ಕಾಂಗ್ರೆಸ್‍ಗೆ ಸೇರಿದ ರಾಜಸ್ತಾನ ಬಿಜೆಪಿ ಸಂಸದ

ಈ ಸುದ್ದಿಯನ್ನು ಶೇರ್ ಮಾಡಿ

rajsthanನವದೆಹಲಿ, ನ.14-ಮುಖ್ಯಮಂತ್ರಿ ವಸುಂಧರಾ ರಾಜೆ ಅವರಿಗೆ ವಿಧಾನಸಭೆ ಚುನಾವಣೆಗೂ ಮುನ್ನವೇ ಭಾರಿ ಹಿನ್ನಡೆಯಾಗಿದೆ. ದೌಸಾ ಲೋಕಸಭಾ ಕ್ಷೇತ್ರದ ಸಂಸದ ಹರೀಶ್‍ಚಂದ್ರ ಮೀನಾ ಇಂದು ಬಿಜೆಪಿಗೆ ಕೈಕೊಟ್ಟು ಕಾಂಗ್ರೆಸ್ ಸೇರಿದ್ದಾರೆ.  ದೆಹಲಿಯಲ್ಲಿ ಇಂದು ರಾಜಸ್ತಾನ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಲ್ಹೋಟ್, ರಾಜಾಸ್ತಾನ ಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ಸಚಿನ್ ಪೈಲೆಟ್ ಹಾಗೂ ಎಐಸಿಸಿ ರಾಜ್ಯ ಉಸ್ತುವಾರಿ ಅವಿನಾಶ್ ಪಾಂಡೆ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಈ ಬೆಳವಣಿಗೆಯಿಂದ ರಾಜಸ್ತಾನದಲ್ಲಿ ಬಿಜೆಪಿಗೆ ಹಿನ್ನಡೆಯಾಗಿದೆ.

Facebook Comments