ಉತ್ತರ ಕೊರಿಯಾದಲ್ಲಿವೆ 20 ಅಘೋಷಿತ ಕ್ಷಿಪಣಿ ನೆಲೆಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Kim--01

ವಾಷಿಂಗ್ಟನ್, ನ.13-ವಿನಾಶಕಾರಿ ಅಣ್ವಸ್ತ್ರಗಳ ನಿಶ್ಶಸ್ತ್ರೀಕರಣದ ಬಗ್ಗೆ ಪ್ರತಿಜ್ಞಾ ಮಾಡಿದ ಉತ್ತರ ಕೊರಿಯಾದಲ್ಲಿ 20 ಅಘೋಷಿತ ಕ್ಷಿಪಣಿ ನೆಲೆಗಳು ಇರುವ ಆತಂಕಕಾರಿ ಸಂಗತಿ ಬಯಲಾಗಿದೆ. ಇವುಗಳಲ್ಲಿ 13 ರಹಸ್ಯ ಸ್ಥಳಗಳನ್ನು ಉಪಗ್ರಹ ಪತ್ತೆ ಮಾಡಿದೆ. ಉತ್ತರ ಕೊರಿಯಾ ತನ್ನಲ್ಲಿರುವ ಎಲ್ಲ ಅಣ್ವಸ್ತ್ರಗಳು ಮತ್ತು ಕ್ಷಿಪಣಿಗಳನ್ನು ತ್ಯಜಿಸಿದೆ ಎಂದು ನಿರಾಳವಾಗಿದ್ದ ಏಷ್ಯಾ ಖಂಡ ಮತ್ತು ಅಮೆರಿಕಕ್ಕೆ ಈ ಸಂಗತಿ ಆಘಾತಕಾರಿಯಾಗಿ ಪರಿಣಮಿಸಿದೆ.

ಉತ್ತರ ಕೊರಿಯಾದ ಗೋಪ್ಯ ಸ್ಥಳಗಳಲ್ಲಿ 20 ಅಘೋಷಿತ ಕ್ಷಿಪಣಿ ಕಾರ್ಯಾನಿರ್ವಹಣೆ ಸ್ಥಳಗಳಿವೆ. ಇವುಗಳನ್ನು 13 ತಾಣಗಳು ಪತ್ತೆಯಾಗಿವೆ ಎಂದು ಅಮೆರಿಕದ ಚಿಂತಕರ ಚಾವಡಿಯೊಂದು ತಿಳಿಸಿದೆ. ವಾಷಿಂಗ್ಟನ್ ಮೂಲದ ಸೆಂಟರ್ ಫಾರ್ ಸ್ಟಾಟೆಜಿಕ್ ಅಂಡ್ ಇಂಟರ್‍ನ್ಯಾಷನಲ್ ಸ್ಟಡೀಸ್ ಸಂಸ್ಥೆಯ ಸಂಶೋಧಕ ಜೋಸೆಫ್ ಬರ್ಮುಡೆಜ್ ಈ ಕುರಿತು ವರದಿಯೊಂದನ್ನು ಬಿಡುಗಡೆ ಮಾಡಿದ್ದು, ಉಪಗ್ರಹದ ಮೂಲಕ ಉತ್ತರ ಕೊರಿಯಾ ಈಗಲೂ ಅಣ್ವಸ್ತ್ರ ಮತ್ತು ದೂರಗಾಮಿ ಕ್ಷಿಪಣಿ ಕಾರ್ಯಚರಣೆಯಲ್ಲಿ ಸಕ್ರಿಯವಾಗಿದೆ ಎಂಬುದನ್ನು ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.

ಕಳೆದ ಜೂನ್‍ನಲ್ಲಿ ಸಿಂಗಪುರ್‍ನಲ್ಲಿ ನಡೆದ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ಸಂಪೂರ್ಣ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕೆ ಒಳಪಡಲಿದೆ ಎಂದು ಸರ್ವಾಧಿಕಾರಿ ಕಿಮ್ ಉನ್ ಜಾoಗ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ಗೆ ವಾಗ್ದಾನ ನೀಡಿದ್ದರು.

Facebook Comments