ಬಸ್ ಡಿಕ್ಕಿಗೆ ಇಬ್ಬರು ಬೈಕ್ ಸಾವರಾರು ಸಾವು

ಈ ಸುದ್ದಿಯನ್ನು ಶೇರ್ ಮಾಡಿ

BUSಕೋಲಾರ, ನ.7-ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ದೀಪಾವಳಿ ಹಬ್ಬಕ್ಕೆ ಮಗಳನ್ನು ಊರಿಗೆ ಕರೆದೊಯ್ಯುತ್ತಿದ್ದ ತಂದೆ ಮತ್ತು ಆತನ ಸ್ನೇಹಿತ ಮೃತಪಟ್ಟಿರುವ ಘಟನೆ ಶ್ರೀನಿವಾಸಪುರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀನಿವಾಸಪುರ ತಾಲೂಕು ಕೊಳಚೂರು ಗ್ರಾಮದ ಮಂಜುನಾಥರೆಡ್ಡಿ (45), ಅರಬ್ ಜಾನ್ (23) ಮೃತಪಟ್ಟ ದುರ್ದೈವಿಗಳು.ಮಂಜುನಾಥರೆಡ್ಡಿ ಅವರ ಪುತ್ರಿ ಚೈತ್ರಾ ಶ್ರೀನಿವಾಸಪುರದ ವಸತಿ ಶಾಲೆಯೊಂದರಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದಾಳೆ. ನಿನ್ನೆ ಸಂಜೆ ಮಂಜುನಾಥರೆಡ್ಡಿ ಮತ್ತು ಅವರ ಸ್ನೇಹಿತ ಅರಬ್ ಜಾನ್ ಶಾಲೆಯಿಂದ ಚೈತ್ರಾಳನ್ನು ಬೈಕ್‍ನಲ್ಲಿ ಕರೆದುಕೊಂಡು ಊರಿಗೆ ವಾಪಸ್ ಹೋಗುತ್ತಿದ್ದರು.ಸಂಜೆ 7.30ರಲ್ಲಿ ಊರಿಗೆ ಸಮೀಪದ ಅರಕೆರೆ ಗೇಟ್ ತಿರುವಿನಲ್ಲಿ ಕೆಎಸ್‌ಆರ್‌ಟಿಸಿಬಸ್ ಬೈಕ್‍ಗೆ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಚೈತ್ರಾಳ ತಂದೆ ಹಾಗೂ ಅವರ ಸ್ನೇಹಿತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚೈತ್ರಾ ಕೂಡ ಗಂಭೀರವಾಗಿ ಗಾಯಗೋಂಡಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಚೈತ್ರಾಳ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮಾಯವಾಗಿ ಅಂಧಕಾರ ತುಂಬಿದೆ. ಕುಟುಂಬ ಸದಸ್ಯರ ಆಕ್ರಂದನ ಮುಗಿಲುಮುಟ್ಟಿತ್ತು.ಶ್ರೀನಿವಾಸಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನನ್ನು ಬಂಧಿಸಿ, ಬಸ್ ವಶಕ್ಕೆ ಪಡೆದಿದ್ದಾರೆ.

Facebook Comments