ವಿಂಡೀಸ್ ವಿರುದ್ಧದ 3ನೇ ಟ್ವೆಂಟಿ-20 ಪಂದ್ಯದಲ್ಲಿ ಶಾರ್ದೂಲ್‍ಗೆ ಅವಕಾಶ

ಈ ಸುದ್ದಿಯನ್ನು ಶೇರ್ ಮಾಡಿ

SharaDAR TAKURಚೆನ್ನೈ, ನ.9- ಟೆಸ್ಟ್ , ಏಕದಿನ ಸರಣಿಗಳಲ್ಲಿ ಅಭೂತಪೂರ್ವ ಜಯ ಗಳಿಸಿರುವ ಟೀಂ ಇಂಡಿಯಾ ಈಗ ಚುಟುಕು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವತ್ತ ಚಿತ್ತ ಹರಿಸಿದೆ.3 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳಲ್ಲಿ ಗೆದ್ದು ಸರಣಿ ವಶಪಡಿಸಿಕೊಂಡಿರುವ ರೋಹಿತ್ ಪಡೆ ಈಗ ಚೆನ್ನೈ ಪಂದ್ಯದಲ್ಲೂ ಗೆಲ್ಲುವ ವಿಶ್ವಾಸವನ್ನು ಮೂಡಿಸಿದೆ.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಸರಣಿಯ ದೃಷ್ಟಿಯಿಂದ ಟೀಂ ಇಂಡಿಯಾದ ಮುಂಚೂಣಿ ಬೌಲರ್‍ಗಳಾದ ಉಮೇಶ್‍ಯಾದವ್, ಜಸ್‍ಪ್ರೀತ್ ಬೂಮ್ರಾ, ಕುಲ್‍ದೀಪ್‍ಯಾದವ್‍ರವರಿಗೆ ವಿಶ್ರಾಂತಿ ನೀಡಿದ್ದು, ವೇಗದ ಬೌಲರ್ ಶಾರ್ದೂಲ್ ಠಾಕೂರ್‍ರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಶಿಖರ್‍ಧವನ್‍ಗೂ ರೆಸ್ಟ್ ನೀಡಲಿದ್ದು ಆ ಸ್ಥಾನದಲ್ಲಿ ಯುವ ಬ್ಯಾಟ್ಸ್‍ಮನ್ ಶ್ರೇಯಾಸ್ ಐಯ್ಯರ್, ಮನೀಷ್‍ಪಾಂಡೆಗೆ ಅವಕಾಶ ಕಲ್ಪಿಸಲಿದ್ದು, ಬೌಲರ್‍ಗಳಾದ ವಾಷಿಂಗ್ಟನ್ ಸುಂದರ್, ಶಹಬಾಜ್ ನದೀಮ್‍ಗೂ 11ರ ಬಳಗದಲ್ಲಿ ಅವಕಾಶ ಲಭಿಸುವ ಸೂಚನೆಗಳಿವೆ. ಮತ್ತೊಂದೆಡೆ ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್‍ನಿಂದ ಪರಾಗಲು ವಿಂಡೀಸ್ ನಾಯಕ ಬ್ರಾತ್‍ವೈಟ್ ಕೂಡ ಕಾರ್ಯತಂತ್ರ ರೂಪಿಸಿದ್ದಾರೆ.

Facebook Comments