ವಿಶ್ವ ದಾಖಲೆ ನಿರ್ಮಿಸಿದ ಯೋಗಿ ಆದಿತ್ಯನಾಥರ ಅಯೋಧ್ಯೆ ದೀಪೋತ್ಸವ

ಈ ಸುದ್ದಿಯನ್ನು ಶೇರ್ ಮಾಡಿ

Deepotsav--1

ಲಕ್ನೋ, ನ.7-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿ ಪ್ರಯುಕ್ತ ನಿನ್ನೆ ಏರ್ಪಡಿಸಿದ್ದ ಅಯೋಧ್ಯ ದೀಪೋತ್ಸವ-2018 ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದೆ. ಸರಯು ನದಿ ದಂಡೆ ಮೇಲೆ 3,01,152 ದೀಪಗಳನ್ನು ಬೆಳಗಿಸುವ ಮೂಲಕ ಈ ದೀಪೋತ್ಸವ ಗಿನ್ನಿಸ್ ವಿಶ್ವ ದಾಖಲೆ ಪುಸ್ತಕದಲ್ಲಿ ಸ್ಥಾನ ಪಡೆಯಿತು.

# ಫೈಸಲಾಬಾದ್ ಇನ್ನು ಮುಂದೆ ಅಯೋಧ್ಯೆ
ಈ ದೀಪೋತ್ಸವ ಸಂದರ್ಭದಲ್ಲಿ ಕೆಲವು ಬಹು ಮುಖ್ಯ ಘೋಷಣೆಗಳನ್ನೂ ಸಹ ಹೊರಡಿಸಲಾಗಿದೆ. ಫೈಸಲಾಬಾದ್ ಜಿಲ್ಲೆಯು ಇನ್ನು ಮುಂದೆ ಅಯೋಧ್ಯೆ ಎಂಬ ಹೆಸರಿನಿಂದ ಗುರುತಿಸಲ್ಪಡುತ್ತದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಅಯೋಧ್ಯೆ ನಮ್ಮ ಸ್ವಾಭಿಮಾನ ಮತ್ತು ಹೆಮ್ಮೆಯ ಸಂಕೇತ. ಅಯೋಧ್ಯೆ ಶ್ರೀರಾಮ ಅವತರಿಸಿದ ಪುಣ್ಯಭೂಮಿ. ಇನ್ನು ಮುಂದೆ ಫೈಸಲಾಬಾದ್ ಅಯೋಧ್ಯೆ ಎಂದು ಕರೆಯಲ್ಪಡುತ್ತದೆ ಎಂದು ಅವರು ತಿಳಿಸಿದರು.

agDmmZEJ DrXz7XeX0AE4BMn (1) DrXz8Q-W4AAlqlC DrXz9IoXcAAzfQ2 DrXz98KXgAAq0Ib DrYRadjU4AA79_D

Facebook Comments