ಪ್ರಥಮ ಮಹಾ ಸಂಗ್ರಾಮದ ಯೋಧರು ಮಾತನಾಡಿದಾಗ..!

ಈ ಸುದ್ದಿಯನ್ನು ಶೇರ್ ಮಾಡಿ

first World Warಒಂದು ಶತಮಾನದ ಹಿಂದೆ ನಡೆದ ಒಂದನೇ ಮಹಾ ಸಂಗ್ರಾಮದ ಕಥೆಗಳನ್ನು ಮರುಸೃಷ್ಟಿಸುವ ಅದ್ಭುತ ಪ್ರಯತ್ನವಿದು. ತಮ್ಮ ಹೊಸ ವಲ್ರ್ಡ್ ವಾರ್ ಒನ್ ಸಾಕ್ಷ್ಯಚಿತ್ರವನ್ನು ನಿರ್ದೇಶಕ ಪೀಟರ್ ಜಾಕ್ಸನ್ ವಿಭಿನ್ನ ರೀತಿಯಲ್ಲಿ ತಯಾರಿಸಿದ್ಧಾರೆ. ನ್ಯೂಜಿಲೆಂಡ್ ಖ್ಯಾತ ನಿರ್ದೇಶಕ ಮತ್ತು ಲಾರ್ಡ್ ಆಫ್ ದಿ ರಿಂಗ್ಸ್ ಚಿತ್ರದ ಸೂತ್ರಧಾರ ಪೀಟರ್ ಜಾಕ್ಸನ್ ತಯಾರಿಸಿರುವ ಪ್ರಥಮ ವಿಶ್ವ ಸಮರ ಸಾಕ್ಷ್ಯಚಿತ್ರ ವಲ್ರ್ಡ್ ವಾರ್ ಒನ್ ಅಪಾರ ಕುತೂಹಲ ಕೆರಳಿಸಿದೆ. 100 ವರ್ಷಗಳ ಹಿಂದಿನ ತಮ್ಮ ಅನುಭವಗಳು ಹಾಗೂ ಕಥೆಯನ್ನು ಆಗಿನ ಯೋಧರೇ ಈಗ ಹೇಳುವ ವಿಸ್ಮಯ ಸೃಷ್ಟಿ ಇದು.

ಒಂದನೇ ಮಹಾ ಸಂಗ್ರಾಮದ ಯೋಧರು ಈಗ ನಮ್ಮ ಮುಂದೆ ತಮ್ಮ ಅನುಭವ ಹಾಗೂ ಆಗಿನ ಸಾರಸ್ಯ ಘಟನೆಗಳನ್ನು ಹೇಳಲು ಸಾಧ್ಯವೇ..? ಎಂಬುದು ನಿಮ್ಮ ಸಹಜ ಪ್ರಶ್ನೆ ಅಲ್ಲವೇ..? ಅದಕ್ಕೆ ಉತ್ತರ ಇಲ್ಲಿದೆ. ಶತಮಾನದ ಹಿಂದೆ ರಣರಂಗದಲ್ಲಿ ನಡೆದ ಘಟನೆಗಳ ಮೂಕಿ ದೃಶ್ಯಗಳನ್ನು ನಿರ್ದೇಶಕರು ಸಂಗ್ರಹಿಸಿದ್ದಾರೆ. ಸಮರಭೂಮಿ ಹಾಗೂ ಗುಪ್ತ ಸುರಂಗಗಳಲ್ಲಿ 100 ವರ್ಷಗಳ ಹಿಂದೆ ಯೋಧರು ನಡೆಸಿದ ಧ್ವನಿ ಇಲ್ಲದ ಸಂವಾದಕ್ಕೆ ಈಗ ಪೀಟರ್ ಜಾಕ್ಸನ್ ಧ್ವನಿ ನೀಡುತ್ತಿದ್ದಾರೆ.

