ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಕೊಂಚ ಇಳಿಕೆ

ಈ ಸುದ್ದಿಯನ್ನು ಶೇರ್ ಮಾಡಿ

Petrol-and-diesel

ನವದೆಹಲಿ. ಅ.18 :ಳೆದ ಕೆಲವು ದಿನಗಳಿಂದ ಗಗನಮುಖಿಯಾಗಿ ಜನಸಾಮಾನ್ಯರ ಹೊರೆಯಾಗಿದ್ದ ಪೆಟ್ರೋಲ್ ಬೆಲೆ ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ತುಸು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಗುರುವಾರದ ಪೆಟ್ರೋಲ್‌ ದರ ಲೀಟರ್‌ಗೆ 83.33 ರೂ ಮತ್ತು ಡೀಸೆಲ್‌ ದರ 76.02 ರೂ ಇದೆ. ದೇಶದ ರಾಜಧಾನಿ ದಿಲ್ಲಿಯಲ್ಲಿ ಇಂದು ಪೆಟ್ರೋಲ್ ಬೆಲೆ 21 ಪೈಸೆ, ಡೀಸೆಲ್ 11 ಪೈಸೆ ಕಡಿಮೆಯಾಗಿದೆ. ಇದರಿಂದ ಲೀಟರ್ ಪೆಟ್ರೋಲ್ ಬೆಲೆ ರೂ.82.62ರಷ್ಟಿದ್ದರೆ, ಡೀಸೆಲ್ ಬೆಲೆ ರೂ.75.58ರಷ್ಟಿದೆ.

ಡೀಸೆಲ್‌ ಪ್ರತಿ ಲೀ.ಗೆ 11 ಪೈಸೆ ಕಡಿಮೆಯಾಗಿದ್ದು, ದೆಹಲಿಯಲ್ಲಿ 75.58 ರೂ. ಮತ್ತು ಮುಂಬೈನಲ್ಲಿ 79.24 ರೂ.ಗಳಷ್ಟಿದೆ. ಕೋಲ್ಕತಾದಲ್ಲಿ ಲೀ. ಪೆಟ್ರೋಲ್‌ 84.44 ರೂ. ಮತ್ತು ಡೀಸೆಲ್‌ 77.43 ರೂ. ಗೆ ಮಾರಾಟವಾಗುತ್ತಿದ್ದು, 22 ಪೈಸೆ ಇಳಿಕೆ ನಂತರ ಚೆನ್ನೈನಲ್ಲಿ ಪೆಟ್ರೋಲ್‌ ಪ್ರತಿ ಲೀ.ಗೆ 85.88 ರೂ. ಮತ್ತು ಡೀಸೆಲ್‌ 79.93 ರೂ. ಇದೆ. ಇನ್ನು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತಿ ಲೀ. ಪೆಟ್ರೋಲ್‌ 22 ಪೈಸೆ ಇಳಿಕೆಯೊಂದಿಗೆ 83.27 ರೂ. ಇದ್ದು, 11 ಪೈಸೆ ಇಳಿಕೆ ಕಂಡಿರುವ ಡೀಸೆಲ್‌ 75.97 ರೂ. ಗೆ ಮಾರಾಟವಾಗುತ್ತಿದೆ.

ಪೆಟ್ರೋಲ್ ಉತ್ಪನ್ನಗಳ ಮೇಲೆ ವಿಧಿಸುತ್ತಿರುವ ತೆರಿಗೆಯನ್ನು ಕಡಿಮೆ ಮಾಡಬೇಕೆಂದು ಆಗ್ರಹುತ್ತಾ ದಿಲ್ಲಿ ಪೆಟ್ರೋಲ್ ವಿತರರಕ ಸಂಘ ಒಂದು ದಿನದ ಮಟ್ಟಿಗೆ ಮುಷ್ಕ ಹೂಡುವುದಾಗಿ ಹೇಳಿದೆ. ಅಕ್ಟೋಬರ್ 22ರಂದು ಬೆಳಗ್ಗೆ 6 ಗಂಟೆಯಿಂದ ಅಕ್ಟೋಬರ್ 23ರ ಬೆಳಗ್ಗೆ 5 ಗಂಟೆ ತನಕ ಮುಷ್ಕರ ಹೂಡುವುದಾಗಿ ತಿಳಿಸಿದೆ. ಮುಷ್ಕರದ ಕಾರಣ ದಿಲಿಯಲ್ಲಿ ಪೆಟ್ರೋಲ್ ಬಂಕ್‌ಗಳು ಒಂದು ದಿನದ ಮಟ್ಟಿಗೆ ಕಾರ್ಯನಿರ್ವಹಿಸಲ್ಲ.

Facebook Comments