ಟೀಮ್ ಇಂಡಿಯಾ ಆಟಗಾರರಿಗೆ ಸಚಿನ್ ಕೊಟ್ಟ ಸಲಹೆ ಏನು..?

ಈ ಸುದ್ದಿಯನ್ನು ಶೇರ್ ಮಾಡಿ

Tendulkarಮುಂಬೈ, ನ.4- ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವಕಪ್ ಗೆಲ್ಲುವ ಫೇವರೀಟ್ ತಂಡವಾಗಿ ವಿರಾಟ್ ಕೊಹ್ಲಿ ಸಾರಥ್ಯದ ಟೀಂ ಇಂಡಿಯಾ ಬಿಂಬಿಸಿ ಕೊಂಡಿದೆ ಎಂದು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಟೀಂ ಇಂಡಿಯಾದಲ್ಲಿ ಈಗ ಹಿರಿಯ ಹಾಗೂ ಕಿರಿಯ ಆಟಗಾರರನ್ನು ಒಳಗೊಂಡಿದ್ದು ವಿಶ್ವದ ನಂಬರ್ 1 ತಂಡವಾಗಿ ಹೊರಹೊಮ್ಮಿದೆ. ಮುಂದಿನ ವಿಶ್ವಕಪ್‍ನಲ್ಲಿ ತಂಡವನ್ನು ಆಯ್ಕೆ ಮಾಡುವುದು ಕೂಡ ದೊಡ್ಡ ಸವಾಲಾಗಿಯೇ ಪರಿಣಮಿಸಿದೆ. ಸತತ ಸರಣಿಗಳನ್ನು ಆಡುತ್ತಿರುವ ಆಟಗಾರರಿಗೆ ವಿಶ್ವಕಪ್‍ಗೂ ಮುನ್ನ ಬರುವ ಐಪಿಎಲ್ ಕೂಡ ಅವರ ದೈಹಿಕ ಸಾಮಥ್ರ್ಯ ಹಾಗೂ ಫಿಟ್‍ನೆಸ್ ಅನ್ನು ತೋರಿಸಲು ಉತ್ತಮ ವೇದಿಕೆಯಾಗಿದೆ.

ಐಪಿಎಲ್‍ನಲ್ಲಿ ಪಾಲ್ಗೊಳ್ಳುವ ಆಟಗಾರರು ಬಲು ಎಚ್ಚರಿಕೆಯಿಂದ ಆಡಿದರೆ ವಿಶ್ವಕಪ್ ದೃಷ್ಟಿಯಿಂದ ಒಳಿತು. ಒಂದು ವೇಳೆ ಐಪಿಎಲ್‍ನಲ್ಲಿ ಆಟಗಾರರು ಗಾಯಗೊಂಡರೆ ಅದು ವಿಶ್ವಕಪ್‍ನ ಮೇಲೂ ಪರಿಣಾಮ ಬೀರಬಹುದು ಎಂದು ಕೂಡ ಲಿಟ್ಲ್ ಮಾಸ್ಟರ್ ಹೇಳಿದ್ದಾರೆ.

2015ರಲ್ಲಿ ನಡೆದ ವಿಶ್ವಕಪ್‍ನಲ್ಲಿ ಮಹೇಂದ್ರಸಿಂಗ್ ಧೋನಿ ಸಾರಥ್ಯದ ಟೀಂ ಇಂಡಿಯಾ ಉತ್ತಮ ಪ್ರದರ್ಶನವನ್ನು ತೋರಿದರೂ ಕೂಡ ಸೆಮಿಫೈನಲ್‍ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಾಣುವ ಮೂಲಕ ನಿರಾಸೆ ಅನುಭವಿಸಿತ್ತು. ಮುಂಬರುವ ವಿಶ್ವಕಪ್‍ನಲ್ಲಾದರೂ ವಿರಾಟ್ ಕೊಹ್ಲಿ ಪಡೆ ಪ್ರಶಸ್ತಿಯನ್ನು ಗೆದ್ದು ಬೀಗಲಿ ಎಂದು ಸಚಿನ್ ಶುಭ ಕೋರಿದರು.

Facebook Comments