ಕೈ-ಕಾಲು ತೊಳೆಯಲು ಹೋದ ಬಾಲಕ ನೀರು ಪಾಲು

ಈ ಸುದ್ದಿಯನ್ನು ಶೇರ್ ಮಾಡಿ

water

ಕೆ.ಆರ್.ಪೇಟೆ, ನ.14- ಕೈ-ಕಾಲು ತೊಳೆಯಲು ಹೇಮಾವತಿ ನದಿಯ ನಾಲೆಗೆ ಇಳಿದ ಬಾಲಕನೊಬ್ಬ ನೀರುಪಾಲಾಗಿರುವ ಘಟನೆ ಕೆ.ಆರ್.ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ನಡೆದಿದೆ.ಅಕ್ಕಿಹೆಬ್ಬಾಳು ಗ್ರಾಮದ ಕುಮಾರ್ ಮತ್ತು ಪಾರ್ವತಮ್ಮ ದಂಪತಿ ಪುತ್ರ ವಿನೋದ್ ಕುಮಾರ್ (15) ಸಾವನ್ನಪ್ಪಿರುವ ಬಾಲಕ.

ಕೃಷ್ಣರಾಜಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದಲ್ಲಿರುವ ಹೇಮಾವತಿ ನದಿಯ ಮಂದಗೆರೆ ಬಲದಂಡೆ ನಾಲೆಗೆ ಇಂದು ಬೆಳಗ್ಗೆ ವಿನೋದ್ ಕುಮಾರ್ ಕೈಕಾಲು ತೊಳೆಯಲು ಇಳಿದಿದ್ದಾನೆ. ಆದರೆ ಕಾಲುವೆಯಲ್ಲಿ ನೀರು ರಭಸದಿಂದ ಹರಿಯುತ್ತಿದ್ದು, ನೀರಿನ ರಭಸಕ್ಕೆ ಆತ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಈಜು ತಜ್ಞರು ಮೃತದೇಹಕ್ಕಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ. ಅಕ್ಕಿಹೆಬ್ಬಾಳು ಹೊರಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿತ್ತು.

Facebook Comments