ಪರಪ್ಪನ ಅಗ್ರಹಾರದಿಂದ ಹೊರಬಂದ ನಂತರ ಕೆಂಡಾಮಂಡಲವಾಗಿದ್ದ ರೆಡ್ಡಿ ಹೇಳಿದ್ದೇನು..?

ಈ ಸುದ್ದಿಯನ್ನು ಶೇರ್ ಮಾಡಿ

Janardhan-Reddy--01

ಬೆಂಗಳೂರು. ನ.14 : ನನ್ನ ವಿರುದ್ಧ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, 12 ವರ್ಷಗಳ ಹಿಂದಿನ ಆರೋಪಕ್ಕೆ ಸೇಡಿನ ಷಡ್ಯಂತ್ರ ನಡೆಸಿ ಬಂಧಿಸುವಂತೆ ಪೊಲೀಸರಿಗೆ ಒತ್ತಡ ಹಾಕಿದ್ದಾರೆ. ಇನ್ನು ಮುಂದೆ ನಾನೂ ಕೂಡ ಸುಮ್ಮನಿರುವುದಿಲ್ಲ ಎಂದು ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಗುಡುಗಿದ್ದಾರೆ. ಅಂಬೆಡೆಂಟ್ ವಂಚನೆ ಪ್ರಕರಣದಲ್ಲಿ ನ್ಯಾಯಾಲಯದಿಂದ ಷರತ್ತು ಬದ್ಧ ಜಾಮೀನು ಸಿಕ್ಕ ನಂತರ ಪರಪ್ಪನ ಅಗ್ರಹಾರ ದ ಜೈಲಿನಿಂದ ಬಿಡುಗಡೆಯಾದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದರು.

ಕುಮಾರಸ್ವಾಮಿ ಅವರು ನನ್ನನ್ನು ಜೈಲಿಗೆ ಕಳುಹಿಸುವ ಮೂಲಕ ನನ್ನ ವಿರುದ್ಧದ 12 ವರ್ಷಗಳ ಹಿಂದಿನ ದ್ವೇಷವನ್ನು ತೀರಿಸಿಕೊಂಡಿದ್ದಾರೆ.2006ರಲ್ಲಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ 150 ಕೋಟಿ ರೂ. ಲಂಚದ ಆರೋಪ ಮಾಡಿದ್ದೆ, ಆ ನಂತರ ನನ್ನ ಮೇಲೆ ಸುಳ್ಳು ಕೇಸ್ ಹಾಕಿದ್ದರು. ರೆಡ್ಡಿಯನ್ನು ಬಂಧನ ಮಾಡಬೇಕು ಎಂಬುದು ಕುಮಾರಸ್ವಾಮಿ ಅವರ ಆಸೆಯಾಗಿತ್ತು. ಈಗ 12 ವರ್ಷಗಳ ನಂತರ ಅವರು ನನ್ನನ್ನು ಬಂಧಿಸುವ ಮೂಲಕ ತಮ್ಮ ಆಸೆಯನ್ನು ಪೂರೈಸಿಕೊಂಡಿದ್ದಾರೆ ಎಂದು ರೆಡ್ಡಿ ಆರೋಪಿಸಿದರು.

ನಾನು ಪ್ರಾಮಾಣಿಕವಾಗಿದ್ದೇನೆ, ಸತ್ಯ ನನ್ನ ಪರವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ ಯಾರು ಏನೇ ಎಂದರೂ ನೋಡೋಕೆ ಭಗವಂತ ಇದ್ದಾನೆ ಎಂದು ತಿಳಿಸಿದರು. ನನ್ನ ವಿರುದ್ಧ ಸುಳ್ಳು ಕೇಸ್ ದಾಖಲೆ ಮಾಡಿ ಷಡ್ಯಂತ್ರ ರೂಪಿಸಿದ್ದಾರೆ. ಪ್ರಾಮಾಣಿಕ ಅಧಿಕಾರಿಗಳನ್ನ ಮುಂದಿಟ್ಟುಕೊಂಡು ಅವರು ಈ ರೀತಿಯಾಗಿ ನಡೆದುಕೊಂಡಿದ್ದಾರೆ ಎಂದರು. ಅವರನ್ನ ಪ್ರಾಮಾಣಿಕತೆ ಮೆಚ್ಚಿ ಜಮ್ಮು-ಕಾಶ್ಮೀರಕ್ಕೆ ವರ್ಗಾವಣೆ ಮಾಡುವಂತೆ ಸಿಎಂಗೆ ಮನವಿ ಮಾಡುವ ಮೂಲಕ ಬಂದನ ಪ್ರಹಸನಕ್ಕೆ ವ್ಯಂಗ್ಯವಾಡಿದರು.

