ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ನಾಪತ್ತೆ

ಈ ಸುದ್ದಿಯನ್ನು ಶೇರ್ ಮಾಡಿ

Missing--01

ಸೂಲಿಬೆಲೆ, ನ.14- ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಹೊಸಕೋಟೆ ತಾಲೂಕು ಅನುಗೊಂಡಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದಾರೆ. ಮುತ್ಸಂದ್ರ ಗ್ರಾಮದಲ್ಲಿ ವಾಸವಾಗಿರುವ ನಾಗರಾಜ್(65) ನಾಪತ್ತೆಯಾಗಿರುವ ಅಂಚೆ ಕಚೇರಿ ನೌಕರ.ಈತ ಹೆಚ್‍ಎಎಲ್ ಅಂಚೆ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದು,ಪತ್ನಿ ಮಕ್ಕಳನ್ನು ಬಿಟ್ಟು ಬೇರೆ ಕಡೆ ವಾಸವಿದ್ದರು. ಈತನ ಪತ್ನಿ ಲಕ್ಷಮ್ಮ ಅಂಚೆ ಕಚೇರಿ ಹೋಗಿ ಕೇಳಿದಾಗ ಆತ ಮನೆ ಬರುವುದಿಲ್ಲ. ಜೀವನಕ್ಕೆ ಹಣ ನೀಡುತ್ತೇನೆ ಎಂದು ಆಗಾಗ ಹಣ ಕಳುಹಿಸುತ್ತಿದ್ದ.ಹಣ ನೀಡುವುದನ್ನು ನಿಲ್ಲಿಸಿದಾಗ ಪತ್ನಿ ಲಕ್ಷಮ್ಮ ನ್ಯಾಯಾಲಯದಲ್ಲಿ ಜೀವನಾಂಶ ಕೇಸು ದಾಖಲಿಸಿದಳು.ಅದಾದ ಮೇಲೆ 2 ಲಕ್ಷ ಹಣ ಕೊಟ್ಟು ಮುತ್ಸಂದ್ರದಿಂದ ಹೋದವರು ವಾಪಸ್ ಬಂದಿಲ್ಲ.ಎಲ್ಲಿ ಹೋಗಿದ್ದಾರೆ ಎಂಬ ಸುಳಿವಿಲ್ಲ.
5.4 ಅಡಿ ಎತ್ತರ, ಎಣ್ಣೆ ಗೆಂಪು ಬಣ್ಣ,ಕೋಲು ಮುಖ,ಕನ್ನಡ ತೆಲುಗು ಭಾಷೆ ಮಾತನಾಡುತ್ತಾರೆ. ಈತನ ಪತ್ತೆಗಾಗಿ ಪತ್ನಿ ಲಕ್ಷಮ್ಮ ಅನುಗೊಂಡಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾಳೆ.

ಮತ್ತೊಂದು ಪ್ರಕರಣದಲ್ಲಿ ಅನುಗೊಂಡಹಳ್ಳಿಯಲ್ಲಿ ಬಿಸ್ಕೆಟ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಸುಬೋದ್ ಕುಮಾರ್(28) ಕೆಲಸಕ್ಕೆ ಹೋಗುವುದಾಗಿ ಹೇಳಿ ಹೋದವನು ವಾಪಸ್ ಬಂದಿಲ್ಲ.5.6 ಅಡಿ ಎತ್ತರ,ಕೆಂಪು ಬಣ್ಣ,ಕೋಲು ಮುಖ,ಹಿಂದಿ ಭಾಷೆ ಮಾತನಾಡುತ್ತಾನೆ. ಈತನನ್ನು ಪತ್ತೆ ಹಚ್ಚುವಂತೆ ಲತಾ ಎಂಬಾಕೆ ದೂರು ನೀಡಿದ್ದಾರೆ.

ಅನುಗೊಂಡಹಳ್ಳಿ ಹೋಬಳಿ ಕಲ್ಕುಂಟೆ ಅಗ್ರಹಾರದ ಕರಿಯಪ್ಪ(45) ನಾಪತ್ತೆಯಾಗಿದ್ದು, ಈತ ಬುದ್ಧಿಮಾಂದ್ಯನಾಗಿದ್ದ ಕಾರಣ ಈತ ಎಲ್ಲೆಂದರಲ್ಲಿ ಮಲಗುತ್ತಿದ್ದ. ಕಳೆದ ಆ.25 ರಂದು ಮನೆಯಲ್ಲಿ ಬಿಟ್ಟು ಹೋದವರು ವಾಪಸ್ಸಾಗಿಲ್ಲ ಎಂದು ಪತ್ನಿ ಶಾಂತಮ್ಮ ಅನುಗೊಂಡಹಳ್ಳಿ ಪೊಲೀಸರಿಗೆ ದೂರು ನೀಡಿದ್ದಾರೆ.5.4 ಅಡಿ ಎತ್ತರ,ಗೋಧಿ ಮೈಬಣ್ಣ,ಕನ್ನಡ ಭಾಷೆ ಮಾತನಾಡುತ್ತಾನೆ.
ಮೇಲ್ಕಂಡ ವ್ಯಕ್ತಿಗಳು ಎಲ್ಲಿಯಾದರೂ ಕಂಡಲ್ಲಿ ಅನುಗೊಂಡಹಳ್ಳಿ ಪೊಲೀಸ್ ಠಾಣೆ ಮೊ. ಸಂ.9480802464 ಸಂಪರ್ಕಿಸಲು ಪೊಲೀಸರು ಪ್ರಕಟಣೆಯಲ್ಲಿ ಕೋರಿದ್ದಾರೆ.

Facebook Comments