ಡಿಸಿಪಿ ಅಣ್ಣಾಮಲೈ ಎದುರು ಹಾಜರಾಗುವರೇ ದುನಿಯಾ ವಿಜಯ್..?

ಈ ಸುದ್ದಿಯನ್ನು ಶೇರ್ ಮಾಡಿ

Duniya-Vijay

ಬೆಂಗಳೂರು, ನ.5-ದುನಿಯಾ ವಿಜಯ್ ಸೇರಿದಂತೆ ಏಳು ಮಂದಿಗೆ ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ಬುಧವಾರ ಅಥವಾ ಶುಕ್ರವಾರ ದಕ್ಷಿಣ ವಿಭಾಗದ ಡಿಸಿಪಿ ಅಣ್ಣಾಮಲೈ ಅವರ ಎದುರು ಹಾಜರಾಗುವ ಸಾಧ್ಯತೆ ಇದೆ. ದುನಿಯಾವಿಜಯ್ ಅವರ ಮೊದಲ ಪತ್ನಿ ನಾಗರತ್ನ ಹಾಗೂ ಕೀರ್ತಿ ಗೌಡ ನಡುವೆ ಜಗಳ ನಡೆದು ಗಿರಿನಗರ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿತ್ತು.

ಅಲ್ಲದೆ, ಹೊಸಕೆರೆಹಳ್ಳಿಯ ದುನಿಯಾವಿಜಯ್ ಅವರ ಮನೆಗೆ ಪುತ್ರಿ ಮೋನಿಕಾ ಹೋಗಿದ್ದಾಗ ತಮ್ಮ ಮೇಲೆ ತಂದೆಯೇ ಹಲ್ಲೆ ನಡೆಸಿದ್ದರೆಂದು ಗಿರಿನಗರ ಠಾಣೆಗೆ ಸೆ.24ರಂದು ಮಗಳು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್, ಪತ್ನಿ ನಾಗರತ್ನ, ಎರಡನೇ ಪತ್ನಿ ಕೀರ್ತಿಗೌಡ, ನಾಗರತ್ನ ಸಹೋದರ ವಿಜಯ್, ಪೋಷಕರು ಹಾಗೂ ಚಾಲಕ ಸೇರಿ 7 ಮಂದಿ ಕುಟುಂಬದ ಸದಸ್ಯರಿಗೆ ಗಿರಿನಗರ ಠಾಣೆ ಪೊಲೀಸರು ನೋಟೀಸ್ ನೀಡಿ ಡಿಸಿಪಿ ಅಣ್ಣಾಮಲೈ ಅವರ ಎದುರು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ಬುಧವಾರ ಅಥವಾ ಶುಕ್ರವಾರ ಹಾಜರಾಗುವ ನಿರೀಕ್ಷೆ ಇದೆ.

Facebook Comments