ನಾಗಮಂಗಲದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾದ ಸುರೇಶ್‍ಗೌಡ

ಈ ಸುದ್ದಿಯನ್ನು ಶೇರ್ ಮಾಡಿ

inderaನಾಗಮಂಗಲ, ನ.13- ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಇಂದಿರಾ ಕ್ಯಾಂಟೀನ್ ತೆರೆಯಲು ಮುಂದಾಗಿರುವ ಜೆಡಿಎಸ್ ಶಾಸಕ ಸುರೇಶ್‍ಗೌಡ ಪಟ್ಟಣದಲ್ಲಿ ಸ್ಥಳ ಪರಿಶೀಲನೆ ಮಾಡಿದರು.ಪಟ್ಟಣದ ಜನರಲ್ ಆಸ್ಪತ್ರೆ ಮುಂಭಾಗದ ಸ್ಥಳ ಪರಿಶೀಲನೆ ನಡೆಸಿದ ಶಾಸಕರು, ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಈ ಹಿಂದಿನ ಸರ್ಕಾರದ ಆದೇಶದಂತೆ ನಾಗಮಂಗಲ ಪಟ್ಟಣದ ಜನರ್ ಆಸ್ಪತ್ರೆ ಮುಂಭಾಗ ಇಂದಿರಾ ಕ್ಯಾಂಟೀನ್ ತೆರೆಯುವ ಉದ್ದೇಶಕ್ಕಾಗಿ ಸ್ಥಳ ಪರಿಶೀಲನೆ ಮಾಡಿದ್ದೇವೆ ಎಂದು ತಿಳಿಸಿದರು.

ಈ ಹಿಂದೆ ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸ್ಥಳ ಗುರತು ಮಾಡಲಾಗಿತ್ತು. ಆದರೆ ಅಲ್ಲಿರುವ ಕೈಗಾರಿಕಾ ವಿಸ್ತರಣಾಧಿಕಾರಿಗಳ ಕಚೇರಿ ಮತ್ತು ಕೃಷಿ ಇಲಾಖೆಗೆ ಓಡಾಡಲು ತೀವ್ರ ತೊಂದರೆಯಾಗುವುದಾಗಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪಟ್ಟಣದಲ್ಲಿ ವಾಹನಗಳ ಪಾರ್ಕಿಂಗ್ ಸಮಸ್ಯೆ ಎದುರಾಗಿರುವ ಕಾರಣ ಮಿನಿ ವಿಧಾನಸೌದದ ಪಕ್ಕದ ಸ್ಥಳದಲ್ಲಿ ಪಾರ್ಕಿಂಗ್ ಕಾಂಪ್ಲೆಕ್ಸ್ ಮತ್ತು ವಾಣಿಜ್ಯ ಸಂಕೀರ್ಣದ ಕಟ್ಟಡ ನಿರ್ಮಿಸಲು ಉದ್ದೇಶಿಸಲಾಗಿದೆ.

ಶಾಲಾ -ಕಾಲೇಜುಗಳು, ಆಸ್ಪತ್ರೆ, ಪೊಲಿಸ್ ಠಾಣೆ, ಅರಣ್ಯ ಇಲಾಖೆ, ತಾಲ್ಲೂಕು ಪಂಚಾಯಿತಿ ತೋಟಗಾರಿಕೆ ಇಲಾಖೆಯ ಜನ ಸಂಪರ್ಕವಿರುವುದರಿಂದ ಜನರಲ್ ಆಸ್ಪತ್ರೆ ಮುಂಭಾಗದಲ್ಲಿ ಇಂದಿರಾ ಕ್ಯಾಂಟೀನ್ ತೆರೆಯಲು ಸೂಕ್ತ ಸ್ಥಳವೆಂದು ಪರಿಶೀಲನೆ ಮಾಡಿದ್ದೇವೆ ಎಂದು ಶಾಸಕ ಸುರೇಶ್‍ಗೌಡ ತಿಳಿಸಿದರು.
ಎಪಿಎಂಸಿ ಅದ್ಯಕ್ಷ  ಚನ್ನಪ್ಪ, ಪುರಸಭೆ ಸದಸ್ಯ ವಿಜಯ್ ಕುಮಾರ್, ಇಒ ಅನಂತರಾಜು, ಪುರಸಭೆ ಇಂಜಿನಿಯರ್ ಪ್ರಕಾಶ್, ಆಸ್ಪತ್ರೆ ಆಡಳಿತಾಧಿಕಾರಿ ವೆಂಕಟೇಶ್ ಮುಖಂಡರಾದ ಕೋಳಿರಾಮು, ಕಂಚಿನಕೋಟೆ ಮೂರ್ತಿ, ಬಸವೇಗೌಡ ಹಾಜರಿದ್ದರು.

Facebook Comments