ವಿಶ್ವವಿಖ್ಯಾತ ಜಂಬೂ ಸವಾರಿ ಕಣ್ತುಂಬಿಕೊಂಡ ಜನ, ಅಂಬಾರಿ ಹೊತ್ತು ರಾಜಗಾಂಭೀರ್ಯದ ಹೆಜ್ಜೆ ಹಾಕಿದ ಅರ್ಜುನ

ಈ ಸುದ್ದಿಯನ್ನು ಶೇರ್ ಮಾಡಿ

Jamboo-savari
ಮೈಸೂರು. ಅ. 19 : ವಿಶ್ವವಿಖ್ಯಾತ ಮೈಸೂರು ದಸರಾದ ಮುಖ್ಯ ಆಕರ್ಷಣೆಯಾದ ಜಂಬೂ ಸವಾರಿ ಅದ್ದೂರಿಯಾಗಿ ನಡೆಯಿತು. ದಸರಾ ಜಂಬೂ ಸವಾರಿಗೆ ಇಂದು (ಶುಕ್ರವಾರ) ಮಧ್ಯಾಹ್ನ ಅಧಿಕೃತ ಚಾಲನೆ ದೊರೆತಿದ್ದು, ಅಂಬಾರಿ ಹೊತ್ತಿರುವ ಅರ್ಜುನ ರಾಜಗಾಂಭೀರ್ಯದಿಂದ ಹೆಜ್ಜೆ ಹಾಕಿದ. 750 ಕೆಜಿ ತೂಕದ ಚಿನ್ನದ ಅಂಬಾರಿ ಹೊತ್ತ ಅರ್ಜುನನಿಗೆ ಕಾವೇರಿ ಮತ್ತು ವರಮಹಾಲಕ್ಷ್ಮೀ ಕುಮ್ಕಿ ಆನೆಗಳು ಸಾಥ್ ನೀಡಿದವು. ಈ ಮೊದಲು ಸಿಎಂ ಕುಮಾರಸ್ವಾಮಿಯವರು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ಮೂಲಕ ದಸರಾ ಜಂಬೂ ಸವಾರಿಗೆ ಚಾಲನೆ ನೀಡಿದರು . ಈ ಸಂಧರ್ಭದಲ್ಲಿ ಸಿಎಂ ಜೊತೆ, ದಸರಾ ಉದ್ಘಾಟಿಕ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ, ಸಚಿವ ಜಿ.ಟಿ. ದೇವೇಗೌಡ, ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರ ರಾವ್ ಅವರು ಪುಷ್ಪಾರ್ಚನೆ ಸಲ್ಲಿಸಿದರು. ದೇಶವಿದೇಶ ಗಳಿಂದ ಆಗಮಿಸಿದ ಲಕ್ಷಾಂತರ ಪ್ರವಾಸಿಗರು ಅದ್ಧೂರಿ ಜಂಬೂ ಸವಾರಿ ಮೆರವಣಿಗೆಯನ್ನು ಕಣ್‌ತುಂಬಿಕೊಂಡರು. ಅರ್ಜುನ ಸೇರಿದಂತೆ ದಸರಾ ಗಜಪಡೆಯ 12 ಆನೆ, ಅಶ್ವಾರೋಹಿ ಪಡೆ, ಎನ್‌ಸಿಸಿ ಕೆಡೆಟ್ಸ್‌ ಅರಮನೆ ಆವರಣ ದಿಂದ 5 ಕಿ.ಮೀ ದೂರದ ಬನ್ನಿಮಂಟಪ ಮೈದಾನದವರೆಗೆ ಜಂಬೂಸವಾರಿ ಮೆರವಣಿಗೆ ಸಾಗಿತು.

