ಕಾಸಿಯಾದಿಂದ ಅನಂತ್‍ಕುಮಾರ್’ಗೆ ನಮನ

ಈ ಸುದ್ದಿಯನ್ನು ಶೇರ್ ಮಾಡಿ

anthauಬೆಂಗಳೂರು, ನ.12- ಕೇಂದ್ರ ರಾಸಾಯನಿಕ, ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್‍ಅವರ ನಿಧನಕ್ಕೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಅತೀವ ದುಃಖ ವ್ಯಕ್ತಪಡಿಸಿದೆ. ಮೂರು ದಶಕಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಅನಂತ್‍ಕುಮಾರ್ ಅವರು ಅಜಾತಶತ್ರು ವಾಗಿ ಎಲರ್ಲ ಪ್ರೀತಿ ವಿಶ್ವಾಸಕ್ಕೆ ಪಾತ್ರರಾದ ಮುತ್ಸದ್ಧಿ. ಸ್ನೇಹ- ಸೌಹಾರ್ದತೆಗೆ ಅನ್ವರ್ಥನಾಮದಂತಿದ್ದ ಅವರು ವಿಶೇಷವಾಗಿ ಕಾಸಿಯಾ ಜೊತೆ ನಿಕಟ ಬಾಂಧವ್ಯ ಹೊಂದಿದ್ದರು.

ಕಿರು ಮತ್ತು ಸಣ್ಣ ಕೈಗಾರಿಕೆಗಳು ತೊಂದರೆಗಳಿಗೆ ಸಿಲುಕಿದ್ದಾಗ ಕಾಸಿಯಾ ನಿಯೋಗ ಅವರನ್ನು ಭೇಟಿ ಮಾಡಿದ ಸಂದರ್ಭಗಳಲ್ಲಿ ತಮ್ಮದೇ ಆದ ಪರಿಹಾರೋಪಾಯಗಳ ಮೂಲಕ ಸಮಸ್ಯೆಗಳನ್ನು ಇತ್ಯರ್ಥಗೊಳಿಸುತ್ತಿದ್ದರು. ಸಂಘಕ್ಕೆ ಸಮರ್ಥ ಮಾರ್ಗದರ್ಶಕರಾಗಿದ್ದ ಅವರು ಬೆಂಗಳೂರು ದಕ್ಷಿಣ ಲೋಕಸಭಾಕ್ಷೇತ್ರದ ಸಂಸದರಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೂಲಕ ಸಣ್ಣ ಕೈಗಾರಿಕೆಗಳ ಹಿತಾಸಕ್ತಿರಕ್ಷಣೆಗೆ ಮುಂಚೂಣಿಯಲ್ಲಿ ಇರುತ್ತಿದ್ದರು.

ಸಂಸದರಾಗಿ ಮತ್ತು ಕೇಂದ್ರ ಸಚಿವರಾಗಿ ಅವರು ನೀಡಿರುವ ಕೊಡುಗೆ ಮತ್ತು ಸೇವೆಗಳು ಚಿರಸ್ಥಾಯಿ. ಗಂಭೀರ ಸಮಸ್ಯೆಗಳು ಮತ್ತು ಜಟಿಲ ತೊಂದರೆಗಳು ಎದುರಾದಾಗ ಕಾಸಿಯಾ ಯಾವಾಗಲೂ ಅವರ ಮಾರ್ಗ ದರ್ಶನ ಮತ್ತು ಸಲಹೆಗಳನ್ನು ಕೋರುತ್ತಿತ್ತು. ಪ್ರಚಂಡ ಜನಶಕ್ತಿಯನ್ನು ಹೊಂದಿದ್ದ ಅನಂತಕುಮಾರ್ ಅವರ ನಿಧನ ದಿಂದಾಗಿ ದೇಶ ಒಬ್ಬ ಅತ್ಯಂತ ಸಮರ್ಥ ಸಂಸದೀಯ ಪಟು ಮತ್ತು ದಕ್ಷ ಆಡಳಿತ ಗಾರನನ್ನು ಕಳೆದುಕೊಂಡತಾಗಿದೆ. ರಾಜಕೀಯ ಧುರೀಣ ಮತ್ತು ಮುತ್ಸದ್ಧಿಯನ್ನು ಕಳೆದುಕೊಂಡಿರುವ ದುಃಖತಪ್ತ ಕುಟುಂಬದ ಸದಸ್ಯರು ಮತ್ತು ಅಸಂಖ್ಯಾತ ಜನರಿಗೆ ಅವರ ಅಗಲಿಕೆಯ ನಷ್ಟ ಮತ್ತು ನೋವನ್ನು ಭರಿಸುವ ಶಕ್ತಿಯನ್ನು  ಭಗವಂತ ನೀಡಲೆಂದು ಕಾಸಿಯಾ ಪ್ರಾರ್ಥಿಸಿದೆ.

 

Facebook Comments