ಆಸ್ಪತ್ರೆಯಿಂದ ಶಿವಣ್ಣ ಡಿಸ್ಚಾರ್ಜ್

ಈ ಸುದ್ದಿಯನ್ನು ಶೇರ್ ಮಾಡಿ

Shivarajkumar-02

ಬೆಂಗಳೂರು, ಅ.17- ಕಳೆದ ಎರಡು ದಿನಗಳಿಂದ ವೈರಲ್ ಫೀವರ್‍ನಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಆರೋಗ್ಯವಾಗಿದ್ದು, ಮಲ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಜ್ವರ, ಮೈಕೈ ನೋವಿನಿಂದ ಶಿವಣ್ಣ ಸೋಮವಾರ ಮಲ್ಯ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿನ ವೈದ್ಯರು ಶಿವರಾಜ್‍ಕುಮಾರ್ ಅವರಿಗೆ ಚಿಕಿತ್ಸೆ ನೀಡಿ 48 ಗಂಟೆವರೆಗೂ ಜ್ವರ ಮರುಕಳಿಸದಿದ್ದರೆ ಡಿಸ್ಚಾರ್ಜ್ ಮಾಡುವುದಾಗಿ ಹೇಳಿದ್ದರು.

ಜ್ವರ ಮರುಕಳಿಸದ ಕಾರಣ ಇಂದು ಮಧ್ಯಾಹ್ನ ಶಿವರಾಜ್‍ಕುಮಾರ್ ಅವರನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು. ಇನ್ನೂ ಎರಡು ದಿನಗಳ ಕಾಲ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ಇದೇ ವೇಳೆ ವೈದರು ಸೂಚಿಸಿದ್ದಾರೆ. ನಾಳೆ ಬಹುನಿರೀಕ್ಷಿತ ಕಿಚ್ಚ ಸುದೀಪ್ ಹಾಗೂ ಶಿವರಾಜ್‍ಕುಮಾರ್ ನಟನೆಯ ದಿ ವಿಲನ್ ಚಿತ್ರ ಬಿಡುಗಡೆಯಾಗುತ್ತಿದ್ದು, ಚಿತ್ರಮಂದಿರದಲ್ಲೇ ಅಭಿಮಾನಿಗಳ ಜತೆಗೂಡಿ ಚಿತ್ರ ವೀಕ್ಷಿಸುವುದಾಗಿ ಶಿವಣ್ಣ ಹೇಳಿಕೊಂಡಿದ್ದರು. ಆದರೆ, ವಿಶ್ರಾಂತಿಯ ಅಗತ್ಯವಿರುವುದರಿಂದ ಅಭಿಮಾನಿಗಳೊಂದಿಗೆ ಶಿವಣ್ಣ ಚಿತ್ರ ವೀಕ್ಷಿಸುವುದು ಡೌಟ್.

# ಮಧ್ಯರಾತ್ರಿ 12 ಗಂಟೆಯಿಂದಲೇ ‘ದಿ ವಿಲನ್’ ಶೋ ಶುರು :
ಸ್ಯಾಂಡಲ್ವುಡ್ ನ ಬಹುನಿರೀಕ್ಷಿತ ದಿ ವಿಲನ್ ಚಿತ್ರ ಇದೇ ಅಕ್ಟೋಬರ್ 18ರಂದು ದೇಶಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದ್ದು ಚಿತ್ರದ ಮೊದಲ ಶೋ ಮಧ್ಯರಾತ್ರಿಯಿಂದಲೇ ಶುರುವಾಗಲಿದೆ. ಜೋಗಿ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದ ಮೇಲೆ ನಿರೀಕ್ಷೆಗಳು ಹೆಚ್ಚಾಗಿದ್ದು ಇದನ್ನೇ ತನ್ನ ಲಾಭಕೋಸ್ಕರ ಬಳಸಿಕೊಳ್ಳಲು ಚಿತ್ರತಂಡ ಮುಂದಾಗಿದ್ದು ಬುಧವಾರ ಮಧ್ಯರಾತ್ರಿ 12 ಗಂಟೆಯಿಂದಲೇ ಶೋ ಶುರುವಾಗಲಿದೆ. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದ ನಾನಾ ಜಿಲ್ಲೆಗಳಲ್ಲಿ ಮೈಸೂರು, ಹುಬ್ಬಳ್ಳಿ, ಹೊಸಪೇಟೆ ಸೇರಿದಂತೆ ನಾನು ಕಡೆಗಳಲ್ಲಿ ಬೆಳಗ್ಗೆ 4 ಗಂಟೆಯಿಂದಲೇ ಪ್ರದರ್ಶನ ಶುರುವಾಗಲಿದ್ದು ಇದು ಕನ್ನಡದ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ. ದಿ ವಿಲನ್ ಚಿತ್ರದ ಬಿಡುಗಡೆಯಾಗುತ್ತಿರುವ ಚಿತ್ರಮಂದಿರಗಳ ಮುಂಭಾಗದಲ್ಲಿ ಅದಾಗಲೇ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅವರ ಕಟೌಟ್ ಗಳು ರಾರಾಜಿಸುತ್ತಿವೆ. ಚಿತ್ರದಲ್ಲಿ ಆ್ಯಮಿ ಜಾಕ್ಸನ್ ನಾಯಕಿಯಾಗಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.