ರಾಜಮಾತೆ ಪ್ರಮೋದಾ ದೇವಿ ಅವರಿಗೆ ಮಾತೃ ವಿಯೋಗವಾದ ಹಿನ್ನಲೆಯಲ್ಲಿ ಯುವರಾಜ ಯದುವೀರ್‌ ಒಡೆಯರ್‌ ಸೇರಿದಂತೆ ರಾಜಮನೆತನದವರು ಜಂಬೂ ಸವಾರಿ ಮೆರವಣಿಗೆ ಮತ್ತು ಧಾರ್ಮಿಕ ವಿಧಿ ವಿಧಾನಗಳಲ್ಲಿ ಪಾಲ್ಗೊಳ್ಳಲ್ಲಿಲ್ಲ.

Jamboo-savari-05
# ಜನಸ್ತೋಮದ ಹರ್ಷೋದ್ಘಾರ
750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಹೊತ್ತು ಕುಮ್ಕಿ ಆನೆಗಳೊಂದಿಗೆ ಅರ್ಜುನ ಸಾಗುತ್ತಿದ್ದಂತೆ ಮೆರವಣಿಗೆಯ ರಾಜಮಾರ್ಗದ ಇಕ್ಕೇಲಗಳಲ್ಲಿ ನಿಂತಿದ್ದ ಜನಸ್ತೋಮ ಹರ್ಷೋದ್ಘಾರ ಮಾಡಿ ನಮನ ಸಲ್ಲಿಸಿ ತಮ್ಮ ಗೌರವವನ್ನು ಸಲ್ಲಿಸಿದರು. ಈ ಮೂಲಕ ಭಾರತೀಯ ಪರಂಪರೆಯ ಸಂಕೇತ ಹಾಗೂ ಜಗತ್ತಿನ ಅತಿದೊಡ್ಡ ಉತ್ಸವಗಳಲ್ಲಿ ಒಂದಾದ ಇತಿಹಾಸ, ಪರಂಪರೆ ಮತ್ತು ಸಂಸ್ಕøತಿಯನ್ನು ಬಿಂಬಿಸುವ 9 ದಿನಗಳ ಉತ್ಸವ ದಸರಾದ ವೈಭವಕ್ಕೆ ಜಂಬೂಸವಾರಿ ಮೂಲಕ ವರ್ಣರಂಜಿತ ತೆರೆ ಎಳೆಯಲಾಯಿತು.

Jamboo-savari-04

# ಗಮನ ಸೆಳೆದ ಸ್ತಬ್ಧ ಚಿತ್ರಗಳು :
ಜಂಬೂಸವಾರಿಯಲ್ಲಿ ಸ್ತಬ್ಧಚಿತ್ರಗಳು ಪ್ರದರ್ಶನ ವ ಪ್ರಮುಖ ಆಕರ್ಷಣೆಯಾಗಿತ್ತು ,ಈ ಬಾರಿ ಮೆರವಣಿಗೆಯಲ್ಲಿ ಒಟ್ಟು 42 ಸ್ತಬ್ಧ ಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ನಾಡಿನ ಪರಂಪರೆ, ಕಲೆ, ವಾಸ್ತುಶಿಲ್ಪ, ಜಾನಪದ ವನ್ನು ಪ್ರತಿನಿಧಿಸಿದವು. ಪ್ರತಿ ಜಿಲ್ಲೆಗಳಿಂದ ತಲಾ ಒಂದೊಂದು ಹಾಗೂ 12 ಸರ್ಕಾರಿ ಇಲಾಖೆಯಿಂದ ಒಂದೊಂದು ಸ್ತಬ್ಧ ಚಿತ್ರಗಳು ಪ್ರದರ್ಶನ ಮಾಡಲಾಯಿತು. ಅಲ್ಲದೇ ಇದೇ ಮೊದಲ ಬಾರಿಗೆ ಕಾನೂನು ಸೇವಾ ಪ್ರಾಧಿಕಾರ ಹಾಗೂ ಎನ್‍ಸಿಸಿ ಸ್ತಬ್ಧ ಚಿತ್ರ ರೂಪಿಸಿದ್ದು, ಒಟ್ಟು 600 ಕಲಾವಿದರಿಂದ ಸ್ತಬ್ದ ಚಿತ್ರಗಳು ಪ್ರದರ್ಶನಗೊಂಡವು.

