ಎನ್‍ಕೌಂಟರ್’ನಲ್ಲಿ ಪಾಕ್ ಉಗ್ರನ ಹತ್ಯೆ, ಭಾರೀ ಶಸ್ತ್ರಾಸ್ತ್ರ ವಶ

ಈ ಸುದ್ದಿಯನ್ನು ಶೇರ್ ಮಾಡಿ

armyಶ್ರೀನಗರ, ನ.14 (ಪಿಟಿಐ)- ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ಬೇಟೆ ಕಾರ್ಯಾಚರಣೆಯನ್ನು ಯೋಧರು ತೀವ್ರಗೊಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀ4ರದ ಅಕ್ನೂರ್ ವಲಯದ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ಬಳಿ ಭದ್ರತಾ ಪಡೆಗಳೊಂದಿಗೆ ಇಂದು ನಸುಕಿನಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಪಾಕಿಸ್ತಾನಿ ಉಗ್ರನೊಬ್ಬ ಹತನಾಗಿದ್ದಾನೆ. ಮೃತ ಉಗ್ರನಿಂದ ಕಲಾಶ್ನಿಕೋವ್ ರೈಫಲ್ ಮತ್ತು ಪಿಸ್ತೂಲ್ ಸೇರಿದಂತೆ ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಭಾರತೀಯ ಸೇನೆಯ ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಪಾಕಿಸ್ತಾನ ಕದನ ವಿರಾಮ ಉಲ್ಲಂಘಿಸಿ ಭಾರತೀಯ ಸೇನೆ ವೇಳೆ ಅಪ್ರಚೋದಿತ ಗುಂಡಿನ ದಾಳಿಗಳನ್ನು ನಡೆಸುತ್ತಿದ್ದ ಸಂದರ್ಭದಲ್ಲೇ ಉಗ್ರಗಾಮಿ ಭಾರತದ ಗಡಿಯೊಳಗೆ ನುಸುಳಿದ್ದ. ಅಕ್ನೂರ್ ಸೆಕ್ಟರ್‍ನಲ್ಲಿ ಅಡಗಿದ್ದ ಈತನ ಬಗ್ಗೆ ಮಾಹಿತಿ ಸಂಗ್ರಹಿಸಿ ಆ ಪ್ರದೇಶದಲ್ಲಿ ಶೋಧ ನಡೆಸುತ್ತಿದ್ದಾಗ ಯೋಧರ ಮೇಲೆ ಉಗ್ರ ಗುಂಡು ಹಾರಿಸಿದ. ಯೋಧರು ಪ್ರತಿಯಾಗಿ ಗುಂಡಿನ ದಾಳಿ ಮೂಲಕ ಉತ್ತರ ನೀಡಿದಾಗ ಎನ್‍ಕೌಂಟರ್ ನಡೆಯಿತು. ಈ ಕಾಳಗದಲ್ಲಿ ಪಾಕ್ ಉಗ್ರ ಹತನಾದ ಎಂದು ವಕ್ತಾರರು ಮಾಹಿತಿ ನೀಡಿದ್ದಾರೆ.

Facebook Comments