ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ : ಟ್ರಕ್ ಸ್ಫೋಟದಲ್ಲಿ 6 ಯೋಧರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

naxliರಾಯ್‍ಪುರ್, ನ.14 (ಪಿಟಿಐ)- ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಬಿಜಾಪುರ ಜಿಲ್ಲೆಯಲ್ಲಿ ಸೇನಾ ವಾಹನವನ್ನು ಗುರಿಯಾಗಿರಿಸಿ ಮಾವೋವಾದಿಗಳು ನಡೆಸಿದ ಬಾಂಬ್ ದಾಳಿಯಲ್ಲಿ ಆರು ಯೋಧರು ತೀವ್ರ ಗಾಯಗೊಂಡಿದ್ದಾರೆ. ಈ ದುಷ್ಕøತ್ಯದಲ್ಲಿ ನಾಗರಿಕರೊಬ್ಬರು ಸಹ ಗಾಯಗೊಂಡಿದ್ದಾರೆ. ಬಿಜಾಪುರ್ ಪಟ್ಟಣದಿಂದ ಏಳು ಕಿಮೀ ದೂರದಲ್ಲಿರುವ ಬಿಜಾಪುರ್ ಘಾಟಿ ಅರಣ್ಯ ಪ್ರದೇಶದಲ್ಲಿ ನಿನ್ನೆ ರಾತ್ರಿ ಯೋಧರಿದ್ದ ಟ್ರಕ್‍ನನ್ನು ನಕ್ಸಲರು ಸುಧಾರಿತ ಸ್ಪೋಟಕದ ಮೂಲಕ ಸ್ಫೋಟಿಸಿದರು.

ಈ ಕುಕೃತ್ಯದಲ್ಲಿ ಆರು ಯೋಧರು ಮತ್ತು ಓರ್ವ ನಾಗರಿಕ ತೀವ್ರ ಗಾಯಗೊಂಡಿದ್ದಾರೆ ಎಂದು ಉಪ ಪೊಲೀಸ್ ಮಹಾ ನಿರೀಕ್ಷಕ(ನಕ್ಸಲ್ ನಿಗ್ರಹ ಕಾರ್ಯಾಚರಣೆ) ಸುಂದರ್ ರಾಜ್ ತಿಳಿಸಿದ್ದಾರೆ. ಗಡಿ ಭದ್ರತಾ ಪಡೆ(ಬಿಎಸ್‍ಎಫ್)ಯ 114ನೆ ಬೆಟಾಲಿಯನ್‍ನ ಐವರು ಯೋಧರು, ಜಿಲ್ಲಾ ಮೀಸಲು ದಳದ(ಡಿಆರ್‍ಜಿ) ಓರ್ವ ಯೋಧ ಮತ್ತು ನಾಗರಿಕನೊಬ್ಬ ತೀವ್ರ ಗಾಯಗೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ. ತೀವ್ರ ಗಾಯಗೊಂಡವರಲ್ಲಿ ಇಬ್ಬರ ಸ್ಥಿತಿ ಶೋಚನೀಯವಾಗಿದೆ.

Facebook Comments