ಸ್ಥಳೀಯ ಸಂಸ್ಥೆ ಚುನಾವಣಾ ಫಲಿತಾಂಶ : ದಕ್ಷಿಣ ಕಾಶ್ಮೀರದ 4 ಜಿಲ್ಲೆಗಳು ಬಿಜೆಪಿ ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

BJP--01
ಶ್ರೀನಗರ, ಅ.20 (ಪಿಟಿಐ)- ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ನಾಲ್ಕು ಹಂತಗಳ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದೆ. ಉಗ್ರರ ಹಿಂಸಾಚಾರ ಪೀಡಿತ ದಕ್ಷಿಣ ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿ ಜಯ ಸಾಧಿಸಿದೆ. ಕಣಿವೆ ರಾಜ್ಯದ ಇತಿಹಾಸದಲ್ಲಿ ಬಿಜೆಪಿ ಇಷ್ಟು ಸ್ಥಾನಗಳನ್ನು ಗೆದ್ದು ಇತರೆಡೆ ಮುನ್ನಡೆ ಸಾಧಿಸುತ್ತಿರುವುದು ಇದೇ ಮೊದಲು.

ನಾಲ್ಕು ಜಿಲ್ಲೆಗಳ 132 ವಾರ್ಡ್‍ಗಳಲ್ಲಿ 53ರಲ್ಲಿ ಬಿಜೆಪಿ ಜಯ ದಾಖಲಿಸಿದೆ ಎಂದು ಚುನಾವಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅನಂತನಾಗ್, ಕುಲ್ಗಂ, ಪುಲ್ವಾಮಾ ಮತ್ತು ಶೋಪಿಯನ್… ನಾಲ್ಕು ಜಿಲ್ಲೆಗಳ 20 ಸ್ಥಳೀಯ ಸಂಸ್ಥೆಗಳಲ್ಲಿ ನಾಲ್ಕು ಬಿಜೆಪಿ ಪಾಲಾಗಿದೆ.

ದಕ್ಷಿಣ ಕಾಶ್ಮೀರದ 94 ವಾರ್ಡ್‍ಗಳ ಚುನಾವಣಾ ಫಲಿತಾಂಶ ಘೋಷಣೆಯಾಗಿದ್ದು, ಕಾಂಗ್ರೆಸ್ 28 ಸ್ಥಾನಗಳನ್ನು ಮಾತ್ರ ಗೆಲ್ಲುವಲ್ಲಿ ಶಕ್ತವಾಗಿದ್ದು, ಕನಿಷ್ಠ ಮೂರು ಮುನ್ಸಿಪಾಲಿಟಿಗಳು ಕೈ ವಶವಾಗಲಿದೆ. ಕಾಶ್ಮೀರದ ಉಳಿದ ಭಾಗಗಳ ಮತ ಎಣಿಕೆ ಕಾರ್ಯ ಮುಂದುವರಿದಿದ್ದು, ರಾತ್ರಿ ವೇಳೆಗೆ ಸ್ಪಷ್ಟ ಚಿತ್ರಣ ಲಭಿಸಲಿದೆ.

Facebook Comments