ಮೈಸೂರಿನಲ್ಲಿ ಈ ಬಾರಿ ಪಟಾಕಿ ಸದ್ದೇ ಇಲ್ಲ…!

ಈ ಸುದ್ದಿಯನ್ನು ಶೇರ್ ಮಾಡಿ

MYSORUಮೈಸೂರು,ನ.8- ಸಾಂಸ್ಕøತಿಕ ನಗರಿಯಲ್ಲಿ ಈ ಬಾರಿ ಪಟಾಕಿ ಹಾವಳಿ ಬಹುತೇಕ ಕಡಿಮೆಯಾಗಿದೆ. ಇದು ದೀಪಾವಳಿ ಹಬ್ಬವೇ ಎಂಬಂತೆ ಅನಿಸುತ್ತಿದೆ.
ನ್ಯಾಯಾಲಯದ ಆದೇಶವೂ ಅಥವಾ ಪೊಲೀಸರ ಕಟ್ಟುನಿಟ್ಟಿನ ಸೂಚನೆಯೋ ತಿಳಿಯದು. ಒಟ್ಟಾರೆ ಕಿವಿಗಡಚಿಕ್ಕುವ ಪಟಾಕಿಯ ಶಬ್ದ ನಗರದಲ್ಲೆಲ್ಲೂ ಕೇಳಿ ಬರಲಿಲ್ಲ.

ನರಕ ಚತುದರ್ಶಿಯಂದು ಸಾಮಾನ್ಯವಾಗಿ ಬೆಳಗಿನ ಜಾವವೇ ಪಟಾಕಿ ಸಿಡಿಸಿ ಹುಡುಗರು ಸಂಭ್ರಮಿಸುತ್ತಿದ್ದರು. ಆದರೆ ಈ ಬಾರಿ ಅಂತಹ ಯಾವುದೇ ಶಬ್ದಗಳು ಕೇಳಿ ಬರಲೇ ಇಲ್ಲ. ನಿನ್ನೆ ಸಂಜೆ ಸಹ ಪಟಾಕಿ ಕಿರಿಕಿರಿ ಇರಲಿಲ್ಲ. ಇಂದು ಅಮಾವಾಸ್ಯೆ ಇರುವುದರಿಂದ ಲಕ್ಷ್ಮಿ ಪೂಜೆ ಮಾಡಲಾಗುತ್ತದೆ. ನಗರದೆಲ್ಲೆಲ್ಲ ಇಂದು ಬೆಳಗ್ಗೆಯೂ ಪಟಾಕಿ ಸದ್ದು ಕೇಳಲಿಲ್ಲ.ಅಧಿಕೃತ ಮಾರಾಟಗಾರರನ್ನು ಹೊರತುಪಡಿ ಮತ್ತ್ಯಾರೂ ಪಟಾಕಿ ಮಾರುವಂತಿಲ್ಲ ಎಂಬ ಪೊಲೀಸರ ಖಡಕ್ ಸೂಚನೆ ಹಿನ್ನೆಲೆಯಲ್ಲಿ ಯಾವುದೇ ಅಂಗಡಿ ಮುಂಗಟ್ಟುಗಳಲ್ಲಿ ಪಟಾಕಿ ಮಾರಾಟ ಮಾಡುತ್ತಿಲ್ಲ.

ನಿಗದಿತ ಸ್ಥಳದಲ್ಲಿ ಪಟಾಕಿ ಮಳಿಗೆ ತೆರೆಯಲು ಪಾಲಿಕೆ ಅವಕಾಶ ನೀಡಿದೆ. ಆದರೆ ಸಾರ್ವಜನಿಕರು ಪಟಾಕಿ ಕೊಳ್ಳಲುಮುಂದೆ ಬಂದಿಲ್ಲ. ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಮಾಧ್ಯಮಗಳು ಸರ್ಕಾರ, ಪೊಲೀಸರು, ನ್ಯಾಯಾಲಯ ತಿಳುವಳಿಕೆ ಮೂಡಿಸುತ್ತಲೆ ಬಂದಿರುವುದರಿಂದ ಜನರು ಕೂಡ ಜಾಗೃತರಾಗಿದ್ದು, ಪಟಾಕಿ ಕೊಳ್ಳುತ್ತಿಲ್ಲ ಎಂದು ಹೇಳಲಾಗುತ್ತಿದೆ.
ನಗರದಲ್ಲಿ ಒಟ್ಟಾರೆ ಪಟಾಕಿ ಹಾವಳಿ ಅಷ್ಟಾಗಿಲ್ಲ. ಹಾಗಾಗಿ ವಾಯುಮಾಲಿನ್ಯ ಕೂಡ ಕಡಿಮೆಯಾಗಿದೆ.

Facebook Comments