ಟಗರು ಚಿತ್ರದ ಡಾಲಿ ಸ್ಟೈಲ್’ನಲ್ಲಿ ಸ್ನೇಹಿತನಿಗೇ ಮಹೂರ್ತ ಇಟ್ಟು ಮುಗಿಸಿದ ಕಿರಾತಕರು..!

ಈ ಸುದ್ದಿಯನ್ನು ಶೇರ್ ಮಾಡಿ

Tagaru-dolly--01

ದಾವಣಗೆರೆ, ನ.7- ಟಗರು ಚಿತ್ರದ ಡಾಲಿ ಪಾತ್ರಧಾರಿಯಿಂದ ಪ್ರೇರೇಪಣೆಗೊಂಡ ಯುವಕರ ಗುಂಪೊಂದು ರೌಡಿಯಾಗಲೇಬೇಕು ಎಂಬ ಹಟಕ್ಕೆ ಬಿದ್ದು ತಮ್ಮ ಸ್ನೇಹಿತನನ್ನೇ ಕೊಲೆ ಮಾಡಿರುವ ಘಟನೆ ಹರಿಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಶಿವರಾಜ್‍ಕುಮಾರ್ ನಾಯಕತ್ವದ ಟಗರು ಚಿತ್ರದಲ್ಲಿ ಧನಂಜಯ್ ಮಾಡಿರುವ ಡಾಲಿ ಪಾತ್ರಧಾರಿಯಂತೆ ತಾವು ರೌಡಿಸಂಗೆ ಇಳಿಯಬೇಕು ಎಂಬ ಉದ್ದೇಶದಿಂದ ಸ್ನೇಹಿತನನ್ನೇ ಕೊಲೆ ಮಾಡಿದ ಪ್ರಸನ್ನ ಅಲಿಯಾಸ್ ಡಾಲಿ, ಪಚ್ಚಿ ಅಲಿಯಾಸ್ ಪ್ರಶಾಂತ್ ಹಾಗೂ ಅಪ್ರಾಪ್ತ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಮೂವರು ಆರೋಪಿಗಳು ಡಾಲಿ ಪಾತ್ರಧಾರಿಯಂತೆ ಬಿಯರ್ ಕುಡಿದುಕೊಂಡು ತಮ್ಮ ಸ್ನೇಹಿತ ಕಾಂತರಾಜನ ಕತ್ತು ಸೀಳಿ ಕೊಲೆ ಮಾಡಿದ್ದರು.

ಅ.27ರಂದು ಹರಿಹರನಗರದಲ್ಲಿ ಕೊಲೆ ನಡೆದಿದ್ದು, ಹರಿಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಬೆನ್ನತ್ತಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  ಟಗರು ಸಿನಿಮಾದಲ್ಲಿ ಡಾಲಿ ಪಾತ್ರ ನೋಡಿ ರೌಡಿಸಂಗೆ ಇಳಿದಿದ್ದು, ರೌಡಿಸಂನಲ್ಲಿ ಹೆಸರು ಮಾಡಲು ಕೊಲೆ ಮಾಡಿದ್ದೇವೆ ಎಂದು ಆರೋಪಿಗಳು ತಪೊ್ಪಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Facebook Comments