# ಮತ್ತೆ ‘ಆನಂದ್’ ಆದ ಶಿವಣ್ಣ :
ಹಳೆಯ ಚಿತ್ರಗಳ ಹೆಸರುಗಳು ಮರು ಬಳಕೆಯಾಗುತ್ತಿರುವ ವಿಷಯ ಎಲ್ಲರಿಗೂ ಗೊತ್ತಿದೆ. ಹೊಸಬರಾಗಲಿ ಅಥವಾ ಹಳಬರಾಗಲಿ, ಈ ಹಿಂದಿನ ಯಶಸ್ವಿ ಚಿತ್ರಗಳ ಹೆಸರುಗಳನ್ನು ಮರು ಉಪಯೋಗಿಸಿಕೊಂಡು ಹೊಸ ಸಿನಿಮಾ ಮಾಡುತ್ತಾರೆ. ಅಥವಾ ಅದಕ್ಕೆ ಭಾಗ 2 ಎಂದಾದರೂ ಇಡುತ್ತಾರೆ. ಆದರೆ ಅದು ಶಿವಣ್ಣನ ಪಾಲಿಗೆ ತದ್ವಿರುದ್ದವಾಗಿದೆ. ನಟ ಶಿವರಾಜ್ ಕುಮಾರ್ ‘ಆನಂದ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ನಾಯಕನಟರಾಗಿ ಪಾದಾರ್ಪಣೆ ಮಾಡಿದ್ದರು. 1986 ರಲ್ಲಿ ತೆರೆ ಕಂಡಿದ್ದ ಈ ಚಿತ್ರ ಸೂಪರ್ ಹಿಟ್ ಆಗಿತ್ತು. ಇದೇ ಹೆಸರು ಇದೀಗ ಮರು ಬಳಕೆಯಾಗುತ್ತಿದೆ. ವಿಶೇಷವೆಂದರೆ ಇದೇ ಟೈಟಲ್ ನಲ್ಲಿ ಸ್ವತಃ ಶಿವಣ್ಣನೇ ನಟಿಸುತ್ತಿದ್ದಾರೆ. ಹೀಗಾಗಿ ಈ ಚಿತ್ರ ಇನ್ನು ಶುರುವಾಗುವ ಮುನ್ನವೇ ಕುತೂಹಲ ಹುಟ್ಟಿಸುತ್ತಿದೆ. ಶಿವಲಿಂಗ’ ಚಿತ್ರದ ನಂತರ ಪಿ. ವಾಸು ಮತ್ತು ಶಿವರಾಜ್ ಕುಮಾರ್ ‘ಆನಂದ್’ ಚಿತ್ರದ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹೊಸ ಚಿತ್ರವು ಮುಂದಿನ ತಿಂಗಳ 9ರಂದು ಮುಹೂರ್ತ ನೆರವೇರಲಿದ್ದು, 2019 ರ ವರಮಹಾಲಕ್ಷ್ಮೀ ಹಬ್ಬಕ್ಕೆ ಸಿನಿಮಾ ತೆರೆಕಾಣಲಿದೆ.

Facebook Comments