ಅಮೃತ್‍ಸರ್ ದುರಂತದ ನಂತರ 37 ರೈಲುಗಳ ಸಂಚಾರ ರದ್ದು, 16 ರೈಲುಗಳ ಮಾರ್ಗ ಬದಲಾವಣೆ

ಈ ಸುದ್ದಿಯನ್ನು ಶೇರ್ ಮಾಡಿ

Amrutsar--01

ನವದೆಹಲಿ, ಅ.20 (ಪಿಟಿಐ)- ಪಂಜಾಬ್‍ನ ಅಮ್ಥತಸರ್‍ನಲ್ಲಿ ವಿಜಯದಶಮಿ ದಿನದಂದು ಸಂಭವಿಸಿದ ಘೋರ ದುರಂತದ ನಂತರ ರೈಲ್ವೆ ಇಲಾಖೆ ಇಂದು 37 ರೈಲುಗಳ ಸಂಚಾರ ರದ್ದುಗೊಳಿಸಿದ್ದು, 16 ಟ್ರೈನುಗಳ ಮಾರ್ಗವನ್ನು ಬದಲಿಸಿದೆ. ಈ ದುರ್ಘಟನೆಯಲ್ಲಿ 60ಕ್ಕೂ ಹೆಚ್ಚು ಜನರು ಬಲಿಯಾಗಿ ಅನೇಕರು ತೀವ್ರ ಗಾಯಗೊಂಡಿದ್ಧಾರೆ.

ದುರಂತದ ಹಿನ್ನೆಲೆಯಲ್ಲಿ 10 ಮೈಲ್/ಎಕ್ಸ್‍ಪ್ರೆಸ್ ರೈಲುಗಳು ಮತ್ತು 27 ಪ್ಯಾಸೆಂಜರ್ ಟ್ರೈನುಗಳನ್ನು ರದ್ದುಗೊಳಿಸಲಾಗಿದೆ. 16 ರೈಲುಗಳ ಮಾರ್ಗ ಬದಲಿಸಲಾಗಿದೆ. 18 ರೈಲುಗಳ ಅಂತರವನ್ನು ಕಡಿಮೆಗೊಳಿಸಲಾಗಿದೆ. ಜಲಂಧರ್ ಮತ್ತು ಅಮೃತಸರ್ ನಡುವಣ ಮಾರ್ಗ ಸಂಪೂರ್ಣ ಬಂದ್ ಆಗಿದೆ ಎಂದು ಉತ್ತರ ರೈಲ್ವೆ ವಕ್ತಾರ ದೀಪಕ್ ಕುಮಾರ್ ತಿಳಿಸಿದ್ಧಾರೆ.

ನಿವಾಸಿಗಳ ಪ್ರತಿಭಟನೆ : ಈ ಮಧ್ಯೆ ಘಟನೆ ನಡೆದ ಅಮೃತ್‍ಸರ್‍ನ ರೈಲ್ವೆ ಹಳಿಗಳ ಮೇಲೆ ಇಂದು ಅಸಂಖ್ಯಾತ ಜನರು ಜಮಾಯಿಸಿ ಭಾರೀ ಪ್ರತಿಭಟನೆ ನಡೆಸಿದರು. ಕೇಂದ್ರ ಸರ್ಕಾರ, ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ತಪ್ಪಿತಸ್ಥ ರೈಲು ಚಾಲಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ವಿಶ್ವನಾಯಕರ ದಿಗ್ಭ್ರಮೆ :
ಅಮೃತ್‍ಸರ್ ರೈಲು ದುರಂತದ ಬಗ್ಗೆ ವಿಶ್ವಸಂಸ್ಥೆ ಮಹಾ ಪ್ರಧಾನಕಾರ್ಯದರ್ಶಿ ಅಂಟೋನಿಯೋ ಗುಟೆರಸ್, ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್ಯು ಸೇರಿದಂತೆ ಅನೇಕ ದೇಶಗಳ ನಾಯಕರು ದಿಗ್ಭ್ರಮೆ ವ್ಯಕ್ತಪಡಿಸಿ, ಮೃತರಿಗೆ ಸಾಂತ್ವನ ಹೇಳಿದ್ದಾರೆ.

Facebook Comments