ಸರ್ಕಾರಿ ಕೆಲಸ ಸಿಕ್ತು ಅಂತ ಇರೋ ಕೆಲಸ ಬಿಟ್ಟು ಬೀದಿಗೆ ಬಂದ ಉದ್ಯೋಗಾಕಾಂಕ್ಷಿಗಳು..!

ಈ ಸುದ್ದಿಯನ್ನು ಶೇರ್ ಮಾಡಿ

Govt--01

ಬೆಂಗಳೂರು, ನ.14- ಕಳೆದ 19 ತಿಂಗಳಿಂದ ಕೆಲಸ ಸಿಕ್ಕೇಬಿಟ್ಟಿತೆಂದು ಹಗಲಿರುಳು ಕಾಯುತ್ತಿರುವ ನೂರಾರು ಉದ್ಯೋಗಾಂಕ್ಷಿಗಳು ಕೃಷಿ ಇಲಾಖೆಯವರ ಆಮೆಗತಿ ನೇರ ನೇಮಕಾತಿ ಪ್ರಕ್ರಿಯೆಯಿಂದಾಗಿ ಆತಂಕಕ್ಕೆ ಒಳಗಾಗಿ ಬೇರೆ ದಾರಿ ಇಲ್ಲದೆ ಧರಣಿ ಹಾದಿ ಹಿಡಿದಿದ್ದಾರೆ. ಕೃಷಿ ಇಲಾಖೆಯಲ್ಲಿ ಕಳೆದ 19 ತಿಂಗಳಿನಿಂದ ನೇರ ನೇಮಕ ಪ್ರಕ್ರಿಯೆ ನಡೆಯುತ್ತಲೇ ಇದೆ. ಆದರೂ ಹಗಲು- ಇರುಳೂ ಇಂದಲ್ಲ ನಾಳೆ ಉದ್ಯೋಗ ಸಿಕ್ಕೇ ಸಿಗುತ್ತದೆ ಎಂದು ಚಾತಕಪಕ್ಷಿಗಳಂತೆ ನೂರಾರು ಮಂದಿ ಕಾಯುತ್ತಲೇ ಇದ್ದಾರೆ.

ಆದರೆ, ಅಧಿಕಾರಿಗಳ ವಿಳಂಬ ನೀತಿಯೊ ಮತ್ತೇನು ಕಾರಣವೊ ನೇರ ನೇಮಕ ಪ್ರಕ್ರಿಯೆ ದಿನವೂ ನಡೆಯುತ್ತಿದೆ. ಆದರೆ, ಕೊನೆಮುಟ್ಟಿಲ್ಲ. ಕಾಯುವವರು ಕಾಯುತ್ತಲೇ ಇದ್ದಾರೆ. ಕೃಷಿ ಇಲಾಖೆಯಲ್ಲಿ ಸರ್ಕಾರಿ ಕೆಲಸ ಸಿಗುತ್ತದೆಂದು ಕನಸು ಹೊತ್ತವರು ಭಮನಿರಸನಗೊಂಡಿದ್ದಾರೆ. ಈಗ ಏನೂ ಮಾಡಲು ತೋಚದೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಬೇರೆ ದಾರಿಕಾಣದೆ ಶೀಘ್ರ ಆದೇಶ ಪತ್ರ ನೀಡಬೇಕೆಂದು ಕೃಷಿ ಇಲಾಖೆ ಮುಂದೆ ಧರಣಿ ಪ್ರಾರಂಭಿಸಿದ್ದಾರೆ.

2017ರ ಫೆಬ್ರವರಿಯಲ್ಲಿ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು-66, ಕೃಷಿ ಅಧಿಕಾರಿ-373, ಸಹಾಯಕ ಕೃಷಿ ಅದಿಕಾರಿ-169 ಹುದ್ದೆಗಳಿಗೆ ನೇರ ನೇಮಕ ಮಾಡಲು ಅಧಿಸೂಚನೆ ಹೊರಡಿಸಿತ್ತು. ಅಲ್ಲದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸ್ಪರ್ಧಾತ್ಮಕ ಪರೀಕ್ಷೆಯೂ ನಡೆದಿತ್ತು. 2018ರ ಫೆಬ್ರವರಿಯಲ್ಲಿ ಮೆರಿಟ್ ಆಧಾರದಲ್ಲಿ ದಾಖಲಾತಿ ಪರಿಶೀಲನೆ ನಡೆಸಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಮಾರ್ಚ್‍ನಲ್ಲೂ ಅಂತಿಮ ಆಯ್ಕೆ ಪಟ್ಟಿಯನ್ನು ಜೂನ್‍ನಲ್ಲಿ ಪ್ರಕಟಿಸಿತು. ಈ ಎಲ್ಲ ಪ್ರಕ್ರಿಯೆ ಪೂರ್ಣಗೊಂಡಿದೆ.

