ರಾಜನಾಥ್ ಮತ್ತು ಲಂಕಾ ಪ್ರಧಾನಿ ಭೇಟಿ, ಭದ್ರತೆ, ಉಗ್ರ ನಿಗ್ರಹ ಕುರಿತು ಚರ್ಚೆ

ಈ ಸುದ್ದಿಯನ್ನು ಶೇರ್ ಮಾಡಿ

Rajnath-SIngh--1

ನವದೆಹಲಿ, ಅ.20 (ಪಿಟಿಐ)- ಭಾರತ ಪ್ರವಾಸದಲ್ಲಿರುವ ದ್ವೀಪರಾಷ್ಟ್ರ ಪ್ರಧಾನಮಂತ್ರಿ ರಾನಿಲ್ ವಿಕ್ರಮಸಿಂಘೆ ಅವರನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಇಂದು ಭೇಟಿ ಮಾಡಿದರು. ಭಾರತ ಮತ್ತು ದ್ವೀಪರಾಷ್ಟ್ರದ ನಡುವೆ ಭದ್ರತೆ, ರಕ್ಷಣೆ ಹಾಗೂ ಭಯೋತ್ಪಾದನೆ ನಿಗ್ರಹ ಸಹಕಾರ ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚಿಸಿದರು. 30 ನಿಮಿಷಗಳ ಮಾತುಕತೆ ವೇಳೆ ರಾಜನಾಥ್ ಮತ್ತು ವಿಕ್ರಮ್‍ಸಿಂಘೆ ಭಾರತ-ಶ್ರೀಲಂಕಾ ನಡುವಣ ಸಂಬಂಧವನ್ನು ಮತ್ತಷ್ಟು ಬಲಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಿದರು.

ಶ್ರೀಲಂಕಾ ಪ್ರಧಾನಿ ಅವರೊಂದಿಗೆ ನಡೆದ ಸಭೆ ಫಲಪ್ರದವಾಗಿತ್ತು. ಉಭಯ ರಾಷ್ಟ್ರಗಳ ನಡುವಣ ಸಹಕಾರ ಮತ್ತು ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ನಾವು ಮಹತ್ವದ ಚರ್ಚೆ ನಡೆಸಿದೆವು. ಇದೇ ವೇಳೆ ಎರಡೂ ದೇಶಗಳ ನಡುವೆ ಭದ್ರತೆ, ರಕ್ಷಣೆ ಮತ್ತು ಭಯೋತ್ಪಾದನೆ ದಮನ ಸಹಕಾರಕ್ಕೆ ಸಂಬಂಧಪಟ್ಟ ವಿಷಯಗಳ ಬಗ್ಗೆಯೂ ಮಾತುಕತೆಯಾಯಿತು ಎಂದು ಸಭೆಯ ನಂತರ ಸಿಂಗ್ ಟ್ವೀಟ್ ಮಾಡಿದ್ದಾರೆ.

ಭಾರತದೊಂದಿಗೆ ವಾಣಿಜ್ಯ, ವ್ಯಾಪಾರ, ಬಂಡವಾಳ ಹೂಡಿಕೆ ಮತ್ತು ಸಾಗರ ಪ್ರದೇಶಗಳ ರಕ್ಷಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬಾಂಧವ್ಯ ಬಲವರ್ಧನೆ ಉದ್ದೇಶಗೊಂದಿಗೆ ಶ್ರೀಲಂಕಾ ಪ್ರಧಾನಿ ಮೂರು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.

ಸುಷ್ಮಾ-ಸಿಂಘೆ ಭೇಟಿ: ನಂತರ ವಿಕ್ರಮಸಿಂಘೆ ಅವರು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿ ಮಾಡಿದರು. ಮಾತುಕತೆ ವೇಳೆ ದ್ವೀಪರಾಷ್ಟ್ರದಲ್ಲಿ ಭಾರತದ ನೆರವಿನಿಂದ ನಡೆಯುತ್ತಿರುವ ಅಭಿವೃದ್ಧಿ ಯೋಜನೆಗಳ ಬಗ್ಗೆ ಚರ್ಚೆಯಾಯಿತು.

Facebook Comments