ಇಂದಿನ ಪಂಚಾಗ ಮತ್ತು ರಾಶಿಫಲ (08-11-2018 – ಗುರುವಾರ)

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ಧರ್ಮಾಚರಣೆಯಲ್ಲಿ ಹಿರಿಯ, ಆಪ್ತನಾದ ಬಂಧು, ವಿದ್ಯಾವೃದ್ಧ ಮತ್ತು ವಯೋವೃದ್ಧ- ಇವರನ್ನು ಗೌರವಿಸಿ ಸಂತೋಷ ಪಡಿಸಿ ಯಾವಾತನು ಕಾರ್ಯಾ ಕಾರ್ಯಗಳ ವಿಚಾರದಲ್ಲಿ ಅವರ ಸಲಹೆಯನ್ನು ಪಡೆಯುವನೋ ಅವನು ಎಂದಿಗೂ ಮೌಢ್ಯದಿಂದ ತಪ್ಪುದಾರಿ ಹಿಡಿಯುವುದಿಲ್ಲ. -ಮಹಾಭಾರತ

Rashi-Bhavishya--01

# ಪಂಚಾಂಗ : ಗುರುವಾರ, 08.11.2018
ಸೂರ್ಯ ಉದಯ ಬೆ.06.15 / ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಬೆ.06.40 / ಚಂದ್ರ ಅಸ್ತ ರಾ.06.36
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ಪ್ರತಿಪತ್ (ರಾ.09.08)
ನಕ್ಷತ್ರ: ವಿಶಾಖ(ರಾ.07.48) / ಯೋಗ: ಸೌಭಾಗ್ಯ(ಸಾ.04.23)
ಕರಣ: ಕಿಂಸ್ತುಘ್ನ-ಭವ (ಬೆ.09.16-ರಾ.09.08)
ಮಳೆ ನಕ್ಷತ್ರ: ವಿಶಾಖ  / ಮಾಸ: ತುಲಾ / ತೇದಿ: 23

# ರಾಶಿ ಭವಿಷ್ಯ 
ಮೇಷ : ನಿಮ್ಮನ್ನು ನೀವು ವಿವಿಧ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ. ಕೆಲಸ-ಕಾರ್ಯ ಹಮ್ಮಿಕೊಳ್ಳಲು ಸಕಾಲ
ವೃಷಭ : ಹಿರಿಯರ ಆಶೀರ್ವಾದದಿಂದ ಕೆಲಸ ಸುಗಮವಾಗುವುದು. ನಿಮ್ಮ ತಪ್ಪನ್ನು ಅರಿತುಕೊಳ್ಳಿ
ಮಿಥುನ:ಮಿತ್ರರಿಂದ ತೊಂದರೆ ಆಗಬಹುದು
ಕಟಕ : ಮನೆಯ ಸಮಸ್ಯೆಗಳನ್ನು ಶೀಘ್ರವೇ ಪರಿಹಾರ ಮಾಡಿಕೊಳ್ಳಿ
ಸಿಂಹ: ನಿಮ್ಮೊಂದಿಗೆ ಕೆಲಸ ಮಾಡುವವರು ನಿಮ್ಮ ಕೋಪ – ತಾಪ ಕಂಡು ರೋಸಿ ಹೋಗುವರು
ಕನ್ಯಾ: ಎಲ್ಲದಕ್ಕೂ ಪರರನ್ನು ದೂಷಿಸುವುದನ್ನು ನಿಲ್ಲಿಸಿ
ತುಲಾ: ಮಹತ್ತರ ಕಾರ್ಯಗಳು ನೀವು ಎಣಿಸಿದಂತೆ ನಡೆಯುವವು
ವೃಶ್ಚಿಕ: ನಿಮ್ಮ ಬಾಸ್ ನಿಮ್ಮನ್ನು ಪರೀಕ್ಷಿಸುವ ಸಾಧ್ಯತೆಗಳು ಇರುತ್ತವೆ
ಧನುಸ್ಸು: ಹಣಕಾಸಿನ ಪರಿಸ್ಥಿತಿ ಅಷ್ಟೇನೂ ಆಶಾದಾಯಕ ವಾಗಿರುವುದಿಲ್ಲ. ದೂರ ಪ್ರಯಾಣ ಮಾಡದಿರಿ
ಮಕರ: ಅವಸರದಿಂದ ಕಾರ್ಯ ಸಿದ್ಧಿಸುವುದಿಲ್ಲ
ಕುಂಭ: ನಿಮ್ಮ ಕಾರ್ಯಗಳಲ್ಲಿ ತಾಳ್ಮೆ ವಹಿಸಿ
ಮೀನ: ಆರ್ಥಿಕ ಸ್ಥಿತಿ ತೃಪ್ತಿದಾಯಕವಾಗಿರುತ್ತದೆ

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments