ಟಿಪ್ಪು ಜಯಂತಿಗೆ ವಾಟಾಳ್ ನಾಗರಾಜ್ ಬೆಂಬಲ

ಈ ಸುದ್ದಿಯನ್ನು ಶೇರ್ ಮಾಡಿ

tipuuಬೆಂಗಳೂರು, ನ.8-ಸರ್ಕಾರ ಟಿಪ್ಪು ಜಯಂತಿ ಮಾಡುತ್ತಿರುವುದಕ್ಕೆ ನಮ್ಮ ಸಂಪೂರ್ಣ ಬೆಂಬಲಿವಿದೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ವರ್ಷಗಳಿಂದಲೂ ಟಿಪ್ಪು ಜಯಂತಿ ಆಚರಿಸಿಕೊಂಡು ಬರುತ್ತಿದ್ದೇವೆ. ಈ ವರ್ಷವೂ ಸರ್ಕಾರ ಟಿಪ್ಪು ಜಯಂತಿಯನ್ನು ಆಚರಿಸುತ್ತಿರುವುದು ಒಳ್ಳೆಯದು. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದರು.

ತನ್ನ ಎರಡು ಮಕ್ಕಳನ್ನು ದೇಶಕ್ಕಾಗಿ ಒತ್ತೆ ಇಟ್ಟಂತಹ ಟಿಪ್ಪು ಸುಲ್ತಾನರ ಪ್ರತಿಮೆಯನ್ನು ದೆಹಲಿಯ ಸಂಸತ್ ಮುಂದೆ ಪ್ರತಿಷ್ಠಾಪಿಸಬೇಕು, ಟಿಪ್ಪು ಸುಲ್ತಾನ್ ಜಯಂತಿ ಯನ್ನು ರಾಷ್ಟ್ರೀಯ ಹಬ್ಬವನ್ನಾಗಿ ಆಚರಿಸ ಬೇಕು, ಈ ಜಯಂತಿಯಲ್ಲಿ ರಾಷ್ಟ್ರಪತಿ, ಪ್ರಧಾನ ಮಂತ್ರಿ ಭಾಗವಹಿಸುವಂತಹ ಉನ್ನತ ಮಟ್ಟದ ಕಾರ್ಯ ಕ್ರಮ ವಾಗಬೇಕೆಂದು ವಾಟಾಳ್ ನಾಗರಾಜ್ ಒತ್ತಾಯಿಸಿದರು.ಕನ್ನಡವನ್ನು ಉಳಿಸಿ, ಬೆಳೆಸಬೇಕೆಂದು ಆಗ್ರಹಿಸಿ ಇದೇ 12 ರಂದು ಬೆಳಿಗ್ಗೆ 11.30ರಂದು ಮೈಸೂರು ಬ್ಯಾಂಕ್ ವೃತ್ತದಲ್ಲಿ ಚಳವಳಿ ನಡೆಸಲು ನಿರ್ಧರಿಸಲಾಗಿದೆ.

ಕರ್ನಾಟಕ ಏಕೀಕರಣವಾದ ನಂತರ ಕನ್ನಡ ಭಾಷೆ ಸಮಗ್ರವಾಗಿ ಬೆಳೆಯಲಿಲ್ಲ. ಕನ್ನಡಿಗರಿಗೆ ಉದ್ಯೋಗ ದೊರಕುತ್ತಿಲ್ಲ. ಬೆಂಗಳೂರು ನಗರ ಕನ್ನಡದ ನಗರವಾಗಿ ಬೆಳೆಯಬೇಕು. ಬೆಂಗಳೂರು ನಗರ ಪರಿಭಾಷಿಗರ ದಂಧೆಯಿಂದ ಸೊರಗಿದೆ. ಆದ್ದರಿಂದ ಈ ಚಳವಳಿಯನ್ನು ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡಬಸ್ ನಿಲ್ದಾಣದವರೆಗೆ ಮೆರವಣಿಗೆ ನಡೆಸಲಾಗುವುದು ಎಂದರು.

ಬ್ಯಾಂಕ್‍ಗಳಲ್ಲಿ ಕನ್ನಡಕ್ಕಾಗಿ ಒತ್ತಾಯ, ಕನ್ನಡಿಗರಿಗೆ ಉದ್ಯೋಗಾವಕಾಶ ನೀಡುವುದು, ಕನ್ನಡಕ್ಕೆ ಗೌರವ ನೀಡಬೇಕು, ಹೆಚ್ಚಾಗಿ ಕನ್ನಡ ಸಿನಿಮಾಗಳ ಪ್ರದರ್ಶನವಾಗಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.

Facebook Comments