SHOCKING NEWS : ರಾವಣ ದಹನ ವೀಕ್ಷಿಸುತ್ತಿದ್ದವರ ಮೇಲೆ ರೈಲು ಹರಿದು 50ಕ್ಕೂ ಹೆಚ್ಚು ಮಂದಿ ಸಾವು..!

ಈ ಸುದ್ದಿಯನ್ನು ಶೇರ್ ಮಾಡಿ

Train--01

ಅಮೃತಸರ . ಅ.19: ರೈಲು ಹಳಿ ಮೇಲೆ ನಿಂತು ರಾವಣ ದಹನ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ರೈಲು ಹರಿದು 50 ಕ್ಕೂ ಹೆಚ್ಚು ಮಂದಿ ಮೃತಪಟ್ಟ ಘೋರ ಘಟನೆ ಅಮೃತಸರದಲ್ಲಿ ನಡೆದಿದೆ. ಪಟಾಕಿಗಳ ಸದ್ದಿನಿಂದ ರೈಲಿನ ಶಬ್ಧ ಕೇಳಿಸಿರಲಿಲ್ಲ ಎನ್ನಲಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆಯಿದ್ದು ಘಟನಾ ಸ್ಥಳದಲ್ಲಿ ಸುಮಾರು 700 ಮಂದಿ ನೆರೆದಿದ್ದರು ಎನ್ನಲಾಗಿದೆ. ಮೃತಪಟ್ಟವರಲ್ಲಿ ಮಕ್ಕಳು, ಮಹಿಳೆಯರು ಸೇರಿದ್ದಾರೆ ಎಂದು ತಿಳಿದುಬಂದಿದೆ. ಕಾರ್ಯಕ್ರಮದಲ್ಲಿ ಸಂಸದ ನವಜೋತ್ ಸಿಂಗ್ ಸಿದ್ದು ಅವರ ಪತ್ನಿ ಕೂಡ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ.

ರೈಲು ಪಠಾಣ್ ಕೋಟ್ ನಿಂದ ಅಮೃತಸರಕ್ಕೆ ಬರುತ್ತಿತ್ತು. ಈ ವೇಳೆ ರೈಲು ಹಳಿ ಪಕ್ಕದಲ್ಲೇ ದಸರಾ ಪ್ರಯುಕ್ತ ರಾವಣನ ದಹನ ನಡೆಯುತ್ತಿತ್ತು . ಸಾವಿರಾರು ಮಂದಿ ನೆರೆದಿದ್ದ ಕಾರ್ಯಕ್ರಮದಲ್ಲಿ ಪಟಾಕಿ ಸಿಡಿಸಲಾಗುತ್ತಿತ್ತು. ಪಟಾಕಿ ಸದ್ದಿನಲ್ಲಿ ರೈಲು ಬಂದಿದ್ದು ಯಾರಿಗೂ ಗೊತ್ತಾಗಲಿಲ್ಲ. ಯಮನಂತೆ ಬಂದ ರೈಲು ಗುಂಪುಗುಂಪಾಗಿ ನಿಂತವರ ಮೇಲೆ ಹರಿದು ಹೋಗಿದೆ. ಈ ಘೋರ ಘಟನೆ ವಿಡಿಯೋದಲ್ಲಿ ಸೆರೆಸಿಕ್ಕಿದ್ದು ಎದೆ ಜಲ್ ಎನಿಸುವಂತಿದೆ.

Train--03

ಘಟನೆ ಕುರಿತಂತೆ ಪಂಜಾಬ್ ಸರ್ಕಾರ ಮೃತರ ಕುಟುಂಬದವರಿಗೆ ತಲಾ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ.  ಈ ದುರ್ಘಟನೆ ಕುರಿತು ಪ್ರಧಾನಿ ನರೇಂದ್ರ ಮಾಡಿದ್ದು ಆಘಾತ ವ್ಯಕ್ತಪಡಿಸಿದ್ದಾರೆ. ಗಾಯಗೊಂಡವರ ಚಿಕಿತ್ಸೆ ಕುರಿತು ರಾಜ್ಯ ಸರ್ಕಾರದ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ . ಘಟನೆ ಹಿನ್ನೆಲೆಯಲ್ಲಿ ಪಂಜಾಬ್ ಮುಖ್ಯಮಂತ್ರಿ ತಮ್ಮ ಇಸ್ರೇಲ್ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ.

Train--02

ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Facebook Comments