ಜಂಬೂ ಸವಾರಿ ವೈಭವ ಕಣ್ತುಂಬಿಕೊಂಡ ಶಿವಣ್ಣ ದಂಪತಿ, ಮತ್ತೊಂದೆಡೆ ‘ವಿಲನ್’ ವಿವಾದ

ಈ ಸುದ್ದಿಯನ್ನು ಶೇರ್ ಮಾಡಿ

Shivanna--01

ಮೈಸೂರು. ಅ.19 : ಕರುನಾಡ ಚಕ್ರವರ್ತಿ ನಟ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಕುಟುಂಬ ಸಮೇತರಾಗಿ ಮೈಸೂರು ದಸರಾ ವೀಕ್ಷಣೆ ಮಾಡಿದರು. ಒಂದೆಡೆ ದಿ ವಿಲನ್ ಚಿತ್ರಕ್ಕೆ ಸಂಬಂಧಿಸಿದಂತೆ ಶಿವಣ್ಣ ಹಾಗೂ ಸುದೀಪ್ ಫ್ಯಾನ್ಸ್ ಮಧ್ಯೆ ಚಟಾಪಟಿ ನಡೆಯುತ್ತಿದೆ. ಇನ್ನೊಂದೆಡೆ, ಶಿವಣ್ಣ ಅಭಿಮಾನಿಗಳು ನಿರ್ದೇಶಕ ಪ್ರೇಮ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ನಡುವೆ ಶಿವಣ್ಣ ಮಾತ್ರ, ಇದ್ಯಾವುದರ ಕುರಿತು ಹೆಚ್ಚು ತಲೆಕೆಡೆಸಿಕೊಳ್ಳದೇ ಮೈಸೂರಿನಲ್ಲಿ ಕುಟುಂಬದ ಜೊತೆ ಜಂಬೂ ಸವಾರಿ ವೀಕ್ಷಣೆ ಮಾಡುತ್ತಿದ್ದಾರೆ. ಅತ್ಯಂತ ಪ್ರಭುದ್ಧ ನಟರಾಗಿರುವ ಶಿವಣ್ಣ, ಈ ಮೊದಲು ಕೂಡ ಈ ಸಿನಿಮಾವನ್ನು ಕೇವಲ ಸಿನಿಮಾವನ್ನಾಗಿ ಮಾತ್ರ ನೋಡಿ ಅಂತಾ ತಮ್ಮ ಅಭಿಮಾನಿಗಳಿಗೆ ಕರೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

# ಮತ್ತೊಂದೆಡೆ ವಿಲನ್ ವಿವಾದ :
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ‘ದಿ ವಿಲನ್’ ಚಿತ್ರ ದೇಶದಾದ್ಯಂತ ಬಿಡುಗಡೆಗೊಂಡು ಅದ್ಬುತ ಪ್ರದರ್ಶನ ಕಾಣುತ್ತಿದ್ದು ಈ ನಡುವೆ ಇದೀಗ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ಚಿತ್ರದ ದೃಶ್ಯವೊಂದರಲ್ಲಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್ ಅವರಿಗೆ ಕಾಲಿನಿಂದ ಹೊಡೆಯುವ ದೃಶ್ಯ ಇರುವುದಕ್ಕೆ ಶಿವಣ್ಣ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ.

ಶಿವಣ್ಣನವರ ಒಳ್ಳೆತನವನ್ನು ನಿರ್ದೇಶಕ ಜೋಗಿ ಪ್ರೇಮ್ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಿರಿಯ ನಟನಿಂದ ಹಿರಿಯ ನಟನಿಗೆ ಕಾಲಿನಿಂದ ಒಡೆಯುವ ರೀತಿ ಚಿತ್ರೀಕರಿಸಿದ್ದಾರೆ ಎಂದು ಅಭಿಮಾನಿಗಳು ಅಕ್ರೋಶಗೊಂಡಿದ್ದು ನಿರ್ದೇಶಕ ಪ್ರೇಮ್ ವಿರುದ್ದ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಆ ದೃಶ್ಯವನ್ನು ಚಿತ್ರದಿಂದ ತೆಗೆದು ಹಾಕುವಂತೆ ನಟ ಶಿವರಾಜ್ ಕುಮಾರ್ ಅವರ ಅಭಿಮಾನಿಗಳು ಆಗ್ರಹಿಸಿದ್ದಾರೆ. ಒತ್ತಾಯಿಸಿ ನರ್ತಕಿ ಚಿತ್ರಮಂದಿರದ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

# ‘ಶಿವಣ್ಣ ತಿರುಗಿ ಹೊಡೆದಿದ್ದರೆ, ಪಾತ್ರ ವ್ಯಾಲ್ಯೂ ಸತ್ತು ಹೋಗುತ್ತಿತ್ತು’ ಪ್ರೇಮ್ ಸ್ಪಷ್ಟನೆ
ದಿ ವಿಲನ್’ ಸಿನಿಮಾ ರಾಜ್ಯಾದ್ಯಂತ ತೆರೆಕಂಡಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ. ಶಿವಣ್ಣ- ಸುದೀಪ್ ನಟನೆಗೆ ಎಲ್ಲೆಡೆಯೂ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಆದರೆ, ಸಿನಿಮಾದ ಕ್ಲೈಮ್ಯಾಕ್ಸ್ ವಿವಾದಕ್ಕೆ ಕಾರಣವಾಗಿದೆ. ಸುದೀಪ್, ಶಿವಣ್ಣಗೆ ಹೊಡೆಯುವ ದೃಶ್ಯಕ್ಕೆ ಅಭಿಮಾನಿಗಳೂ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲೂ ಸಾಕಷ್ಟು ಚರ್ಚೆಗೆ ಗ್ರಾಸವಾಗ್ತಿದೆ. ಈ ಹಿನ್ನೆಲೆಯಲ್ಲಿ ನಿರ್ದೇಶಕ ಪ್ರೇಮ್ ಈ ಬಗ್ಗೆ ಸ್ಪಷ್ಟೀಕರಣ ಕೊಟ್ಟಿದ್ದು, ಶಿವಣ್ಣ ಪಾತ್ರ ಹಿರಿಮೆಯನ್ನು ಬಿಚ್ಚಿಟ್ಟಿದ್ದಾರೆ.

Facebook Comments