ನಾಲ್ವರ ಸಾವಿನ ಪ್ರಕರಣ ಇನ್ನೂ ನಿಗೂಢ

ಈ ಸುದ್ದಿಯನ್ನು ಶೇರ್ ಮಾಡಿ

susied

ಬೆಂಗಳೂರು, ನ.13- ಮೂರು ವರ್ಷದ ಬಾಲಕಿ ಸೇರಿ ನಾಲ್ವರ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ವಿದ್ಯಾರಣ್ಯಪುರ ಠಾಣೆ ಪೊಲೀಸರು, ಮನೆ ಕೊಡಿಸುವುದಾಗಿ ಹೇಳಿ 25 ಲಕ್ಷ ರೂ. ಪಡೆದು ಅಪಘಾತದಲ್ಲಿ ಮೃತಪಟ್ಟಿರುವ ವ್ಯಕ್ತಿ ಯಾರು, ಈ ಹಣ ಯಾರ ಬಳಿ ಇದೆ ಎಂಬ ಬಗ್ಗೆ ಶೋಧ ನಡೆಸುತ್ತಿದ್ದಾರೆ. ದೊಡ್ಡಬೊಮ್ಮಸಂದ್ರದಲ್ಲಿ ಪೊೀಷಕರಾದ ಜನಾರ್ದನ್, ಸುಮಿತ್ರಾರಿಗೆ ವಿಷದ ಮಾತ್ರೆಗಳನ್ನು ಕೊಟ್ಟು ಹಾಗೂ ಮಗಳು ಸಾನಿಕಾಳನ್ನು ಕತ್ತು ಹಿಸುಕಿ ಸಾಯಿಸಿ ನಂತರ ಸುಧಾರಾಣಿ ವೇಲ್‍ನಿಂದ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಆತ್ಮಹತ್ಯೆಗೂ ಮುನ್ನ ಸುಧಾರಾಣಿ ಅವರು ಬರೆದಿಟ್ಟಿದ್ದ ಡೆತ್‍ನೋಟ್‍ನಲ್ಲಿ ಹಣ ಪಡೆದು ಅಪಘಾತದಲ್ಲಿ ಮೃತಪಟ್ಟಿದ್ದ ವ್ಯಕ್ತಿಯ ಹೆಸರನ್ನು ನಮೂದಿಸಿಲ್ಲ. ಈ ಹಣ ಯಾರ ಬಳಿ ಇದೆ ಎಂಬುದನ್ನು ಸಹ ತಿಳಿಸಿಲ್ಲ. ಹಣ ಪಡೆದ ವ್ಯಕ್ತಿ ಯಾರೆಂಬುದನ್ನು ಪತ್ತೆ ಹಚ್ಚಲು ಕಷ್ಟಸಾಧ್ಯವಾಗಿದೆ.

ಮನೆ ಖರೀದಿಸಲು 25 ಲಕ್ಷ ನೀಡಿದ್ದ ವ್ಯಕ್ತಿಯ ಬಗ್ಗೆ ತಂದೆ-ತಾಯಿ ಹಾಗೂ ಸುಧಾರಾಣಿಗೆ ಮಾತ್ರ ತಿಳಿದಿತ್ತು ಎನ್ನಲಾಗಿದ್ದು, ಇದೀಗ ಇವರೆಲ್ಲರೂ ಮೃತಪಟ್ಟಿದ್ದಾರೆ. ಇವರ ಮನೆಯನ್ನು ಸಂಪೂರ್ಣ ಪರಿಶೀಲನೆ ನಡೆಸಿದ ನಂತರ ಹಣವನ್ನು ಯಾರಿಗೆ ನೀಡಿದ್ದರು ಎಂಬ ಬಗ್ಗೆ ದಾಖಲೆ ದೊರೆತರೆ ಮುಂದಿನ ತನಿಖೆ ಸುಲಭವಾಗುತ್ತದೆ. ಈ ನಾಲ್ವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

Facebook Comments