ಎನ್‍ಕೌಂಟರ್’ನಲ್ಲಿ ಐವರು ನಕ್ಸಲರು ಖತಂ

ಈ ಸುದ್ದಿಯನ್ನು ಶೇರ್ ಮಾಡಿ

Naxalsರಾಯಘಡ, ನ.13- ಬಿಜಾಪುರ ಜಿಲ್ಲಾಯ ಪಮೇಡ್ ಬಳಿ ಭದ್ರತಾ ಪಡೆಗಳು ಹಾಗೂ ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಐವರು ನಕ್ಸಲೀಯರು ಮೃತಪಟ್ಟಿದ್ದು, ಕೋಬ್ರಾ ಪಡೆಯ ಮೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಕೋಬ್ರಾ ಪಡೆಯ ಎಲ್ಲಾ ಸಿಬ್ಬಂದಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ನಕ್ಸಲೀಯರು ಗುಂಡಿನ ದಾಳಿ ಆರಂಭಿಸಿದಾಗ ಕೋಬ್ರಾ ತಂಡದಿಂದ ಪ್ರತಿದಾಳಿ ನಡೆಸಲಾಗಿದೆ. ಗುಂಡಿನ ಚಕಮಕಿಯಲ್ಲಿ ಸಹಾಯಕ ಇನ್ಸ್‍ಪೆಕ್ಟರ್ ಹಾಗೂ ಕಾಟೆಬಲ್ ಒಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನು ಸುರಕ್ಷಿತವಾಗಿ ಪ್ರಾಣಪಾಯದಿಂದ ಪಾರು ಮಾಡಲಾಗಿದೆ. ಭದ್ರತಾ ಪಡೆಗಳು ಈಗಲೂ ಅರಣ್ಯದೊಳಗೆ ಇರುವುದಾಗಿ ಪೊಲೀಸರು ತಿಳಿಸಿದ್ದಾರೆ.

Facebook Comments