ಪಟಾಕಿ ಸಿಡಿತಕ್ಕೆ ಸುಟ್ಟು ಕರಕಲಾದ ಬಣವೆ

ಈ ಸುದ್ದಿಯನ್ನು ಶೇರ್ ಮಾಡಿ

Forest-Fire--01

ಹಾಸನ, ನ.9- ಪಟಾಕಿ ಸಿಡಿಸುವಾಗ ಉಲ್ಲಿನ ಬಣವೆಗೆ ಬೆಂಕಿ ತಗುಲಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿರುವ ಘಟನೆ ಅರಸೀಕೆರೆ ತಾಲ್ಲೂಕಿನ ಹಳೇ ಕಲ್ಲನಾಯಕನಹಳ್ಳಿಯಲ್ಲಿ ರಾತ್ರಿ ನಡೆದಿದೆ. ಇಡೀ ಗ್ರಾಮವೇ ದೀಪಾವಳಿ ಸಂಭ್ರಮದಲ್ಲಿ ತೊಡಗಿಕೊಂಡು ಪಟಾಕಿ, ಸಿಡಿ ಮದ್ದುಗಳನ್ನು ಸಿಡಿಸಲಾಗುತ್ತಿತ್ತು. ಈ ವೇಳೆ ಪಟಾಕಿಯ ಕಿಡಿ ರೈತರಿಬ್ಬರ ಉಲ್ಲಿನ ಬಣವೆಗೆ ಬಿದಿದ್ದರಿಂದ ಸಂಪೂರ್ಣವಾಗಿ ಸುಟ್ಟು ಹೋಗಿದೆ.ಇದನ್ನು ಗಮನಿಸಿದ ಗ್ರಾಮಸ್ಥರು ಬೆಂಕಿ ನಂದಿಸಲು ಹರಸಾಹಸಪಟ್ಟರೂ ಸಾಧ್ಯವಾಗಲಿಲ್ಲ.

ಕೂಡಲೇ ಅಗ್ನಿಶಾಮಕ ದಳಕ್ಕೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕಾಗಮಿಸಿದ ಸಿಬ್ಬಂದಿಗಳು ಬೆಂಕಿ ನಂದಿಸುವಷ್ಟರಲ್ಲಿ ಉಲ್ಲಿನ ಬಣವೆ ಸಂಪೂರ್ಣವಾಗಿ ಬೂದಿಯಾಗಿತ್ತು.
ಈ ಬಾರಿ ಮಳೆಯ ಕಣ್ಣಾಮುಚ್ಚಾಲೆಯಿಂದ ರಾಗಿ, ಜೋಳ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಅಷ್ಟೇನೂ ಫಸಲು ಬಂದಿರಲಿಲ್ಲ. ಹಾಗಾಗಿ ಜಾನುವಾರುಗಳ ಮೇವಿಗೂ ತೀವ್ರ ಅಭಾವ ಉಂಟಾಗಿದ್ದು, ಇರುವ ಬಣವೆಯೂ ಸಹ ಸುಟ್ಟು ಹೋಗಿರುವುದರಿಂದ ರೈತರು ಕಂಗಾಲಾಗಿದ್ದಾರೆ.

Facebook Comments