ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ದೊಡ್ಡಣ್ಣ ಟ್ರಂಪ್

ಈ ಸುದ್ದಿಯನ್ನು ಶೇರ್ ಮಾಡಿ

Trump--0001

ವಾಷಿಂಗ್ಟನ್, ನ.14- ಪ್ರತಿ ವರ್ಷದಂತೆ ಈ ಬಾರಿಯೂ ಅಮೆರಿಕದಲ್ಲಿ ದೀಪಾವಳಿ ಆಚರಿಸಲಾಗಿದೆ. ವಾಷಿಂಗ್ಟನ್‍ನ ಶ್ವೇತಭವನದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು. ಇಂದು ವೈಟ್‍ಹೌಸ್‍ನಲ್ಲಿ ನಡೆದ ದೀಪಾವಳಿ ಹಬ್ಬದ ಆಚರಣೆ ವೇಳೆ ದೀಪ ಹಚ್ಚುವ ಮೂಲಕ ಆಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಭಾರತ-ಅಮೆರಿಕ ಅತ್ಯಾಪ್ತ ರಾಷ್ಟ್ರಗಳಾಗಿವೆ.

ಮುಂದಿನ ದಿನಗಳಲ್ಲಿ ನಮ್ಮ ವಾಣಿಜ್ಯಾತ್ಮಕ ಸಂಬಂಧ ಮತ್ತಷ್ಟು ಬಲಗೊಳ್ಳಲಿದೆ. ನನ್ನ ಪ್ರಕಾರ ಭಾರತ ಕಠಿಣ ಮತ್ತು ಉತ್ತಮ ವಾಣಿಜ್ಯ ಸಮಾಲೋಚಕ ದೇಶವಾಗಿದೆ. ಭಾರತ ಮತ್ತು ಅಮೆರಿಕ ಬಾಂಧವ್ಯ ಮತ್ತಷ್ಟು ವೃದ್ಧಿಸಬೇಕು. ಇದಕ್ಕಾಗಿ ನಾನು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರಧಾನಿ ಮೋದಿ ನನ್ನ ಸ್ನೇಹಿತ. ಈಗ ಇವಾಂಕಾಗೂ ಸ್ನೇಹಿತರಾಗಿದ್ದಾರೆ ಎಂದು ಹೇಳಿದರು.

ಅಂತೆಯೇ ನಮ್ಮ ಸರ್ಕಾರ ಭಾರತದೊಂದಿಗಿನ ವಣಿಕ್ಯಾತ್ಮಕ ಸಂಬಂಧ ಉತ್ತಮಗೊಳಿಸಲು ಸಾಕಷ್ಟು ಶ್ರಮಿಸುತ್ತಿದೆ. ಭಾರತ ಮತ್ತು ಭಾರತೀಯ ಪ್ರಜೆಗಳಿಗೆ ಸಂಬಂಧಿಸಿದಂತೆ ತಮಗೆ ಅಪಾರ ಗೌರವವಿದ್ದು, ಇದೇ ಸ್ನೇಹ-ಸಂಬಂಧವನ್ನು ಮುಂದುವರೆಸಲು ಇಚ್ಛಿಸುತ್ತೇವೆ ಎಂದು ಹೇಳಿದರು.

ಇನ್ನು ಕಾರ್ಯಕ್ರಮದಲ್ಲಿ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ ಟ್ರಂಪ್ ಸೇರಿದಂತೆ ಅಮೆರಿಕ ಸರ್ಕಾರದ ಭಾರತೀಯ ಮೂಲದ ಕಾರ್ಯದರ್ಶಿಗಳು, ಅಧಿಕಾರಿಗಳು ಸೇರಿದಂತೆ ಭಾರತ ಮೂಲದ ಹಲವು ಗಣ್ಯರು ಉಪಸ್ಥಿತರಿದ್ದರು.

Facebook Comments

Sri Raghav

Admin