ನಾನು ಪ್ರಾಮಾಣಿಕವಾಗಿದ್ದೇನೆ, ಸತ್ಯ ನನ್ನ ಪರವಾಗಿದೆ. ಯಾವುದೇ ತಪ್ಪು ಮಾಡದಿದ್ದರೂ ನನ್ನನ್ನು ಜೈಲಿಗೆ ಕಳುಹಿಸಲಾಗಿದೆ. ತನಿಖೆಯ ದಿಕ್ಕು ತಪ್ಪಿಸಲು ಷಡ್ಯಂತ್ರ ನಡೆಯುತ್ತಿದೆ ಯಾರು ಏನೇ ಎಂದರೂ ನೋಡೋಕೆ ಭಗವಂತ ಇದ್ದಾನೆ ಎಂದು ತಿಳಿಸಿದರು. ನನ್ನನ್ನ ಬೆಂಗಳೂರಿನಿಂದ ಓಡಿಸಬೇಕು ಎಂದು ಷಡ್ಯಂತ್ರ ನಡೆಸಲಾಗಿತ್ತು.ಸಿಸಿಬಿ ನನ್ನ ತನಿಖೆ ನಡೆಸುವಾಗ ಅವರಿಗೆ ಸಾಕಷ್ಟು ಒತ್ತಡ ಇತ್ತು. ಪದೇ ಪದೇ ಅವರಿಗೆ ಫೋನ್ ಬರುತ್ತಾ ಇತ್ತು.  ನನ್ನ ಜೀವಕ್ಕೆ ಅಪಾಯವಿದೆ. ನಾನು ಸ್ವತಃ ಕುಮಾರಸ್ವಾಮಿಗೆ ಹೇಳಿದ್ದೆ. ಆದ್ರೆ ಇದುವರೆಗೂ ಯಾವುದೇ ಭದ್ರತೆ ಒದಗಿಸಿಲ್ಲ. ನನ್ನ ಜೀವಕ್ಕೆ ಅಪಾಯ ಆದರೆ ಯಾರೂ ಹೊಣೆ? ನನ್ನ ಕುಟುಂಬದ ಜೊತೆ ನೆಮ್ಮದಿಯಾಗಿ ಬದುಕೋಕೆ ಬಿಡ್ತಿಲ್ಲ. ಪದೇ ಪದೇ ನನ್ನ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಈ ರಾಜ್ಯದಲ್ಲಿ ನನ್ನ ಪತ್ರಕ್ಕೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ತಮ್ಮ ಅಳಲು ತೋಡಿಕೊಂಡರು.

ನಾನು ಎಲ್ಲೂ ನಾಪತ್ತೆಯಾಗಿರಲಿಲ್ಲ . ಸಿಸಿಬಿ ನೋಟಿಸ್ ನೀಡಿದ ಮೇಲೆ ಹಾಜರಾಗೋಣ ಅನ್ಕೊಂಡಿದ್ದೆ. ನಾನು ಮೊಳಕಾಲ್ಮೂರಿನಲ್ಲೇ ಇದ್ದೆ, ಆಮೇಲೆ ಬೆಂಗಳೂರು ಬಂದಿದ್ದೆ. ಸಿಸಿಬಿ ಆಫೀಸರು ಅಧಿಕಾರಿಗಳು ನನ್ನನ್ನು ತುಂಬಾ ಹೀನಾಯವಾಗಿ ನಡೆಸಿಕೊಂಡರು.ನನಗೆ ಈ ಮುಂಚೆನೇ ಅಧಿಕಾರಿಯೊಬ್ಬರು ಸುರಕ್ಷಿತವಾಗಿ ಎಂದು ಹೇಳಿದ್ದರು ‌ಆದರೆ,ನಾನು ಏನೂ ತಪ್ಪು ಮಾಡಿಲ್ಲ, ಹಾಗಾಗಿ ಎಲ್ಲೂ ಹೋಗಿಲ್ಲ ಎಂದು ರೆಡ್ಡಿ ವಿವರವಾಗಿ ಹೇಳಿದರು.  ನಾನು ಎನೋಬಲ್ ಸಂಸ್ಥೆಯಿಂದ ಹೊರಬಂದಾಗ ನನ್ನ ಬಳಿ 4 ಕೋಟಿ ಹಣವಿತ್ತು. ಅದರ ಜೊತೆ ಬ್ಯಾಂಕ್ನಲ್ಲಿ 20 ಕೋಟಿ ಸಾಲ ಪಡೆದು, 20 ಸೀಟ್ ಕೆಪಾಸಿಟಿ ವಿಮಾನಗಳನ್ನ ತಗೊಂಡು ಬಳ್ಳಾರಿ, ಹುಬ್ಬಳ್ಳಿ ಮತ್ತು ತಿರುಪತಿ ಈ ಭಾಗಗಳಲ್ಲಿ ಆಪರೇಟ್ ಮಾಡಬೇಕು ಅಂದ್ಕೊಂಡಿದ್ದೆ. ಇದಕ್ಕಾಗಿ ನನ್ನ ಮಗನ ಹೆಸರಿನಲ್ಲಿ ಒಂದು ಸಂಸ್ಥೆಯನ್ನ ಬೆಂಗಳೂರಿನಲ್ಲಿ ತೆರೆಯಬೇಕು ಅಂತಾ ಯೋಜಿಸಿದ್ದೆ. ಆ ಸಂದರ್ಭದಲ್ಲಿ ಅನಂತ್ಕುಮಾರ್ ನನ್ನ ಮನೆಗೆ ಬಂದಿದ್ದರು. ಆ ಸಮಯದಲ್ಲಿ ನನ್ನ ತಾಯಿ ನಿನ್ನ ಹೊಸ ವ್ಯವಹಾರದ ಬಗ್ಗೆ ನಿನ್ನ ಅಣ್ಣನ ಬಳಿ ಹೇಳು ಅಂದರು.

