ಎಣ್ಣೆ ಹೊಡೆದು ತಗಲಾಕ್ಕೊಂಡ ಕ್ಯಾಪ್ಟನ್ ಅರವಿಂದ್ ”ಕಿಕ್‍”ಔಟ್

ಈ ಸುದ್ದಿಯನ್ನು ಶೇರ್ ಮಾಡಿ

Air-India--011

ನವದೆಹಲಿ, ನ.14- ಮದ್ಯಪಾನ ಮಾಡಿ ಸಿಕ್ಕಿಬಿದ್ದಿದ್ದ ಏರ್ ಇಂಡಿಯಾ ವಿಮಾನದ ಹಿರಿಯ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಅವರನ್ನು ನಿರ್ದೇಶಕ (ಕಾರ್ಯಾಚರಣೆ) ಹುದ್ದೆಯಿಂದ ವಜಾಗೊಳಿಸಲಾಗಿದೆ.

ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ನಿರ್ದೇಶಕ ಹುದ್ದೆಯಿಂದ ವಜಾಗೊಳಿಸಲಾಗಿದ್ದು, ಇಡಿ(ತರಬೇತಿ) ಕ್ಯಾಪ್ಟನ್ ಅಮಿತಾಭ್ ಸಿಂಗ್ ಅವರಿಗೆ ಹೆಚ್ಚುವರಿಯಾಗಿ ನಿರ್ದೇಶಕ ಹೊಣೆ ವಹಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.

ಇನ್ನು ಆಲ್ಕೋಹಾಲ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದ ಕಠ್ಪಲಿಯಾ ಅವರ ಹಾರಾಟ ಪರವಾನಿಗೆಯನ್ನು ನಾಗರಿಕ ವಿಮಾನಯಾನ ನಿರ್ದೇಶನಾಲಯ ಮೂರು ವರ್ಷಗಳ ಕಾಲ ಅಮಾನತುಗೊಳಿಸಿದೆ.

ಕಳೆದ ಭಾನುವಾರ ದೆಹಲಿಯಿಂದ ಲಂಡನ್‍ಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನದ ಕ್ಯಾಪ್ಟನ್ ಅರವಿಂದ್ ಕಠ್ಪಲಿಯಾ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕಾರಣ ವಿಮಾನ ಸುಮಾರು ಆರು ಗಂಟೆ ತಡವಾಗಿ ಟೇಕ್ ಆಫ್ ಆಗಿತ್ತು.

Facebook Comments

Sri Raghav

Admin