SPECIAL STORY : ಡಿಜಿಟಲ್ ಆ್ಯಡ್ ಏಜೆನ್ಸಿಯಲ್ಲಿ ಶ್ವಾನಗಳ ಕಾರುಬಾರು

ಈ ಸುದ್ದಿಯನ್ನು ಶೇರ್ ಮಾಡಿ

Dogs--01
ಬ್ಯಾಂಕಾಕ್‍ನ ಡಿಜಿಟಲ್ ಜಾಹೀರಾತು ಕಂಪನಿಯಲ್ಲಿ ಕೇವಲ ಮನುಷ್ಯರಷ್ಟೇ ಅಲ್ಲ ಅಲ್ಲಿನ ಡೆಸ್ಕ್‍ಗಳಲ್ಲಿ ಮುದ್ದಾದ ನಾಯಿಗಳೂ ಕಂಡುಬರುತ್ತವೆ. ಇದಕ್ಕೆ ಕಾರಣವೇನು..? ತಿಳಿದುಕೊಳ್ಳುವ ಕುತೂಹಲವೇ.. ಅದನ್ನು ತಿಳಿಯಲು ಈ ಸ್ವಾರಸ್ಯಕರ ಸ್ಟೋರಿ ನೋಡಿ.

ಥೈಲೆಂಡ್ ರಾಜಧಾನಿ ಬ್ಯಾಂಕಾಕ್‍ನ ವೈಡಿಎಂ ಎಂಬ ಡಿಜಿಟಲ್ ಅಡ್ವಟೈಸಿಂಗ್ ಏಜೆನ್ಸಿಯಲ್ಲಿ ಉದ್ಯೋಗಿಗಳೊಂದಿಗೆ ಶ್ವಾನಗಳೂ ಕಂಡುಬರುತ್ತವೆ. ಈ ಸಂಸ್ಥೆಯಲ್ಲಿ ನಾಯಿಗಳೊಂದಿಗೆ ಕೆಲಸ ಮಾಡಲು ಸಿಬ್ಬಂದಿಗೆ ಅವಕಾಶ ನೀಡಲಾಗಿದೆ. ಬಹುಶಃ ಕಚೇರಿಗಳಲ್ಲಿ ಶ್ವಾನಗಳೊಂದಿಗೆ ಉದ್ಯೋಗಿಗಳು ಕೆಲಸ ಮಾಡುವ ವಿದ್ಯಮಾನ ವಿಶ್ವದ ಬೇರಲ್ಲೂ ಕಾಣಸಿಗುವುದಿಲ್ಲ.

ಈ ಡಿಜಿಟಲ್ ಆಡ್ ಏಜೆನ್ಸಿಯಲ್ಲಿ ಕೆಲಸದ ಒತ್ತಡ ವಿಪರೀತ. ಇದನ್ನು ಮನಗಂಡ ವೈಡಿಎಂ ಸಂಸ್ಥೆ ಮಾಲೀಕರಾದ 42 ವರ್ಷಗಳ ಅನಕನರ್ತ್ ಕಾಂಗ್ ಪೊನಿಚ್ಕು ಉದ್ಯೋಗಿಗಳ ವರ್ಕ್ ಪ್ರೆಷರ್ ಕಡಿಮೆ ಮಾಡಲು ಹೊಸ ಆಲೋಚನೆ ಯನ್ನು ಕಾರ್ಯರೂಪಕ್ಕೆ ತಂದರು. ತಮ್ಮ ಮುದ್ದಿನ ಸಾಕು ಪ್ರಾಣಿಗಳನ್ನು ಕಚೇರಿಗೆ ಕರೆತರಲು ಸಿಬ್ಬಂದಿಗೆ ಅವಕಾಶ ನೀಡಿದರು. ಅಚ್ಚುಮೆಚ್ಚಿನ ಸಾಕು ಪ್ರಾಣಿಗಳ ಒಡನಾಟದಲ್ಲಿ ಉದ್ಯೋಗಿಗಳ ಒತ್ತಡವು ಕಡಿಮೆಯಾಯಿತು ಮತ್ತು ಕೆಲಸವೂ ಸುಗಮವಾಯಿತು.

Dogs--02

ನಮ್ಮ ಸುತ್ತ ಸಾಕು ಪ್ರಾಣಿಗಳಿದ್ದರೆ ರಿಲ್ಯಾಕ್ಸ್ ವಾತಾವರಣ ಸೃಷ್ಟಿಯಾಗಲು ನೆರವಾಗುತ್ತದೆ. ನಮ್ಮ ಎನರ್ಜಿ ಪುನಃಶ್ಚೇತನಗೊಳ್ಳಲು ಸಹಕಾರಿಯಾಗುತ್ತದೆ. ಅಲ್ಲದೇ ನಮ್ಮ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದ ಎಂದು ವೈಡಿಎಂ ಮಾಲೀಕರು ಹೇಳುತ್ತಾರೆ.

ಇತ್ತೀಚಿನ ದಿನಗಳಲ್ಲಿ ಥೈಲೆಂಡ್‍ನಲ್ಲಿ ಕೆಲ ಕಂಪನಿಗಳಲ್ಲೂ ಉತ್ಪಾದಕತೆಯನ್ನು ಹೆಚ್ಚಿಸಲು ಸಾಕುಪ್ರಾಣಿಗಳನ್ನು ತಮ್ಮೊಂದಿಗೆ ಕಚೇರಿಗೆ ತರಲು ಮಾಲೀಕರು ಅನುಮತಿ ನೀಡುತ್ತಿದ್ದಾರೆ. ಈ ಪರಿಪಾಠ ಬೆಳೆಯುತ್ತಿದೆ. ಕಾರ್ಯದ ಸ್ಥಳಗಳಲ್ಲಿ ಮಾನವನ ಮಿತ್ರನಾಗಿ ರುವ ಶ್ವಾನಗಳು ಮತ್ತು ಸಾಕು ಪ್ರಾಣಿಗಳು ಇದ್ದರೆ ಕೆಲಸದ ಒತ್ತಡ ಕಡಿಮೆಯಾಗುತ್ತದೆ ಎಂಬುದು ಇತ್ತೀಚಿನ ಸಂಶೋಧನೆಗಳಿಂದ ತಿಳಿದುಬಂದಿದೆ.

Facebook Comments