ಮೊದಲ ಮಹಾ ಸಮರದ ನೈಜ ಕಪ್ಪು ಬಿಳುಪು ಮೂಕಿ ಸಾಕ್ಷ್ಯಚಿತ್ರಗಳನ್ನು ಅತ್ಯಾಧುನಿಕ ತಂತ್ರಜಾ್ಞನದೊಂದಿಗೆ ವರ್ಣ ಸ್ಪರ್ಶ ನೀಡಲಾಗಿದೆ. ಯೋಧರ ಸಂವಾದವನ್ನೂ ಸಹ ಧ್ವನಿ ರೂಪದಲ್ಲಿ ಅತ್ಯಂತ ಸಹಜವಾಗಿ ನಿರ್ದೇಶಕರು ನೀಡಿದ್ದಾರೆ. ಇದಕ್ಕಾಗಿ ಪೋರೆನ್ಸಿಕ್ ಲಿಪ್ ರೀಡರ್‍ಗಳನ್ನು ಅಂದರೆ ಧ್ವನಿ ಇಲ್ಲದ ಸಂಭಾಷಣೆಯನ್ನು ನಿಖರವಾಗಿ ಪತ್ತೆ ಮಾಡುವ ತಜ್ಞರನ್ನು ಬಳಸಿಕೊಂಡಿದ್ದಾರೆ.

ಒಂದನೇ ಮಹಾ ಸಂಗ್ರಾಮದ ಬಗ್ಗೆ ಸಾಕಷ್ಟು ಮೂಲ ಸಾಕ್ಷ್ಯ ಚಿತ್ರಗಳಿವೆ. ಆಗಿನ ಒರಿಜಿನಲ್ ದೃಶ್ಯಗಳಲ್ಲಿ ಯೋಧರು ಪರಸ್ಪರ ಸಂಭಾಷಣೆ ನಡೆಸಿರುವುದು ಏನೆಂಬುದು ಯಾರಿಗೂ ತಿಳಿದಿಲ್ಲ. ಇದಕ್ಕಾರಿ ಫಸ್ಟ್ ವಲ್ಡ್ ವಾರ್ ಡಾಕ್ಯುಮೆಂಟರಿಯಲ್ಲಿ ನೈಜ ಸಂಭಾಷಣೆಯನ್ನು ಬಹಿರಂಗಗೊಳಿಸುವ ಪ್ರಯತ್ನ ನಡೆದಿದೆ. ಬಿಬಿಸಿ ಸಂಗ್ರಹಾಗಾರದಲ್ಲಿರುವ 600 ಗಂಟೆಗಳ ಟೇಪ್‍ನಿಂದ ಮಾಜಿ ಯೋಧರ ಸಂದರ್ಶನಗಳನ್ನು ಸಹ ಈ ಸಾಕ್ಷ್ಯಾಚಿತ್ರದೊಂದಿಗೆ ಸಂಯೋಜನೆ ಮಾಡಲಾಗುತ್ತದೆ.

ಇದಕ್ಕೆ ಯಾವುದೇ ಹಿನ್ನೆಲೆ ಧ್ವನಿ, ವಿವರಣೆ ಅಥವಾ ಬೇರೇನೂ ಬೇಕಿಲ್ಲ ಎಂದು ವಿವರಿಸುತ್ತಾರೆ ಸೂಪರ್‍ಹಿಟ್ ಲಾರ್ಡ್ ಆಫ್ ದಿ ರಿಂಗ್ಸ್ ಮತ್ತು ಹೊಬಿಟ್ ಸಿನಿಮಾಗಳ ನಿರ್ದೇಶಕ ಜಾಕ್ಸನ್  ಇದು ಅತ್ಯಂತ ಪ್ರಯಾಸದ ಕಾರ್ಯ, ಅತ್ಯಾಧುನಿಕ ತಂತ್ರಜಾ್ಞನದೊಂದಿಗೆ ತುಂಬಾ ತಾಳ್ಮೆಯಿಂದ ಈ ಸಾಕ್ಷ್ಯಾಚಿತ್ರವನ್ನು ವಿಶೇಷವಾಗಿ ತಯಾರಿಸಲಾಗಿದೆ ಎನ್ನುತ್ತಾರೆ ಈ ಪ್ರತಿಭಾವಂತ ನಿರ್ದೇಶಕರು.

Facebook Comments