ಇಂದು ಕಾವೇರಿ ತೀರ್ಥೋದ್ಭವ, ಇದೆ ಮೊದಲ ಬಾರಿಗೆ ಸಾಕ್ಷಿಯಾಗಲಿದ್ದಾರೆ ಸಿಎಂ

ಈ ಸುದ್ದಿಯನ್ನು ಶೇರ್ ಮಾಡಿ
ಸಾಂಧರ್ಭಿಕ ಚಿತ್ರ
ಸಾಂಧರ್ಭಿಕ ಚಿತ್ರ

ಮಡಿಕೇರಿ ಅ. 17 : ದಕ್ಷಿಣ ಭಾರತದ ಪವಿತ್ರ ನದಿಗಳಲ್ಲೊಂದಾದ ಕಾವೇರಿ ತೀರ್ಥೋದ್ಭವದ ಅಮೃತ ಘಳಿಗೆ ತುಲಾ ಸಂಕ್ರಮಣವಾದ ಇಂದು ಸಂಜೆ 6.43ಕ್ಕೆ ಕೂಡಿ ಬರುವ ಶುಭ ಗಳಿಗೆಯಲ್ಲಿ ತಲಕಾವೇರಿ ತೀರ್ಥಕುಂಡದಿಂದ ತೀರ್ಥೋದ್ಭವವಾಗಲಿದೆ. ಈ ಬಾರಿಯ ವಿಶೇಷವೇನೆಂದರೆ ಇದೆ ಮೊದಲ ಬಾರಿಗೆ ತೀರ್ಟೋದ್ಭವಕ್ಕೆ ಸಿಎಂ ಸಾಕ್ಷಿಯಾಗಲಿದ್ದಾರೆ. ಇಂದು 11 ಗಂಟೆ ಸುಮಾರಿಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಡಿಕೇರಿಗೆ ಭೇಟಿ ನೀಡಲಿದ್ದು ಪ್ರವಾಹ ಸಂತ್ರಸ್ಥರೊಡನೆ ಸಂವಾದ ನಡೆಸಲಿದ್ದಾರೆ. ಬಳಿಕ ಅಧಿಕಾರಿಗಳ ಸಭೆ ನಡೆಸುವ ಮುಖ್ಯಮಂತ್ರಿಗಳು ಸಂಜೆ ವೇಳೆಗೆ ತಲಕಾವೇರಿಗೆ ಭೇಟಿ ಕೊಡಲಿದ್ದು ಕಾವೇರಿ ತೀರ್ಥೋದ್ಭವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಪವಿತ್ರ ತೀರ್ತೋದ್ಭವ ಕಣ್ತುಂಬಿಕೊಳ್ಳುವ ಸಲುವಾಗಿ ನಾಡಿನಾದ್ಯಂತದಿಂದ ಸಾವಿಆರು ಭಕ್ತರು ತಲಕಾವೇರಿಗೆ ಆಗಮಿಸಲಿದ್ದಾರೆ. ಭಕ್ತರನ್ನು ಸ್ವಾಗತಿಸುವ ಹಾಗೂ ಅವರ ಸುರಕ್ಷತೆ ದೃಷ್ಟಿಯಿಂದ ತಲಕಾವೇರಿ ಹಾಗೂ ಭಾಗಮಂಡಲ ಪ್ರದೇಶದಲ್ಲಿ ಸಕಲ ಸಿದ್ದತೆಗಳು ನಡೆದಿದೆ. ಪ್ರವಾಸಿಗರಿಗಾಗಿ ಬಸ್ ವ್ಯವಸ್ಥೆ, ಬ್ಯಾರಿಕೇಡ್ ನಿರ್ಮಾಣ ಹಾಗೂ ವಾಹನ ನಿಲ್;ಉಗಡೆ ವ್ಯವಸ್ಥೆ ಮಡಲಾಗಿದೆ. ಭದ್ರೆಅತೆಯ ಹಿತದೃಷ್ಟಿಯಿಂದ ಸುಮಾರು 600 ಪೋಲೀಸರು ನಿಯೋಜಿಸಲ್ಪಟ್ಟಿದ್ಡಾರೆ.

