ಎನ್‍ಕೌಂಟರ್’ನಲ್ಲಿ ಎಲ್‍ಇಟಿ ಕಮ್ಯಾಂಡರ್ ಸೇರಿ 3 ಉಗ್ರರು ಖತಂ, ಯೋಧ ಹುತಾತ್ಮ

ಈ ಸುದ್ದಿಯನ್ನು ಶೇರ್ ಮಾಡಿ

Encounter
ಜಮ್ಮು, ಅ.16 (ಪಿಟಿಐ)- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಯೋತ್ಪಾದಕರ ಅಟ್ಟಹಾಸ ಮುಂದುವರಿದಿದ್ದು, ಅವರನ್ನು ದಮನ ಮಾಡುವ ಕಾರ್ಯಾಚರಣೆಯನ್ನು ಭದ್ರತಾಪಡೆಗಳು ತೀವ್ರಗೊಳಿಸಿವೆ. ಶ್ರೀನಗರದಲ್ಲಿ ಇಂದು ಮುಂಜಾನೆ ನಡೆದ ಗುಂಡಿನ ಚಕಮಕಿಯಲ್ಲಿ ಲಷ್ಕರ್-ಎ-ತೈಬಾ(ಎಲ್‍ಇಟಿ) ಸಂಘಟನೆಯ ಮೂವರು ಉಗ್ರರನ್ನು ಯೋಧರು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ರಾಜಧಾನಿ ಶ್ರೀನಗರದ ಫತೇಹ್ ಕಡಲ್ ಪ್ರದೇಶದಲ್ಲಿ ಎಲ್‍ಇಟಿ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭಾರತೀಯ ಸೇನಾಪಡೆ ಮತ್ತು ಸಿಆರ್‍ಪಿಎಫ್ ಪಡೆಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆ ಪ್ರದೇಶವನ್ನು ಸುತ್ತುವರಿದಿತ್ತು.

ಇದೇ ಸಂದರ್ಭದಲ್ಲಿ ಅಲ್ಲಿ ಅಡಗಿ ಕುಳಿತಿದ್ದ ಮೂವರು ಉಗ್ರರು ಸೇನಾಪಡೆಗಳ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದಾಗ ಭೀಕರ ಎನ್‍ಕೌಂಟರ್ ನಡೆಯಿತು. ಗುಂಡಿನ ಕಾಳಗಳಲ್ಲಿ ಎಲ್‍ಇಟಿ ಕಮಾಂಡರ್ ಸೇರಿದಂತೆ ಮೂವರನ್ನು ಯೋಧರು ಹೊಡೆದುರುಳಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದಾರೆ ಎಂದು ಶ್ರೀನಗರ ಪೊಲೀಸ್ ವರಿಷ್ಠಾಧಿಕಾರಿ ಇಮ್ತಿಯಾಜ್ ಇಸ್ಮಾಯಿಲ್ ಪ್ಯಾರಿ ತಿಳಿಸಿದ್ದಾರೆ. ಈ ಪ್ರದೇಶದಲ್ಲಿ ಅಡಗಿರಬಹುದಾಗ ಇತರ ಉಗ್ರಗಾಮಿಗಳಿಗೆ ತೀವ್ರ ಶೋಧ ಮುಂದುವರಿದಿದೆ.

Facebook Comments