ಬೆಂಗಳೂರು ಓಪನ್ ಟೆನ್ನಿಸ್‍ಗೆ ಡಿಸಿಎಂ ಪರಮೇಶ್ವರ್ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

j pಬೆಂಗಳೂರು, ನ.12- ಬೆಂಗಳೂರು ಕ್ರೀಡೆಗೆ ಉತ್ತೇಜನ ನೀಡುವ ನಗರವಾಗಿದೆ. ಮತ್ತಷ್ಟು ಯೋಜನೆಗಳನ್ನು ತಂದು ಕ್ರೀಡಾ ಚಟುವಟಿಕೆಗಳಿಗೆ ಸರ್ಕಾರ ಹೆಚ್ಚಿನ ಪ್ರೋತ್ಸಾಹ ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ತಿಳಿಸಿದರು. ಇಂದು ಬೆಂಗಳೂರು ಟೆನ್ನಿಸ್ ಸ್ಟೇಡಿಯಂನಲ್ಲಿ ಕೆಎಸ್‍ಎಲ್‍ಟಿಎ ಹಾಗೂ ಎಸಿಟಿ ಫೈಬರ್ ನೆಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಓಪನ್ ಟೆನ್ನಿಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇದಕ್ಕೂ ಮುನ್ನ ಕೇಂದ್ರ ಸಚಿವ ಅನಂತಕುಮಾರ್ ಅವರ ನಿಧನಕ್ಕೆ ಕ್ರೀಡಾಪಟುಗಳು ಹಾಗೂ ಅಧಿಕಾರಿಗಳೊಂದಿಗೆ ಮೌನಾಚರಣೆ ಹಾಗೂ ಶ್ರದ್ಧಾಂಜಲಿ ಸಲ್ಲಿಸಿ ನಂತರ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕಳೆದ ಬಾರಿ ಈ ಪಂದ್ಯಾವಳಿಗೆ ಒಂದು ಲಕ್ಷ ಡಾಲರ್ ಮೊತ್ತ ಪ್ರಶಸ್ತಿ ನೀಡಲಾಗುವುದು ಹಾಗೂ ಈಗ 1.50 ಸಾವಿರ ಡಾಲರ್ ಪ್ರಶಸ್ತಿ ಮೊತ್ತವನ್ನು ಏರಿಸಲಾಗಿದೆ ಎಂದು ಹೇಳಿದರು.  ಇದೇ ವೇಳೆ ಕ್ರೀಡಾಪಟುಗಳಿಗೆ ಕೆಲವೊಂದು ಹಿತ ನುಡಿಗಳನ್ನಾಡಿದ ಡಿಸಿಎಂ ಸರಳತೆ ಹಾಗೂ ಕ್ರೀಡಾ ಸ್ಫೂರ್ತಿಯನ್ನು ಹೊಂದಿರಬೇಕೆಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ಮತ್ತಿತರರು ಹಾಜರಿದ್ದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )