ಅಸ್ಥಿ ವಿಸರ್ಜನೆ ವಿಚಾರದಲ್ಲಿ ಮಾರಾಮಾರಿ ಯುವಕನಿಗೆ ಮಚ್ಚಿನಿಂದ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಶ್ರೀರಂಗಪಟ್ಟಣ, ನ.14-ಅಸ್ಥಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಯುವಕನೊಬ್ಬನ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಶ್ರೀರಂಗಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಸನ್ನ ಗಾಯಗೊಂಡ ಯುವಕ. ತಾಲೂಕಿನ ಗಂಜಾಂ ಸಮೀಪದ ಕಾವೇರಿ ತೀರದ ಸಂಗಮದಲ್ಲಿ ಅಸ್ಥಿ ವಿಸರ್ಜನೆಗೆ ಬಂದವರನ್ನು ಲಕ್ಷ್ಮಣ ಎಂಬುವರ ಗುಂಪು ತಮ್ಮ ಜಮೀನಿನ ಸಮೀಪ ಅಸ್ಥಿ ವಿಸರ್ಜನೆ ಮಾಡುವಂತೆ ಕರೆದೊಯ್ದಿದ್ದಾರೆ. ಈ ವೇಳೆ ಪ್ರಸನ್ನನ ಕಡೆಯವರ ಗುಂಪು ಧಾವಿಸಿ ಎಲ್ಲರನ್ನು ನೀನೇ ಕರೆದೊಯ್ದರೆ ನಾವು ಏನು ಮಾಡಬೇಕು ಎಂದು ಜಗಳ ತೆಗೆದಿದ್ದಾರೆ.

ಆಗ ಎರಡು ಯುವಕರ ಗುಂಪಿನ ನಡುವೆ ಗಲಾಟೆ ನಡೆದು ಘರ್ಷಣೆಯಾಗಿದೆ. ಇದು ವಿಕೋಪಕ್ಕೆ ತಿರುಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.  ನಂತರ ಒಂದು ಗುಂಪಿನ ಯುವಕ ಮತ್ತೊಂದು ಗುಂಪಿನ ಪ್ರಸನ್ನ ಎಂಬ ಯುವಕನಿಗೆ ಮಚ್ಚಿನಿಂದ ಹಲ್ಲೆ ನಡೆಸಿದ್ದು, ಇದರಿಂದ ತೀವ್ರವಾಗಿ ಪ್ರಸನ್ನ ಗಾಯಗೊಂಡಿದ್ದಾನೆ. ಈ ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಈ ಸಂಬಂಧ ಶ್ರೀರಂಗಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Facebook Comments