ಬೆಳಗಾವಿ ಹೊರವಲಯದಲ್ಲಿ ಕಾಡು ಕೋಣ ಪ್ರತ್ಯಕ್ಷ

ಈ ಸುದ್ದಿಯನ್ನು ಶೇರ್ ಮಾಡಿ

bilagaviಬೆಳಗಾವಿ, ನ.14- ಬೆಳಗಾವಿ ನಗರದ ಹೊರಭಾಗದಲ್ಲಿ ಕಾಡುಕೋಣ ಕಾಣಿಸಿಕೊಂಡು ಸ್ಥಳೀಯರನ್ನು ಚಕಿತಗೊಳಿಸಿದೆ. ಕಾಡಿನಲ್ಲಿನ ವನ್ಯ ಜೀವಿಗಳು ನಾಡಿನ ಕಡೆಗೆ ಬರುತ್ತಿರುವುದು ಜನರನ್ನು ಬೆಚ್ಚಿಬೀಳಿಸುವಂತೆ ಕೂಡ ಮಾಡುತ್ತಿದ್ದು, ರಾತ್ರಿ ವೇಳೆ ಓಡಾಡಲು ಭಯದ ವಾತಾವರಣ ಸೃಷ್ಟಿಯಾಗಿದೆ. ಕಳೆದ ಐದು ದಿನಗಳಿಂದ ಚಿರತೆ ಭಯದಲ್ಲಿದ್ದ ಜನತೆಗೆ ಈಗ ಕಾಡುಕೋಣ ಕಾಣಿಸಿಕೊಂಡು ಭಯ ಹುಟ್ಟಿಸಿದೆ.

ಬೆಳಗಾವಿ ಹೊರವಲಯದ ಭೂತರಾಮನಹಟ್ಟಿ ಬಳಿ ಕಾಡುಕೋಣವಿದ್ದು, ವಾರದಲ್ಲಿ ಮೂರನೆ ಬಾರಿ ಇದು ಕಾಣಿಸಿಕೊಂಡಿದೆ ಎಂದು ಹೇಳಲಾಗುತ್ತಿದೆ. ಕಾಕತಿ ಅರಣ್ಯ ಪ್ರದೇಶದಿಂದ ಬಂದಿರಬಹುದು ಎಂದು ಊಹಿಸಲಾಗಿದೆ. ಕಾಡುಕೋಣ ಕಂಡ ಇಲ್ಲಿನ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಕಾಡುಕೋಣವನ್ನು ಹಿಡಿಯುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಲಿ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

Facebook Comments