job--01

ಕೌನ್ಸಿಲಿಂಗ್ ನಡೆಸಿ ಸ್ಥಳ ನಿಯುಕ್ತಿಗೆ ಅವಕಾಶ ಕಲ್ಪಿಸಲಾಗಿದೆ. ಇಷ್ಟೆಲ್ಲ ಆದರೂ ಆದೇಶ ಮಾತ್ರ ನೀಡಿಲ್ಲ. ಹಾಗಾಗಿ ನೂರಾರು ಮಂದಿ ಕೃಷಿ ಅಧಿಕಾರಿಗಳಾಗುತ್ತೇನೆಂದು ಕನಸು ಕಟ್ಟಿಕೊಂಡು ಈಗ ಭ್ರಮನಿರಸಗೊಂಡು ಆದೇಶ ಪತ್ರಕ್ಕಾಗಿ ವಿಧಿ ಇಲ್ಲದೆ ಹೋರಾಟದ ಹಾದಿ ಹಿಡಿದಿದ್ದಾರೆ. ಇಲಾಖೆ ಮುಂದೆ ಉದ್ಯೋಗಾಕಾಂಕ್ಷಿಗಳು ಧರಣಿ ನಡೆಸುತ್ತಿರುವ ವಿಷಯ ಕೃಷಿ ಸಚಿವ ಶಿವಶಂಕರ್‍ರೆಡ್ಡಿ ಅವರ ಗಮನಕ್ಕೆ ಬಂದಿದೆಯಂತೆ. ಕೆಫಿಎಸ್‍ಸಿ ಅಭಿಪ್ರಾಯ ಅಗತ್ಯವೆಂದು ಹೇಳಲಾಗಿತ್ತು. ತಕ್ಷಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ.

ಇದರಿಂದೇನಾದರೂ ಉದ್ಯೋಗಾಕಾಂಕ್ಷಿಗಳಿಗೆ ಪ್ರಯೋಜನವಾದೀತೆ ಕಾದು ನೋಡಬೇಕಿದೆ. 1994ರಲ್ಲಿ ನೇಮಕಗೊಂಡವರಿಗೆ ಇಲ್ಲಿ ತನಕ ಬಡ್ತಿ ಸಿಕ್ಕಿಲ್ಲ. ಇವರಿಗೆ ಬಡ್ತಿ ನೀಡದೆಯೇ ಹೊಸ ನೇಮಕ ಮಾಡಿದರೆ ಸರಿಹೋಗುವುದಿಲ್ಲ. ಮೀಸಲ ಬಡ್ತಿ ವಿಚಾರದಲ್ಲಿ ಬಿ.ಕೆ.ಪವಿತ್ರಾ ಪ್ರಕರಣ ನ್ಯಾಯಾಲಯದಲ್ಲಿರುವುದರಿಂದ ಬಡ್ತಿ ಪ್ರಕ್ರಿಯೆಯೇ ನಡೆಯುತ್ತಿಲ್ಲ. ಇದೆಲ್ಲ ಪ್ರಕರಣ ಬಗೆಹರಿಯುವತನಕ ಹೊಸ ನೇಮಕ ಮಾಡಬಾರದೆಂಬುದು ಈಗ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ಇರಾದೆಯಾಗಿದೆ.

ಒಂದು ವೇಳೆ ಬಡ್ತಿ ನೀಡುವ ಮುನ್ನ ಹೊಸ ನೇಮಕಗಳದರೆ ಅವರೆಲ್ಲ ಜೇಷ್ಠತೆ ಆಧಾರದಲ್ಲಿಯೂ ಮುಂದಿರುತ್ತಾರೆ. ಮುಂದಿನ ದಿನಗಳಲ್ಲಿ ಹೊಸಬರ ನಂತರ ಅವಕಾಶಗಳು ತಮಗೆ ಸಿಗುತ್ತವೆ ಎಂಬ ಕಾರಣಕ್ಕೆ ಹಾಲಿ ಸಿಬ್ಬಂದಿಗಳೇ ಕೃಷಿ ಇಲಾಖೆಯ ಮೇಲಾಧಿಕಾರಿಗಳ ಮೇಲೆ ಒತ್ತಡ ತಂದು ಹೊಸ ನೇಮಕ ಪ್ರಕ್ರಿಯೆ ಪಡೆದಿದ್ದಾರೆಂದು ಹೇಳಲಾಗುತ್ತಿದೆ. ಏನೇ ಆಗಲಿ ಸರ್ಕಾರ ಮಧ್ಯಪ್ರವೇಶಿಸಿ ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವ ಅಗತ್ಯವಿದೆ.

Facebook Comments

Sri Raghav

Admin