ನಾಳೆಯಿಂದ ಭಾರತ-ವಿಂಡೀಸ್ ಏಕದಿನ ಸಮರ

ಈ ಸುದ್ದಿಯನ್ನು ಶೇರ್ ಮಾಡಿ

Cricket--01

ಗುವಾಹತಿ, ಅ.20- ಭಾರತ ಮತ್ತು ವೆಸ್ಟ್‍ಇಂಡೀಸ್ ನಡುವೆ ನಾಳೆಯಿಂದ ಐದು ದಿನಗಳ ಏಕದಿನ ಅಂತಾರಾಷ್ಟ್ರೀಯ ಪಂದ್ಯ ಆರಂಭವಾಗಲಿದೆ. ಅಸ್ಸೋಂ ರಾಜಧಾನಿ ಗುವಾಹತಿಯಲ್ಲಿ ನಾಳೆ ಮೊದಲ ದಿನದ ಏಕದಿನ ಪಂದ್ಯ ನಡೆಯಲಿದ್ದು, ಭಾರತ ಉತ್ತಮ ಶುಭಾರಂಭದ ನಿರೀಕ್ಷೆಯಲ್ಲಿದೆ. ಇಂಗ್ಲೆಂಡ್‍ನಲ್ಲಿ ನಡೆಯಲಿರುವ 2019ರ ವಿಶ್ವಕಪ್‍ಗೆ ದಿನಗಣನೆ ಆರಂಭವಾಗಿದ್ದು, ಭಾರತ ಈಗಿನಿಂದಲೇ ಸಜ್ಜಾಗಿದೆ. ಇದಕ್ಕೆ ಪೂರಕವಾಗಿ ಐದು ದಿನಗಳ ಈ ಏಕದಿನ ಪಂದ್ಯಗಳು ಭಾರತಕ್ಕೆ ಒಂದು ರೀತಿಯ ಪೂರ್ವ ತಯಾರಿಯ ವೇದಿಕೆಯೂ ಆಗಿದೆ.

ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸರಣಿ ಗೆಲ್ಲುವ ತವಕದಲ್ಲಿರುವ ಟೀಂ ಇಂಡಿಯಾ ಏಷ್ಯಾಕಪ್ ವಿಜಯ ದುಂದುಬಿಯ ಆ್ಯಕ್ಷನ್ ರಿಪ್ಲೆ ಮಾಡಲಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ. ಭಾರತ ಬ್ಯಾಟಿಂಗ್ ಮತ್ತು ಬೌಲಿಂಗ್‍ನಲ್ಲಿ ಲಯ ಕಾಯ್ದುಕೊಂಡಿದ್ದರೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳದ್ದೇ ಚಿಂತೆ. ಏಕೆಂದರೆ, ಈ ಹಿಂದಿನ ಪಂದ್ಯಗಳಲ್ಲಿ ಮಿಡಲ್ ಆರ್ಡರ್ ಪಟುಗಳು ವಿಫಲವಾಗಿರುವುದೇ ಇದಕ್ಕೆ ಕಾರಣ. ಆದಾಗ್ಯೂ ಬ್ಯಾಟಿಂಗ್ ಮತ್ತು ಬೌಲಿಂಗ್ ಸಾಮಥ್ರ್ಯವನ್ನೇ ನೆಚ್ಚಿಕೊಂಡು ಪ್ರವಾಸಿ ತಂಡದ ವಿರುದ್ಧ ಮೇಲುಗೈ ಸಾಧಿಸುವ ಛಲದಲ್ಲಿ ಭಾರತ ತಂಡವಿದೆ.

ಇತ್ತೀಚಿನ ದಿನಗಳಲ್ಲಿ ವಿಂಡೀಸ್ ದೈತ್ಯರು ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ ಸಹ ಆ ತಂಡವನ್ನು ಲಘುವಾಗಿ ಪರಿಗಣಿಸುವಂತಿಲ್ಲ. ಇತ್ತೀಚೆಗಷ್ಟೆ ನಡೆದ ಏಷ್ಯಾಕಪ್‍ನಲ್ಲಿ ಭಾರತ ತಂಡ ಬಾಂಗ್ಲಾದೇಶ ಮತ್ತು ಆಫ್ಘಾನಿಸ್ಥಾನ್ ತಂಡಗಳ ವಿರುದ್ಧ ಪ್ರಯಾಸದ ಗೆಲುವು ಕಂಡಿತ್ತು. ಅನುಭವಿ ತಂಡವಾದ ವೆಸ್ಟ್ ಇಂಡೀಸ್ ಪುಟಿದೆದ್ದು ಆತಿಥೇಯರಿಗೆ ತಿರುಗೇಟು ನೀಡುವ ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ನಾಳೆಯಿಂದ ನಡೆಯಲಿರುವ ಒಟ್ಟು ಐದು ಏಕದಿನ ಪಂದ್ಯಗಳು ಕದನ ಕುತೂಹಲ ಕೆರಳಿಸಿವೆ.

# ತಂಡಗಳ ಆಟಗಾರರ ವಿವರ:
ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮ, ಶಿಖರ್ ದವನ್, ಅಂಬಟಿ ರಾಯ್ಡು, ಮನೀಷ್ ಪಾಂಡೆ, ಎಂ.ಎಸ್.ಧೋನಿ, ರಿಷಬ್ ಪಂಥ್, ರವೀಂದ್ರ ಜಡೇಜ, ಯಜುವೇಂದ್ರ ಚಾಹಲ್, ಕುಲ್‍ದೀಪ್ ಯಾದವ್, ಮಹಮ್ಮದ್ ಶಮಿ, ಕೆ.ಕಲೀಲ್ ಅಹಮ್ಮದ್, ಲೋಕೇಶ್ ರಾಹುಲ್ ಮತ್ತು ಉಮೇಶ್ ಯಾದವ್. ವೆಸ್ಟ್ ಇಂಡೀಸ್: ಜಾಸನ್ ಹೋಲ್ಡರ್ (ನಾಯಕ), ಫಬಿಯಾನ್ ಅಲೆನ್, ಸುನಿಲ್ ಆಂಬ್ರೀಸ್, ದೇವೇಂದ್ರ ಬಿಶೂ, ಚಂದ್ರಪಾಲ್ ಹೇಮರಾಜ್, ಶಿಮ್ರೋನ್ ಹೆಟ್‍ಮೇರ್, ಶಾಹೈ ಹೋಪ್, ಆಲ್ಜರಿ ಜೋಸೆಫ್, ಕೀರನ್ ಕೋವೆಲ್, ಅಶ್ಲೆನರ್ಸ್, ಕೀಮೋಪಾಲ್, ರೌಮನ್ ಪೆÇೀವೆಲ್, ಕರ್‍ಮರ್ ರೋಚ್, ಮಾರ್ಲೋನ್ ಸ್ಯಾಮ್ಯುಯಲ್ಸ್, ಒಶಾನೆ ಥಾಮಸ್, ಒಬೆದ್ ಮ್ಯಾಕ್ ಕೋಯಿ.
ಪಂದ್ಯ ಆರಂಭ: ಮಧ್ಯಾಹ್ನ 1.30.

Facebook Comments