ವಿಂಡೀಸ್ ವಿರುದ್ದದ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತಕ್ಕೆ ಜಯ

ಈ ಸುದ್ದಿಯನ್ನು ಶೇರ್ ಮಾಡಿ

T-210

ಕೋಲ್ಕತ್ತಾ. ನ.04 : ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ 5 ವಿಕೆಟ್ ಗಳ ಜಯ ಸಾಧಿಸುವ ಮೂಲಕ ಟಿ-20 ಸರಣಿಯಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಟೆಸ್ಟ್ ಹಾಗೂ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಪ್ರವಾಸಿ ವೆಸ್ಟ್‌ಇಂಡೀಸ್ ತಂಡ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಭಾರತದ ವಿರುದ್ಧ ಮೊದಲ ಟ್ವೆಂಟಿ-20 ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 109 ರನ್ ಗಳಿಸಿತು.

ಆರಂಭಿಕನಾಗಿ ಕಣಕ್ಕಿಳಿದ ದಿನೇಶ್ ರಾಮ್ದಿನ್ ಕೇವಲ 2 ರನ್ ಸಿಡಿಸಿ ಔಟಾದರು. ಶೈ ಹೋಪ್ 14 ರನ್ ಕಾಣಿಕೆ ನೀಡಿದರು. ಶಿಮ್ರೊನ್ ಹೆಟ್ಮೆಯರ್ 10 ರನ್ ಸಿಡಿಸಿ ನಿರ್ಗಮಿಸಿದರೆ, ಹಿರಿಯ ಕ್ರಿಕೆಟಿಗ ಕೀರನ್ ಪೊಲಾರ್ಡ್ 14 ರನ್ ಸಿಡಿಸಿ ಔಟಾದರು. ಡರೆನ್ ಬ್ರಾವೋ, ರೋವ್ಮಾನ್ ಪೊವೆಲ್ ಹಾಗೂ ಕಾರ್ಲೋಸ್ ಬ್ರಾಥ್ವೈಟ್ ಕೂಡ ಆಸರೆಯಾಗಲಿಲ್ಲ. ಫಾಬಿಯನ್ ಅಲೆನ್ ಸಿಡಿಸಿದ 27 ರನ್‌ಗಳ ನೆರವಿನಿಂದ ವಿಂಡೀಸ್ 90 ರನ್ ಗಡಿ ದಾಟಿತು. ಈ ಮೂಲಕ ನಿಗಧಿತ 20 ಓವರ್‌ಗಳಲ್ಲಿ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 109 ರನ್ ಸಿಡಿಸಿತು. ವಿಂಡೀಸ್ ಪರ ಫ್ಯಾಬಿಯಾನ್ ಆಯಲೆನ್(27) ಗರಿಷ್ಠ ಸ್ಕೋರ್ ದಾಖಲಿಸಿದರು.

ಚೊಚ್ಚಲ ಪಂದ್ಯದಲ್ಲಿ ಕ್ರುನಾಲ್ ಪಾಂಡ್ಯ ಹಾಗೂ ಖಲೀಲ್ ಅಹಮ್ಮದ್ ಮೊದಲ ವಿಕೆಟ್ ಸಂಭ್ರಮ ಆಚರಿಸಿದರು. ಇನ್ನು ಕುಲ್‌ದೀಪ್ ಯಾದವ್ 3 ವಿಕೆಟ್ ಪಡೆಯುವ ಮೂಲಕ ವಿಂಡೀಸ್‌ ಮೇಲೆ ಸವಾರಿ ಮಾಡಿದರು.

ಇನ್ನು ಸುಲಭದ ಟಾರ್ಗೆ ಬೆನ್ನತ್ತಿದ್ದ ಭಾರತ ಆರಂಭವಾದಲ್ಲಿ ವಿಕೆಟ್ ಕಳೆದುಕೊಂಡು ರನ್ ಗಳಿಸಲು ಪರದಾಡಿತು.
ನಾಯಕ ರೋಹಿತ್ ಶರ್ಮಾ 6 ರನ್ ಸಿಡಿಸಿ ಔಟಾದರು. ಮತ್ತೊರ್ವ ಆರಂಭಿಕ ಶಿಖರ್ ಧವನ್ 3 ರನ್ ದಾಟಲಿಲ್ಲ. 16 ಗಳಿಸಿ ಔಟಾಗಲುವ ಮೂಲಕ ಏಕದಿನ ಪಂದ್ಯದಲ್ಲಿ ಬೆಂಚ್ ಕಾದಿದ್ದ ಕನ್ನಡಿಗ ಕೆಎಲ್ ರಾಹುಲ್ ಸಿಕ್ಕ ಅವಕಾಶ ಉಪಯೋಗಿಸಲಿಲ್ಲ. ಎಂ.ಎಸ್ ಧೋನಿ ಬದಲು ಚುಟುಕು ಮಾದರಿಯಲ್ಲಿ ಅವಕಾಶ ಪಡೆದ ಯುವ ಕ್ರಿಕೆಟಿಗ ರಿಷಬ್ ಪಂತ್ 1 ರನ್ ಸಿಡಿಸಿ ನಿರ್ಗಮಿಸಿದರು. ನಂತರ ಬಂದ ದಿನೇಶ್ ಕಾರ್ತಿಕ್(31) ಟೀಮ್ ಇಂಡಿಯಾಗೆ ಆಸರೆಯಾದರು. ಅಂತಿಮವಾಗಿ ಭಾರತ ಇನ್ನೂ 13 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು. ಕೆ ಹೆಚ್ ಪಾಂಡ್ಯ ಔಟಾಗದೆ 21 ರನ್ ಗಳಿಸುವ ಮೂಲಕ ಮುತ್ತಮ ಕೊಡುಗೆ ನೀಡಿದರು.
ಸಂಕ್ಷಿಪ್ತ ಸ್ಕೋರ್ :
ವೆಸ್ಟ್ ಇಂಡೀಸ್ : 109/8
ಭಾರತ : 110/5

Facebook Comments