ಕೂಡ್ಲಿಗಿ ಸಮೀಪ ಕ್ರೂಸರ್’ಗೆ ಲಾರಿ ಡಿಕ್ಕಿ, ಒಂದೇ ಕುಟುಂಬದ ಮೂವರು ಮಹಿಳೆಯರ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Accident--01

ಬಳ್ಳಾರಿ, ನ.14- ಮೈಸೂರಿನಿಂದ ಪ್ರವಾಸ ಮುಗಿಸಿಕೊಂಡು ಬಿಜಾಪುರ ಜಿಲ್ಲೆ ಚಿಕ್ಕ ಆಸಂಗಿ ಗ್ರಾಮಕ್ಕೆ ಹೊರಟಿದ್ದ ಒಂದೇ ಕುಟುಂಬದ ಸದಸ್ಯರಿದ್ದ ಕ್ರೂಸರ್ ವಾಹನಕ್ಕೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಮೂವರು ಮಹಿಳೆಯರು ಸಾವನ್ನಪ್ಪಿ, 9 ಮಂದಿ ಗಾಯಗೊಂಡಿರುವ ಘಟನೆ ಕೂಡ್ಲಿಗಿ ಸಮೀಪದ ಶಿವಪುರ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಇಂದು ಬೆಳಗ್ಗಿನ ಜಾವ ಸಂಭವಿಸಿದೆ.

ಬೀಜಿನ್ (43), ಶಬನಾ (22) ಹಾಗೂ ರಬೀಯಾ (41) ಮೃತಪಟ್ಟವರು. ಮಹಾರಾಷ್ಟ್ರದ ಪುಣೆಯ ಮಹಮ್ಮದ್ ಸಂದ್ಯಾಲ್ (10), ಅಫಾ ನಂದ್ಯಾಲ್ (10), ಗಫೂರ್ ನಂದ್ಯಾಲ್ (14), ಮುಸ್ಕಾನ್ ನಂದ್ಯಾಲ್ (13) ನಾಸೀರ್ (68) ತೀವ್ರ ಗಾಯಗಳಾಗಿದ್ದು ಕೂಡ್ಲಿಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್  ಗೆ ದಾಖಲಿಸಲಾಗಿದೆ.

ಪ್ರವಾಸ ಮುಗಿಸಿ ಇಂದು ನಸುಕಿನ ಜಾವ ಕ್ರೂಸರ್‍ನಲ್ಲಿ ಬರುತ್ತಿದ್ದಾಗ ಈಚರ್ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಸಭಕ್ಕೆ ಕ್ರೂಸರ್‍ನಲ್ಲಿದ್ದ ಬೀಜಿನ್ (43) ಹಾಗೂ ರಬೀಯಾ (41) ಸ್ಥಳದಲ್ಲೇ ಮೃತಪಟ್ಟರೆ, ತೀವ್ರ ಗಾಯಗೊಂಡಿದ್ದ ಶಬನಾ (20) ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕರೆ ತರುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.

ಕೂಡ್ಲಿಗಿ ಡಿವೈಎಸ್ಪಿ ಬಸವೇಶ್ವರ ಹಾಗೂ ಸಂಡೂರು ಸಿಪಿಐ ನಿಕ್ಕಿಂ ಅಪಘಾತದ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಕೂಡ್ಲಿಗಿ ಸಿಪಿಐ ನಹೀಂ ಅಹ್ಮದ್ ಹಾಗೂ ಎ.ಎಸ್.ಐ ಮಾರಪ್ಪ ಮತ್ತು ಸಿಬ್ಬಂದಿಗಳನ್ನು ಕರೆಸಿಕೊಂಡು ತಕ್ಷಣ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿ ಗಾಯಾಳುಗಳ ಚಿಕಿತ್ಸೆ ಕೊಡಿಸುವಲ್ಲಿ ಮಾನವೀಯತೆ ಮೆರೆದಿದ್ದಾರೆ.  ಘಟನಾ ಸ್ಥಳಕ್ಕೆ ನೂತನ ಎ.ಎಸ್.ಪಿ ಲಾವಣ್ಯ ಭೇಟಿ ನೀಡಿ, ಪರಿಶೀಲಿಸಿದ್ದಾರೆ.

Facebook Comments

Sri Raghav

Admin