ಗಡಿಯಲ್ಲಿ ಯೋಧರ ಜತೆ ಪ್ರಧಾನಿ ದೀಪಾವಳಿ ಸೆಲೆಬ್ರೆಷನ್, ಕೇದಾರನಾಥನಿಗೆ ಮೋದಿ ವಿಶೇಷ ಪೂಜೆ

ಈ ಸುದ್ದಿಯನ್ನು ಶೇರ್ ಮಾಡಿ

Modi--01
ಉತ್ತರಕಾಶಿ(ಉತ್ತರಾಖಂಡ್), ನ.7- ಪ್ರಧಾನಿ ನರೇಂದ್ರ ಮೋದಿ ಈ ಬಾರಿಯೂ ದೇಶ ಕಾಯುವ ಯೋಧರೊಂದಿಗೆ ಸಂಭ್ರಮದಿಂದ ದೀಪಾವಳಿ ಆಚರಿಸಿದ್ದಾರೆ. ಉತ್ತರಾಖಂಡ್‍ನ ಉತ್ತರಕಾಶಿ ಬಳಿ ಇರುವ ಹರ್ಸಿಲ್ ಸಮೀಪದ ಭಾರತ-ಚೀನಾ ಗಡಿಯಲ್ಲಿ ಮೋದಿ ಸೇನೆ ಮತ್ತು ಇಂಡೋ ಟಿಬಿಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ಯೋಧರೊಂದಿಗೆ ದೀಪಾವಳಿ ಆಚರಿಸಿದರು.

ದೇಶದ ರಕ್ಷಣೆಗೆ ನಿಂತಿರುವ ಸೈನಿಕರಿಗೆ ಸಿಹಿ ಹಂಚಿ, ಉಡುಗೊರೆಗಳನ್ನು ನೀಡಿದ ಪ್ರಧಾನಿ ಹಬ್ಬ ಆಚರಿಸಿದರು. ಅತ್ಯಂತ ಪ್ರತಿಕೂಲ ಹವಾಮಾನದ ನಡುವೆಯೂ ಯೋಧರ ದಿಟ್ಟತನದ ಕಾರ್ಯವನ್ನು ಪ್ರಶಂಸಿಸಿದ ಅವರು ಯೋಧರಿಗೆ ಅಗತ್ಯ ಸೌಲಭ್ಯ ಒದಗಿಸುವುದು ಸರ್ಕಾರ ಆದ್ಯತೆ ಎಂದರು. ನಮ್ಮ ಯೋಧರು ಸದೃಢ ಭಾರತದ ಸಂಕೇತ 125 ಕೋಟಿ ಭಾರತೀಯರ ಭವಿಷ್ಯ ಮತ್ತು ಕನಸುಗಳನ್ನು ರಕ್ಷಿಸುವುದಲ್ಲಿ ಯೋಧರ ಕಾರ್ಯ ಮಹತ್ವದ್ದು ಎಂದು ಮೋದಿ ಮೆಚ್ಚುಗೆ ಸೂಚಿಸಿದರು.

Modi--05

ಜನರಲ್ಲಿ ಭದ್ರತೆ, ಸುರಕ್ಷತೆ ಮತ್ತು ನಿರ್ಭೀತಿಯ ಪ್ರಜ್ಞೆ ಸಾರುವಲ್ಲಿ ಯೋಧರ ಪಾತ್ರ ಅತಿ ಮುಖ್ಯ. ಅವರ ಶಿಸ್ತು ಮತ್ತು ಬದ್ಧತೆ ಜನರ ರಕ್ಷಣೆಗೆ ಪೂರಕವಾಗಿದೆ ಎಂದರು. ದೀಪಾವಳಿ ಕತ್ತಲನ್ನು ಮತ್ತು ಭಯವನ್ನು ಹೊಡೆದೊಡಿಸಿ ಬೆಳಕು ಪಸರಿಸುವ ಮಹಾ ಹಬ್ಬ ಎಂದು ಬಣ್ಣಿಸಿದ ಮೋದಿ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗಿನಿಂದಲೂ ಪ್ರತಿ ದೀಪಾವಳಿಯನ್ನು ನಾನು ಯೋಧರೊಂದಿಗೆ ಆಚರಿಸುತ್ತಿದ್ದೇನೆ. ಅದು ಈಗಲೂ ಮುಂದುವರಿದಿದೆ ಎಂದು ಪ್ರಧಾನಿ ಹೇಳಿದರು.

DrYFB9iV4AA3dOb

# ಕೇದಾರನಾಥನಿಗೆ ವಿಶೇಷ ಪೂಜೆ:
ಉತ್ತರಾಖಂಡ್ ಭೇಟಿ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ಕೇದಾರನಾಥ್‍ನಿಗೆ ಪೂಜೆ ಸಲ್ಲಿಸಿದ್ದಾರೆ.2013ರಲ್ಲಿ ಉಂಟಾದ ಭಾರೀ ಪ್ರವಾಹ ಸಂಭವಿಸಿ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಇದರ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಅದರ ಪರಿಶೀಲನೆ ನಡೆಸಿದರು. ಕೇದಾರನಾಥ್‍ನಲ್ಲಿ ಕೇದಾರಪುರ ಪಟ್ಟಣ ನಿರ್ಮಾಣಕ್ಕಾಗಿ ನಡೆಯುತ್ತಿರುವ ಕಾಮಗಾರಿಗಳಿಗೆ ಪ್ರಧಾನಿ ಮೋದಿ ವಿಶೇಷ ಆಸಕ್ತಿ ತೋರಿದ್ದಾರೆ. ಕಳೆದ ಆರು ತಿಂಗಳಿಂದ ಎರಡು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ.

DrX6RrWWkAMPIuD

Modi--02

Facebook Comments