ಆನಂತರ ಅನಂತ್ ಕುಮಾರ್‌ ಅವರಿಗೆ ಹೊಸ ವಿಮಾನಯಾನ ಸಂಸ್ಥೆ ಆರಂಭಿದುವ ಬಗ್ಗೆ ತಿಳಿಸಿದಾಗ ಅವರು, ನೀನು ನೆಲದ ಮೇಲೆ ನಡಿ, ಆಕಾಶದಲ್ಲಿ ಹಾರಾಡಬೇಡ ಅಂದರು.ಹಣವನ್ನ ಹಾಗೇ ಇಟ್ಕೊ. ಮುಂದೆ ಒಳ್ಳೇ ವ್ಯವಹಾರದಲ್ಲಿ ತೊಡಗಿಸು ಅಂತಾನೂ ಹೇಳಿದ್ರು. ಅವರ ಸಲಹೆ ಮೇರೆಗೆ, ವಿಮಾನ ಖರೀದಿಸೋ ಯೋಜನೆ ಕೈಬಿಟ್ಟೆ. ಬಳಿಕ ಅಂದೇ ಹಣವನ್ನ ಓಬಳಾಪುರಂ ಮೈನಿಂಗ್ನಲ್ಲಿ ಹೂಡಿಕೆ ಮಾಡ್ದೆ. ಅದೇ ಸಮಯಕ್ಕೆ ಕಬ್ಬಿಣದ ಅದಿರಿಗೆ ಜಾಗತಿಕ ಮಟ್ಟದಲ್ಲಿ ಡಿಮ್ಯಾಂಡು ಬಂತು. ನನ್ನ ಮೈನಿಂಗ್‌ ಕೂಡ ಲಾಭ ತಂದುಕೊಡ್ತು. ಅದರಿಂದಾನೆ ನಾನು ಇಷ್ಟು ದೊಡ್ಡವನಾಗಲು ಕಾರಣವಾಯಿತು. ಹೀಗಂತ ಜನಾರ್ದನ ರೆಡ್ಡಿ, ತಾವು ಗಣಿಧಣಿ ಆದ ಪರಿಯನ್ನ ಬಿಡಿಸಿಟ್ಟರು.  ಇದಕ್ಕೂ ಮೊದಲು ಇತ್ತೀಚೆಗೆ ನಿಧನರಾದ ಕೇಂದ್ರ ಸಚಿವ ಅನಂತಕುಮಾರ್ ಅವರೊಂದಿಗಿನ ಒಡನಾಟವನ್ನು ಸ್ಮರಿಸಿದ ಜನಾರ್ದನ ರೆಡ್ಡಿ, ಅವರ ನಿಧನಕ್ಕೆ ಸಂತಾಪ ಸೂಚಿಸಿದರು.

ಅನಂತಕುಮಾರ್ ಜೊತೆಗಿನ ತಮ್ಮ ಒಡನಾಟವನ್ನು ಸ್ಮರಿಸಿದರು. ಜೊತೆಗೆ ಬಿಜೆಪಿ ಪಕ್ಷದಲ್ಲಿ ತಾನು ಇಷ್ಟು ಎತ್ತರಕ್ಕೆ ಬೆಳೆಯಲು ಅವರು ನನ್ನ ಕೈಹಿಡಿದು ನಡೆಸಿದ್ದರು. ನಾನು ಇವತ್ತು ಈ ಮಟ್ಟಕ್ಕೆ ಬೆಳೆಯಲು ಕಾರಣ ಅನಂತ್ ಕುಮಾರ್. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ರೆಡ್ಡಿ ಹೇಳಿದರು.
ಈ ಮಧ್ಯೆ, ಅಣ್ಣನಂತಹ ಅನಂತಕುಮಾರ್ ಅವರನ್ನು ಕೊನೆಯ ಬಾರಿಗೆ ನೋಡಲು ನನಗೆ ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ನನಗೆ ಬಂಧನದ ದುಃಖಕ್ಕಿಂತ ಅನಂತಕುಮಾರ್ ಅವರನ್ನು ಕೊನೆಯ ಕ್ಷಣದಲ್ಲಿ ನೋಡಲಾಗಲಿಲ್ಲವಲ್ಲಾ ಎಂಬುದೇ ಹೆಚ್ಚು ನೋವಿನ ಸಂಗತಿಯಾಗಿದೆ ಎಂದು ದುಃಖತಪ್ತರಾದರು.

Facebook Comments