ಸಹಪಾಠಿ ಅನಂತ್ ಕುಮಾರ್ ಅವರ ಅಂತಿಮ ದರ್ಶನ ಪಡೆದ ಪ್ರಧಾನಿ ಮೋದಿ

ಈ ಸುದ್ದಿಯನ್ನು ಶೇರ್ ಮಾಡಿ

Anant--01

ಬೆಂಗಳೂರು. ನ.12 : ಕ್ಯಾನ್ಸರ್ ರೋಗದಿಂದ ಇಂದು ಮುಂಜಾನೆ ನಿಧನರಾದ ಕೇಂದ್ರ ಸಚಿವ ಹಾಗೂ ಸಹೋದ್ಯೋಗಿ ಅನಂತ್ ಕುಮಾರ್ ಅವರ ಅಂತಿಮ ದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಕಂಬನಿ ಮಿಡಿದರು. ನವದೆಹಲಿಯಿಂದ ವಿಶೇಷ ವಿಮಾನದಲ್ಲಿ ಆಗಮಿಸಿದ ಮೋದಿ ಅವರು, ಬಸವನಗುಡಿಯಲ್ಲಿರುವ ಅನಂತ್ ಕುಮಾರ್ ನಿವಾಸಕ್ಕೆ ಬಂದು ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಮೋದಿ ಅವರು, ಆಗಲಿದ ತಮ್ಮ ಸಹೋದ್ಯೋಗಿಯನ್ನು ನೆನೆದು ಒಂದು ಕ್ಷಣ ಗದ್ಗೀತರಾದರು.

ಅಂತಿಮ ನಮನದ ವೇಳೆ ಅನಂತ್ ಕುಮಾರ್ ಅವರ ಪತ್ನಿ ತೇಜಸ್ವಿ ನಿ ಅನಂತ್ ಕುಮಾರ್ ಹಾಗೂ ಪುತ್ರಿಯರು ಸೇರಿದಂತೆ ಅವರ ಕುಟುಂಬದ ವರ್ಗದವರಿಗೆ ಸಾಂತ್ವನ ಹೇಳಿದರು. ಈ ವೇಳೆ ತೇಜಸ್ವಿ ನಿ ಅನಂತ್ ಕುಮಾರ್ ಪತಿಯನ್ನು ನೆನೆಸಿಕೊಂಡು ಗೊಳಾಡುತ್ತಿದ್ದ ದೃಶ್ಯ ನೆರೆದಿದ್ದವರನ್ನು ಸಹಾ ಕಂಬನಿ ಮಿಡಿಯುವಂತೆ ಮಾಡಿತು. ಕೊನೆಗೆ ಮೋದಿ ಅವರೇ ಅನಂತ್ ಕುಮಾರ್ ಕುಟುಂಬದ ಸದಸ್ಯರನ್ನು ಸಮಾಧಾನ ಪಡಿಸಿದರು. ಇದಕ್ಕೂ ಮುನ್ನ ಮೋದಿ ಆಗಮನದ ಹಿನ್ನಲೆಯಲ್ಲಿ ಅನಂತ್ ಕುಮಾರ್ ನಿವಾಸದ ಬಳಿ ಪೊಲೀಸರು ಭಾರೀ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿತ್ತು.

Anant--0011

ಮಾಧ್ಯಮದವರು ಸೇರಿದಂತೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿತ್ತು. ರಾಜ್ಯ ಬಿಜೆಪಿ ಯ ಕೆಲವು ನಾಯಕರಿಗೆ ಮಾತ್ರ ಮೋದಿ ಅವರ ಜೊತೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ನಾಳೆ ಬೆಳಗ್ಗೆ 1 ಗಂಟೆಗೆ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಸಕಲ ಸರಕಾರಿ ಗೌರವಧರಗಳೊಂದಿಗೆ ನಡೆಯಲಿದೆ.

Modi-bangalore

ಬೆಳಗ್ಗೆ 7 ಗಂಟೆಯಿಂದ 8.30 ರ ವರೆಗೆ ಬಿಜೆಪಿ ಕಚೇರಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ನೀಡಲಾಗಿದೆ.  ಬಳಿಕ ‌12 ಗಂಟೆಯವರೆಗೆ ನ್ಯಾಷನಲ್ ಕಾಲೇಜ್ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಉಪರಾಷ್ಟಪತಿ ವೆಂಕಯ್ಯ ನಾಯ್ಡು, ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿಶ್ ಷಾ ಸೇರಿದಂತೆ ಅನೇಕ ಗಣ್ಯರು ಅಂತಿಮ ಸಂಸ್ಕ್ರರಾದಲ್ಲಿ ಭಾಗವಹಿಸಲಿದ್ದಾರೆ.

Facebook Comments