲುತ್ತಿದ್ದು, ಇದು ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಸಾಧಾರಣವಾಗಿರುತ್ತದೆ. ಬಾಲ್ಯಾವಸ್ಥೆ ಮತ್ತು ಕಿಶೋರಾವಸ್ಥೆಗೂ ಮುನ್ನ ಇರದ ಖರೀದಿಯ ಹಪಹಪಿತನ ಯೌವ್ವನಾವಸ್ಥೆಯಲ್ಲಿ ಹೆಚ್ಚಾಗುತ್ತದೆ. ಯೌವ್ವನಾವಸ್ಥೆಯಲ್ಲಿ ಸುಲಭವಾಗಿ ಹಣ ಲಭಿಸುವುದರಿಂದ (ವಾಸ್ತವ ಮತ್ತು ಗಳಿಕೆ ಮೂಲಕ) ಹಾಗೂ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಅವಕಾಶ ಇರುವುದರಿಂದ ಈ ವಯಸ್ಸಿನಲ್ಲಿ ಖರೀದಿ ಜೋರಾಗಿರುತ್ತದೆ.

ಇದು ಸಾಮಾನ್ಯ ನಡವಳಿಕೆ ಎಂದು ಮಾನಸಿಕ ಆರೋಗ್ಯ ತಜ್ಞರಿಂದಲೂ ದೃಢಪಟ್ಟು, ಜನರು ಕೂಡ ಈ ದೋಷ ಹೊಂದಿರುತ್ತಾರೆ. ಇದನ್ನು ಕೇವಲ ನಡವಳಿಕೆ ಎನ್ನುವುದಕ್ಕಿಂತಲೂ ಒನಿಯೋಮೇನಿಯಾವನ್ನು ಒಂದು ರೋಗವೆಂದು ಪರಿಗಣಿಸಲು ಕಾರಣಗಳಿವೆ. ಕೆಲವು ಕಾರಣಗಳನ್ನು ನೀಡಲಾಗಿದೆ:
# ವ್ಯಕ್ತಿಯ ನಡವಳಿಕೆಯ ಅಹಂಭಾವ ಸ್ವರೂಪ (ಅಂದರೆ ಶಾಪಿಂಗ್ ಉಮೇದನ್ನು ವಿಚಾರಹೀನವೆಂದು ಭಾವಿಸುವ ಆತ ಅಥವಾ ಆಕೆ).
# ಹಪಹಪಿತನ, ಬಯಕೆ ಮತ್ತು ತೃಪ್ತಿ ಹೊಂದಿದ ಭಾವನೆ (ನಡವಳಿಕೆ ವ್ಯಸನ).
# ಇತರ ಮಾನಸಿಕ ರೋಗಗಳ ಸಹಯೋಗ (ಹತಾಶೆ, ಜುಲುಮೆ ನಡವಳಿಕೆ, ದೋಷ, ಮಾದಕ ಪದಾರ್ಥ ಬಳಕೆ, ವ್ಯಕ್ತಿತ್ವ ದೋಷಗಳು).
# ಮಾನಸಿಕ ಸಮಸ್ಯೆಗಳ ಕೌಟುಂಬಿಕ ಇತಿಹಾಸ (ಅದೇ ರೀತಿಯ ಅನಾರೋಗ್ಯ, ಭಾವನೆ ದೋಷಗಳು, ವಸ್ತುಗಳ ದೋಷ ಇತ್ಯಾದಿ)
# ಶಾಪಿಂಗ್ ಉಮೇದಿಯ ವಿಷ ವರ್ತುಲ ಹಾಗೂ ಸಂಬಂಧಪಟ್ಟ ದೋಷ ಇದನ್ನು ಅನೇಕ ಸಲ ಅವರ ನಿಯಂತ್ರಣದಿಂದ ಹೊರಗೆ ಕಾಣಲ್ಪಡುತ್ತದೆ.

ಈ ದೋಷವನ್ನು ರೋಗ ನಿರ್ಧಾರ ಮಾಡಿ ಚಿಕಿತ್ಸೆ ನೀಡುವುದು ಸಾಮಾನ್ಯ ಶಾಪಿಂಗ್ ಉಮೇದಿಗಿಂತಲೂ ದೊಡ್ಡ ಸವಾಲಾಗಿದ್ದು, ಹೈಪೋಮೇನಿಯಾ ಅಥವಾ ಮೇನಿಯಾದಂಥ ರೋಗದ ಒಂದು ಭಾಗವಾಗಿ ಅಥವಾ ಶಾಪಿಂಗ್ ಕ್ರೇಜ್ ಇದ್ದರೂ ಅದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬೇಕು. ಒಮ್ಮೆ ರೋಗವನ್ನು ನಿರ್ಧರಿಸಿದ ನಂತರ ಉತ್ತಮ ಚಿಕಿತ್ಸಾ ಫಲಿತಾಂಶಕ್ಕಾಗಿ ವೈಯಕ್ತಿಕ ಧೋರಣೆ ಮುಖ್ಯವಾಗುತ್ತದೆ. ಎರಡನೆಯದಾಗಿ ಔಷಧಿ ಚಿಕಿತ್ಸಾ ನಿರ್ವಹಣೆ, ಕೌಟುಂಬಿಕ ಬೆಂಬಲ ಮತ್ತು ಆಪ್ತ ಸಮಾಲೋಚನೆ, ವೈಯಕ್ತಿಕ ಕಾರ್ಯ, ಅರಿವು ನಡವಳಿಕೆ ಚಿಕಿತ್ಸೆ, ಆರ್ಥಿಕ ಸಲಹಾ ನೀಡಿಕೆಯ ಸಂಯೋಜಿತ ಆಲೋಚನೆಯ ಸಮಗ್ರತಾ ದೃಷ್ಟಿಯ ವಿಧಾನವನ್ನು ಸಹ ತುಂಬಾ ಮುಖ್ಯವೆಂದು ಪರಿಗಣಿಸಲಾಗಿದೆ. ಒನಿಯೋಮೇನಿಯಾದಿಂದ ಯಾರಾ ದರೂ ನರಳುತ್ತಿದ್ದಾರೆ ಎಂದು ಅನಿಸಿದರೆ, ಅವರು ಮಾನಸಿಕ ಆರೋಗ್ಯ ವೃತ್ತಿ ಪರಿಣಿ ತರ ನೆರವು ಕೋರುವಂತೆ ಸಲಹೆ ಮಾಡಿ.

Facebook Comments