ದ್ವಿಚಕ್ರ ವಾಹನ ಕಳ್ಳರ ಬಂಧನ, 15 ರಾಯಲ್ ಎನ್‍ಫೀಲ್ಡ್ ಬೈಕ್ ವಶ

ಈ ಸುದ್ದಿಯನ್ನು ಶೇರ್ ಮಾಡಿ

bike

ಬೆಂಗಳೂರು, ನ.6- ನಗರದಲ್ಲಿ ಬೈಕ್‍ಗಳನ್ನು ಕಳ್ಳತನ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಕೆಆರ್ ಪುರ ಠಾಣೆ ಪೊಲೀಸರು ಬಂಧಿಸಿ ಈತನ ಹೇಳಿಕೆ ಮೇರೆಗೆ ಆಂಧ್ರ ಪ್ರದೇಶದ ಮದನಪಲ್ಲಿ ಸಬ್‍ಜೈಲಿನಲ್ಲಿರುವ ಐದು ಮಂದಿಯನ್ನು ವಶಕ್ಕೆ ಪಡೆದು 24 ಲಕ್ಷ ರೂ. ಮೌಲ್ಯದ 15 ರಾಯಲ್ ಎನ್‍ಫೀಲ್ಡ್ ವಾಹನಗಳನ್ನು ವಶಪಡಿಸಿಕೊಂಡಿದೆ.

ನಗರದಲ್ಲಿ ಆಗಿಂದಾಗ್ಗೆ ವಾಹನಕಳವು ಪ್ರಕರಣಗಳು ಹೆಚ್ಚಾಗುತ್ತಿದ್ದ ಬಗ್ಗೆ ಗಂಭೀರವಾಗಿ ಪರಿಗಣಿಸಿದ್ದ ವೈಟ್‍ಫೀಲ್ಡ್ ಉಪವಿಭಾಗದ ಎಸಿಪಿಯವರು, ಕೆಆರ್ ಪುರ ಠಾಣೆ ಇನ್ಸ್‍ಪೆಕ್ಟರ್ ಮಂಜುನಾಥ್, ಅಪರಾಧ ಪತ್ತೆವಿಭಾಗದ ಸಿಬ್ಬಂದಿಗಳಾದ ಮುನಿರಾಜು, ಪ್ರಭಾಕರ್, ಅಪ್ರೋಜ್‍ಪಾಷ, ಹರೀಶ್, ಸಿದ್ದಪ್ಪ ಗದ್ಯಾಳ್ ಮಂಜುನಾಥ, ಜಟ್ಟಿಂಗರಾಯ, ಸತೀಶ್ ಅವರನ್ನೊಳಗೊಂಡ ವಿಶೇಷ ತಂಡವು ಕಾರ್ಯಾಚರಣೆ ಕೈಗೊಂಡಿತ್ತು.

ಅಯ್ಯಪ್ಪನಗರ ಬಳಿಯ ಸೀ ಕಾಲೇಜು ಆರ್ಚ್ ಸಮೀಪ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯಲ್ಲಪ್ಪ ಲವರಾಜು ಎಂಬಾತನನ್ನು ಈ ತಂಡ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಹಲವು ಮಾಹಿತಿಗಳನ್ನು ಬಾಯಿಬಿಟ್ಟಿದ್ದಾನೆ.ಆದರಂತೆ ಆಂಧ್ರ ಪ್ರದೇಶದ ಮದನಪಲ್ಲಿ ಸಬ್‍ಜೈಲಿನಲ್ಲಿದ್ದ ರವಿತೇಜ, ಸೋಹೆಲ್, ಯುವತೇಜ, ಧರ್ಮತೇಜ ಮತ್ತು ಯರ್ರಿರೆಡ್ಡಿಪ್ರಸಾದ್‍ನನ್ನು ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದು ವಿಚಾರಣೆ ಮಾಡಿದ್ದು, ಆರೋಪಿಗಳ ಹೇಳಿಕೆ ಮೇರೆಗೆ ಈ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.ಆರೋಪಿಗಳ ಬಂಧನದಿಂದ ಕೆಆರ್ ಪುರ ಪೊಲೀಸ್ ಠಾಣೆ, ರಾಮಮೂರ್ತಿನಗರ, ಸದಾಶಿವನಗರ ಮತ್ತು ಪುಟ್ಟೇನಹಳ್ಳಿ ಪೊಲೀಸ್ ಠಾಣೆಗಳ ಪ್ರಕರಣಗಳು ಪತ್ತೆಯಾಗಿವೆ.

Facebook Comments