ಶಬರಿಮಲೆ ತೀರ್ಪು : ನ.13ರಂದು ಅರ್ಜಿಗಳ ವಿಚಾರಣೆ- ಸುಪ್ರೀಂ

ಈ ಸುದ್ದಿಯನ್ನು ಶೇರ್ ಮಾಡಿ

Sabarimala--01

ನವದೆಹಲಿ, ಅ.23- ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲ ವಯೋಮಾನದ ಮಳೆಯರಿಗೆ ಪ್ರವೇಶಾವಕಾಶ ಕಲ್ಪಿಸುವ ತನ್ನ ಐತಿಹಾಸಿಕ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಿರಾಗಿರುವ ಎಲ್ಲ ಅರ್ಜಿಗಳ ವಿಚಾರಣೆಯನ್ನು ನ.13ರಂದು ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್ ಇಂದು ತಿಳಿಸಿದೆ.

ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೈ ಮತ್ತು ನ್ಯಾಯಮೂರ್ತಿ ಎಸ್.ಕೆ.ಕೌಲ್ ಅವರನ್ನು ಒಳಗೊಂಡ ಪೀಠವು ತನ್ನ ಮಹತ್ವದ ಆದೇಶವನ್ನು ತುರ್ತಾಗಿ ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಪುರಸ್ಕರಿಸಿದ್ದು, ನ.13ರಂದು ವಿಚಾರಣೆ ನಡೆಸುವುದಾಗಿ ಹೇಳಿದೆ.

ಹಿರಿಯ ವಕೀಲ ಮ್ಯಾಥ್ಯೂ ಜೆ. ನೆಡುಂಪರ ಅವರು ಈ ಸಂಬಂಧ ಸುಪ್ರೀಂಕೋರ್ಟ್‍ಗೆ ಮನವಿ ಸಲ್ಲಿಸಿ ತುರ್ತಾಗಿ ಆದೇಶದ ಪರಾಮರ್ಶೆ ನಡೆಸುವಂತೆ ಕೋರಿದ್ದರು. ಅವರ ನಿವೇದನೆಗಳನ್ನು ಸರ್ವೋಚ್ಛ ನ್ಯಾಯಾಲಯ ಮಾನ್ಯ ಮಾಡಿದೆ. ತನ್ನ ಐತಿಹಾಸಿಕ ತೀರ್ಪಿನ ಪರಾಮರ್ಶೆಯ ದಿನಾಂಕವನ್ನು ಇಂದು ನಿರ್ಧರಿಸುವುದಾಗಿ ನಿನ್ನೆ ಹೇಳಿತ್ತು. ಆದೇಶ ಪರಾಮರ್ಶೆ ಮತ್ತು ಮರು ಪರಿಶೀಲನೆ ಕೋರಿ 19 ಅರ್ಜಿಗಳಿವೆ. ಇವುಗಳ ವಿಚಾರಣೆಯನ್ನು ನ.13ರಂದು ಕೈಗೆತ್ತಿಕೊಳ್ಳುವುದಾಗಿ ಪೀಠ ತಿಳಿಸಿದೆ.

Facebook Comments