ಕಲೆ, ಸಂಸ್ಕೃತಿ ಹಾಗೂ ವಾಸ್ತುಶಿಲ್ಪ, ಅಂತರ್ಜಲ ಸಂರಕ್ಷಣೆ, ಅರಣ್ಯೀಕರಣ, ಜಾನಪದ ಹಬ್ಬಗಳ ಪರಂಪರೆ ಹಾಗೂ ನಾಡು- ನುಡಿಗೆ ಶ್ರಮಿಸಿದ ಯಶೋಗಾಥೆ ಆಶಯಗಳೊಂದಿಗೆ ಸ್ತಬ್ಧ ಚಿತ್ರಗಳು ಮೂಡಿಬಬಂದವು. ಕಾನೂನು ಸೇವಾ ಪ್ರಾಧಿಕಾರ ಹಾಗೂ ಎನ್‍ಸಿಸಿ ಬೆಟಾಲಿಯನ್‍ಗಳು ಜಂಬೂಸವಾರಿಯಲ್ಲಿ ಇದೇ ಮೊದಲ ಬಾರಿಗೆ ಹೆಜ್ಜೆ ಹಾಕಿದ್ದು ವಿಶೇಷ. ರಾಜ್ಯದ 30 ಜಿಲ್ಲೆಗಳ ಜಿಲ್ಲಾ ಪಂಚಾಯಿತಿಗಳು ತಲಾ ಒಂದು ಹಾಗೂ ವಿವಿಧ ಇಲಾಖೆಗಳ 12 ಸ್ತಬ್ಧಚಿತ್ರಗಳು ದಸರಾ ಮೆರವಣಿಗೆಯಲ್ಲಿ ನೋಡುಗರ ಗಮನ ಸೆಳೆದವು.

Jamboo-savari-03

# 21 ಕುಶಾಲು ತೋಪು ಹಾರಿಸಲಾಯಿತು
ಅಂಬಾರಿ ಹೊತ್ತ ಆನೆ ಬಂದು ನಿಲ್ಲುತ್ತಿದ್ದಂತೆ ಅಶ್ವಾರೋಹಿ ದಳದ ಕಮಾಂಡೆಂಟ್ ಪಥ ಸಂಚಲನಕ್ಕೆ ಅನುಮತಿ ಕೋರಿದರು. ವಿಜಯದ ಸಂಕೇತವಾಗಿ 21 ಕುಶಾಲು ತೋಪುಗಳು ಸಿಡಿದು ಜೋರು ಸದ್ದು ಮೊಳಗಿಸಿದವು. ನಂತರ ಪೊಲೀಸ್ ವಾದ್ಯವೃಂದದವರು ರಾಷ್ಟ್ರಗೀತೆ ನುಡಿಸಿ ಗೌರವ ವಂದನೆ ಸಲ್ಲಿಸಿದರು. ಅನಂತರ ಗಣ್ಯರು ದೇವಿಗೆ ನಮನ ಸಲ್ಲಿಸಿ ಗೌರವ ಅರ್ಪಿಸಿದರು. ಬಳಿಕ ಮಂಗಳ ವಾದ್ಯ, ಪೊಲೀಸ್ ವಾದ್ಯವೃಂದ, ರಕ್ಷಣಾ ಪಡೆಗಳ ಗೌರವ, ಅಶ್ವಾರೋಹಿ ದಳದೊಂದಿಗೆ ಚಿನ್ನದ ಅಂಬಾರಿ ಹೊತ್ತ ಅರ್ಜುನ ಮಂದಗತಿಯಲ್ಲಿ ಶಾಂತಚಿತ್ತನಾಗಿ ಹೆಜ್ಜೆ ಹಾಕಿದ.

Jamboo-savari-02 Jamboo-savari-01

Facebook Comments