ಸರಕಾರಿ ನೌಕರರ ಸಂಘದಿಂದ ಕನ್ನಡ ನಾಮಫಲಕ ಅಳವಡಿಕೆ

ಈ ಸುದ್ದಿಯನ್ನು ಶೇರ್ ಮಾಡಿ

karurಕಡೂರು, ನ.4- ಕರ್ನಾಟಕ ರಾಜ್ಯ ಸರಕಾರಿ ನೌಕರರ ಕಡೂರು ತಾಲ್ಲೂಕು ಘಟಕದಿಂದ ರಾಷ್ಟ್ರೀಯ ಹೆದ್ದಾರಿ 206ರ ಪಲ್ಸ್ ಕ್ಲಬ್ ಮಸಾಲಡಾಬಾದ ಮರವಂಜಿ ರಸ್ತೆಯ ಬಿಜಿಎಸ್ ಶಾಲೆ ಬಳಿ ಹಾಗೂ ಚಿಕ್ಕಮಗಳೂರು ರಸ್ತೆಗಳಲ್ಲಿ ಸಂಚಾರಿ ನಿಯಮ ಪಾಲಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ನಾಮಫಲಕ ಅಳವಡಿಸುವ ಮೂಲಕ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ತಾಲ್ಲೂಕು ಅದ್ಯಕ್ಷ ವೈ.ಎಂ. ತಿಪ್ಪೇಶ್ ಮಾತನಾಡಿ, ಸಾರ್ವಜನಿಕರು ಕಡ್ಡಾಯವಾಗಿ ಸಂಚಾರಿ ನಿಯಮ ಪಾಲಿಸಬೇಕಿದೆ. ವಾಹನಗಳನ್ನು ಚಾಲನೆ ಮಾಡುವಾಗ ಮದ್ಯಪಾನ ಮಾಡಬಾರದು. ಅವಸರದ ಚಾಲನೆ ಅಪಘಾತಕ್ಕೆ ಕಾರಣ ಎಂಬ ಸಂಚಾರಿ ನಿಯಮದ ಬಗ್ಗೆ ಚಾಲಕರಿಗೆ ಅರಿವು ಮೂಡಿಸುವ ಈ ನಾಮಫಲಕ ಉಪಯುಕ್ತ ಎಂದರು.ಸಂಘದ ಅಡಿಯಲ್ಲಿ ಅನೇಕ ಗುರುತರವಾದ ಸಾರ್ವಜನಿಕರಿಗೆ ಹಾಗೂ ಸರಕಾರಿ ನೌಕರರಿಗೆ ಉಪಯುಕ್ತವಾದ ಕೆಲಸಗಳನ್ನು ಮಾಡಲಾಗುತ್ತಿದೆ. ಅಪೋಲೋ ಆಸ್ಪತ್ರೆಯ ನುರಿತ ವೈದ್ಯರನ್ನು ಕರೆಸಿ ಸರಕಾರಿ ನೌಕರರ ಕುಟುಂಬದವರಿಗೆ ಹೃದಯ ತಪಾಸಣೆ ಮಾಡಿಸಲಾಗಿದೆ. ಗಾಂಧಿ ಜಯಂತಿಯಂದು ಸಾರ್ವಜನಿಕ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು-ಹಾಲು ವಿತರಣೆ ಕಾರ್ಯ ಮಾಡಲಾಗಿದೆ ಎಂದರು.ಮುಂದಿನ ದಿನಗಳಲ್ಲಿ ಸಂಘದ ವತಿಯಿಂದ ವಯೋವೃದ್ದ ರೋಗಿಗಳಿಗೆ ಸಾರ್ವಜನಿಕ ಆಸ್ಪತ್ರೆಯ ಒಳಗಡೆ ಕರೆದುಕೊಂಡು ಹೋಗಲು ವಿಲ್ ಚೇರ್ ನೀಡಲಾಗುವುದು. ಸರಕಾರಿ ನೌಕರರು ಸಂಕಷ್ಟಕ್ಕೆ ಸಿಲುಕಿದಾಗ ಅವರಿಗೆ ಸಂಘ ಸ್ಪಂದಿಸಲಿದೆ. ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅತಿಹೆಚ್ಚು ಅಂಕಪಡೆದ ಸರಕಾರಿ ನೌಕರರ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಗಿದೆ ಎಂದರು.

ಎ.ಲಕ್ಷ್ಮಣ್, ಎಂ.ಎಲ್. ಸೋಮಶೇಖರ್, ನಾಗರಾಜ್, ಸುರೇಶ್, ರಾಜೇಶ್, ಆನಂದಮೂರ್ತಿ, ರಾಜು, ಮಂಜುನಾಥ ಪ್ರಸನ್ನ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ್ ಅಧ್ಯಕ್ಷೆ ರತ್ನಮ್ಮ ಮತ್ತಿತರಿದ್ದರು.

Facebook Comments