ಕಾವೇರಿಯು ತೀರ್ಥರೂಪಿಣಿಯಾಗಿ ತುಲಾ ಸಂಕ್ರಮಣದಂದು ಕಾಣಿಸಿಕೊಳ್ಳುತ್ಟಾಳೆ. ಅಂದು ಕಾವೇರಿಗೆ ಪೂಜೆ ಸಲ್ಲಿಸಿ ತೀರ್ಥ ಪಡೆದು ಬಳಿಕ ಪ್ರಸಾದ ವಿತರಣೆ ನಡೆಯುತ್ತದೆ ಎಂದು ತಲಕಾವೇರಿ ದೇವಸ್ಥಾನದ ಅರ್ಚಕ ನಾರಾಯಣಾಚಾರ್ ಹೇಳಿದ್ದಾರೆ. ಜಾತ್ರೆ ಸಿದ್ದತೆ ಪರಿಶೀಲನೆಗೆಂದು ಇಂದು ಜಿಲ್ಲಾಧಿಕಾರಿಗಳಾದ ಪಿ.ಐ. ಶ್ರೀವಿದ್ಯಾ ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಸೋಮವಾರ ಸ್ಥಳಕ್ಕೆ ಆಗಮಿಸಿದ್ದರು.

ಗಂಗಾನದಿಯ ನಂತರ ಪವಿತ್ರವಾದ ನದಿ ಎಂದು ಭಾವಿಸುವ ನದಿಯೇ ಕಾವೇರಿ. ಹಾಗಾಗಿಯೇ ಕಾವೇರಿಯನ್ನು ದಕ್ಷಿಣ ಗಂಗೆ ಎಂದು ಕರೆಯುತ್ತಾರೆ. ದೇವಗುರುವಾದ ಬೃಹಸ್ಪತಿ ತುಲಾರಾಶಿಯಲ್ಲಿ ಪ್ರವೇಶವಾದ್ದರಿಂದ ಕಾವೇರಿ ನದಿಗೆ ಪುಪ್ಕರವು ಪ್ರಾರಂಭವಾಗುತ್ತದೆ. ತಮಿಳುನಾಡು, ಕರ್ನಾಟಕ ರಾಜ್ಯದ ಪ್ರಜೆಗಳು ಕಾವೇರಿ ಪುಷ್ಕರದಲ್ಲಿ ಪುಣ್ಯ ಸ್ನಾನವನ್ನು ಆಚರಿಸಿ ಪುನೀತರಾಗುತ್ತಾರೆ. ನರ್ಮದಾ ನದಿ ತೀರದಲ್ಲಿ ತಪಸ್ಸು, ಕುರುಕ್ಷೇತ್ರದಲ್ಲಿ ದಾನ, ಕಾಶಿಕ್ಷೇತ್ರದಲ್ಲಿ ಮರಣಿಸುವುದರಿಂದ ಉಂಟಾಗುವ ಫಲವು ಕೇವಲ ಪುಷ್ಕರದಲ್ಲಿ ಸ್ನಾನ ಮಾಡುವುದರಿಂದ ಉಂಟಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಖeಚಿಜ moಡಿe ಚಿಣ: hಣಣಠಿs://ಞಚಿಟಿಟಿಚಿಜಚಿ.oಟಿeiಟಿಜiಚಿ.ಛಿom/viಜeos/iಟಿಣeಡಿesಣiಟಿg-ಜಿಚಿಛಿಣs-ಚಿbouಣ-ಡಿiveಡಿ-ಞಚಿveಡಿi-ಥಿou-musಣ-ಞಟಿoತಿ-350988.hಣmಟ

Facebook Comments