ಕ್ಯಾಲಿಫೋರ್ನಿಯಾದಲ್ಲಿ ನಿಲ್ಲದ ಕಾಡ್ಗಿಚ್ಚಿನ ರುದ್ರನರ್ತನ, 53ಕ್ಕೇರಿದ ಸಾವಿನ ಸಂಖ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

fIRE--02

ಪ್ಯಾರಾಡೈಸ್, ನ.14-ಅಮೆರಿಕದ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಇತಿಹಾಸದಲ್ಲೇ ಕಂಡು ಕೇಳರಿಯದ ವಿನಾಶಕಾರಿ ಕಾಡ್ಗಿಚ್ಚಿನ ರೌದ್ರಾವತಾರದ ಬೀಕರತೆಗೆ ಸಾವು-ನೋವು, ಆಸ್ತಿ-ಪಾಸ್ತಿ ಹಾನಿ ಹೆಚ್ಚಾಗುತ್ತಲೇ ಇದೆ. ಕಾಡಿನ ಬೆಂಕಿಗೆ ಈವರೆಗೆ ಬಲಿಯಾದವರ ಸಂಖ್ಯೆ 53ಕ್ಕೇರಿದೆ.

ಈ ಭೀಕರ ವಿಕೋಪದಲ್ಲಿ ನಾಪತ್ತೆಯಾಗಿರುವ 300ಕ್ಕೂ ಹೆಚ್ಚು ಜನರಿಗಾಗಿ ಶೋಧ ಮುಂದುವರಿದಿದೆ. ಸಾವು-ನೋವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವಿದೆ. ಸಹಸ್ರಾರು ಹೆಕ್ಟೇರ್ ಅರಣ್ಯ ಪ್ರದೇಶವನ್ನು ಆಪೋಷನ ತೆಗೆದುಕೊಳ್ಳುತ್ತಿರುವ ಕಾಡಿನ ಬೆಂಕಿಯನ್ನು ತಹಬದಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಈ ದುರ್ಘಟನೆಯಲ್ಲಿ ವನ್ಯಜೀವಿಗಳೂ ಮೃತಪಟ್ಟು, ವನಸಂಪತ್ತು ನಶಿಸಿವೆ.

ಕಳೆದ ಗುರುವಾರ ಭುಗಿಲೆದ್ದ ಕ್ಯಾಂಪ್ ಫೈರ್ ಹೆಸರಿನ ಅರಣ್ಯ ಬೆಂಕಿಯಿಂದ ಪ್ಯಾರಾಡೈಸ್ ನಗರ ಸರ್ವನಾಶವಾಗಿದೆ. ಅಲ್ಲಿದ್ದ ಬಹುತೇಕ ಮನೆಗಳೂ ಸೇರಿದಂತೆ 7,000ಕ್ಕೂ ಹೆಚ್ಚು ಕಟ್ಟಡಗಳು, ವಾಣಿಜ್ಯ ಮಳಿಗೆಗಳು ಮತ್ತು ಕಚೇರಿಗಳು ಸುಟ್ಟು ಭಸ್ಮವಾಗಿವೆ. ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿ ಕೆಲವೆಡೆ ತೊಂದರೆಗೆ ಸಿಲುಕಿದ್ದ ಸಹಸ್ರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಅತಂತ್ರರಾಗಿರುವ ನೂರಾರು ನಿರಾಶ್ರಿತರನ್ನು ರಕ್ಷಿಸುವ ಕಾರ್ಯ ಸಮರಸಜ್ಜಿನಂತೆ ಸಾಗಿದೆ.

fIRE--01 fIRE--03 fIRE--04

Facebook Comments

Sri Raghav

Admin