ಇಂದಿನ ಪಂಚಾಗ ಮತ್ತು ರಾಶಿಫಲ (13.11.2018 – ಮಂಗಳವಾರ )

ಈ ಸುದ್ದಿಯನ್ನು ಶೇರ್ ಮಾಡಿ

ನಿತ್ಯ ನೀತಿ :ಅದೃಷ್ಟವು ಪ್ರತಿಕೂಲವಾಗಿದ್ದರೂ ಸಹ ತಿಳಿದವನು ತಾನು ಮಾಡಬೇಕಾದ ಕೆಲಸವನ್ನು, ತನ್ನ ತಪ್ಪನ್ನು ಕಳೆದು ಕೊಳ್ಳುವುದಕ್ಕೂ ಹಾಗೆಯೇ ತನ್ನ ಮನಸ್ಸನ್ನು ಸಮಾಧಾನಪಡಿಸಿ ಕೊಳ್ಳುವುದಕ್ಕೂ ಮಾಡಲೇಬೇಕು.
     -ಪಂಚತಂತ್ರ

Rashi-Bhavishya--01

# ಪಂಚಾಂಗ : ಮಂಗಳವಾರ, 13.11.2018
ಸೂರ್ಯ ಉದಯ ಬೆ.06.17 / ಸೂರ್ಯ ಅಸ್ತ ಸಂ.05.51
ಚಂದ್ರ ಉದಯ ಬೆ.10.58 / ಚಂದ್ರ ಅಸ್ತ ರಾ.10.40
ವಿಲಂಬಿ ಸಂವತ್ಸರ / ದಕ್ಷಿಣಾಯಣ / ಶರತ್ ಋತು / ಕಾರ್ತಿಕ ಮಾಸ
ಶುಕ್ಲ ಪಕ್ಷ / ತಿಥಿ : ಷಷ್ಠೀ (ರಾ.04.22)
ನಕ್ಷತ್ರ:  ಉತ್ತರಾಷಾಢ (ರಾ.05.37) / ಯೋಗ: ಶೂಲ (ಮ.03.42)
ಕರಣ: ಕೌಲವ-ತೈತಿಲ (ಮ.03.05-ರಾ.04.22)
ಮಳೆ ನಕ್ಷತ್ರ: ವಿಶಾಖ  / ಮಾಸ: ತುಲಾ / ತೇದಿ: 28

Rashi-Bhavishya--01# ರಾಶಿ ಭವಿಷ್ಯ 
ಮೇಷ : ಮಕ್ಕಳು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ನಿಮ್ಮ ಮನಸ್ಸಿಗೆ ಮುದ ನೀಡುವರು
ವೃಷಭ : ಕೆಲಸ-ಕಾರ್ಯಗಳಿಗೆ ಇತರರು ಸಹಕಾರ ನೀಡುವರು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ
ಮಿಥುನ: ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ
ಕಟಕ : ಧನಾತ್ಮಕ ಚಿಂತನೆ ಗಳಿಂದ ನಿಶ್ಚಿತ ಕಾರ್ಯ ಕ್ರಮ ಹಾಕಿಕೊಂಡರೆ ಒಳಿತು
ಸಿಂಹ:ಗುರುಗಳ ಕೃಪೆಯಿಂದ ಎಲ್ಲವೂ ಒಳಿತಾಗುವುದು
ಕನ್ಯಾ: ಹಿರಿಯರ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಿ
ತುಲಾ: ಹಿಂದೆ ಹಮ್ಮಿಕೊಂಡ ಕೆಲಸ-ಕಾರ್ಯಗಳು ಸರಾಗವಾಗಿ ನಡೆದುಕೊಂಡು ಹೋಗುವುದು
ವೃಶ್ಚಿಕ: ಉತ್ತಮ ಕೆಲಸ ಮಾಡಲು ಗಟ್ಟಿ ನಿರ್ಧಾರ ಮಾಡಿ ಮುಂದೆ ಹೆಜ್ಜೆ ಇಟ್ಟರೆ ಒಳ್ಳೆಯದಾಗಲಿದೆ
ಧನುಸ್ಸು: ಇತರರ ಮಾತು ಆಲಿಸುವ ವ್ಯವಧಾನ ಇಟ್ಟುಕೊಳ್ಳಿ. ಪರರನ್ನು ನೋಯಿಸದಿರಿ
ಮಕರ: ಆದಷ್ಟು ಖರ್ಚು ಕಡಿಮೆ ಮಾಡಿಕೊಳ್ಳಿ
ಕುಂಭ: ಮಕ್ಕಳೇ ಶತ್ರುಗಳಂತೆ ವರ್ತಿಸುವರು
ಮೀನ: ಹೆಚ್ಚು ತಾಳ್ಮೆಯಿಂದ ಇರುವುದು ಒಳ್ಳೆಯದು

+ ಡಾ. ವಿಶ್ವಪತಿ ಶಾಸ್ತ್ರಿ
ಜ್ಯೋತಿಷಿ, ಪಂಚಾಂಗ ಕರ್ತ (Mob : 9448018711)

Facebook Comments